9 ದಿನಗಳಲ್ಲಿ 5,460 ರೂ. ಏರಿಕೆ; ಇಂದು ಹೆಚ್ಚಾದ ಹಣದಲ್ಲಿ 5 ದಿನ ಹೊಟ್ಟೆ ತುಂಬಾ ಊಟ ಮಾಡಬಹುದು!
Gold And Silver Price: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಚಿನ್ನದ ಬೆಲೆ 9 ದಿನಗಳಿಂದ ಏರಿಕೆಯಾಗುತ್ತಿದೆ. ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ದರಗಳ ವಿವರ ಇಲ್ಲಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಜೊತೆ ಚಿನ್ನದ ದರ ಏರಿಕೆಯಾಗುತ್ತಿದೆ. ಕಳೆದ 9 ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ. ಆಗಸ್ಟ್ 25ರಂದು ಕೊನೆಯ ಬಾರಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಆಗಸ್ಟ್ 31ರಂದು ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ
ಕಳೆದ 9 ದಿನಗಳಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 5,460 ರೂ.ಗಳಷ್ಟು ಏರಿಕೆಯಾಗಿದೆ. ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 880 ರೂ.ಗಳಷ್ಟು ಏರಿಕೆಯಾಗಿದೆ. ಇಂದು ಹೆಚ್ಚಳಗೊಂಡ ಹಣದಲ್ಲಿ ಬಡವರು ಐದು ದಿನ ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,805 ರೂಪಾಯಿ
8 ಗ್ರಾಂ: 78,440 ರೂಪಾಯಿ
10 ಗ್ರಾಂ: 98,050 ರೂಪಾಯಿ
100 ಗ್ರಾಂ: 9,80,500 ರೂಪಾಯಿ
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,697 ರೂಪಾಯಿ
8 ಗ್ರಾಂ: 85,576 ರೂಪಾಯಿ
10 ಗ್ರಾಂ: 1,06,970 ರೂಪಾಯಿ
100 ಗ್ರಾಂ: 10,69,700 ರೂಪಾಯಿ
ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 98,050 ರೂಪಾಯಿ, ಮುಂಬೈ: 98,050 ರೂಪಾಯಿ, ದೆಹಲಿ: 98,200 ರೂಪಾಯಿ, ಕೋಲ್ಕತ್ತಾ: 98,050 ರೂಪಾಯಿ, ಬೆಂಗಳೂರು: 98,050 ರೂಪಾಯಿ, ಹೈದರಾಬಾದ್: 98,050 ರೂಪಾಯಿ, ಸೂರತ್: 98,010 ರೂಪಾಯಿ, ಭುವನೇಶ್ವರ: 98,050 ರೂಪಾಯಿ, ಪಾಟ್ನಾ: 98,100 ರೂಪಾಯಿ, ಪುಣೆ: 98,050 ರೂಪಾಯಿ.
ಇಂದು ದೇಶದಲ್ಲಿ ಬೆಳ್ಳಿ ಬೆಲೆ
ಇಂದು 1 ಕೆಜಿ ಬೆಳ್ಳಿ ಬೆಲೆಯಲ್ಲಿ 900 ರೂಪಾಯಿಗಳಷ್ಟು ಏರಿಕೆಯಾಗಿದೆ. ಚಿನ್ನದ ಜೊತೆ ಬೆಳ್ಳಿ ದರವೂ ಸತತವಾಗಿ ಹೆಚ್ಚಾಗುತ್ತಲೇ ಇದೆ. ಇಂದಿನ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.
10 ಗ್ರಾಂ: 1,270 ರೂಪಾಯಿ
100 ಗ್ರಾಂ: 12,700 ರೂಪಾಯಿ
1000 ಗ್ರಾಂ: 1,27,000 ರೂಪಾಯಿ