ದಸರಾಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆ ಇಳಿಕೆ ಮಾಡಲಾಗಿದೆ. ಇನ್ನು ಮುಂದೆ ಎರಡು ಸ್ಲ್ಯಾಬ್ ಇರಲಿದೆ. ಕೇವಲ ಶೇಕಡಾ 5 ಹಾಗೂ 18 ಮಾತ್ರ. ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಲಿದೆ. 

ನವದೆಹಲಿ (ಸೆ.03) ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆ ಮೇಲೆ ನಿಂತು ಜಿಎಸ್‌ಟಿ ತೆರಿಗೆ ಇಳಿಕೆ ಘೋಷಿಸಿದ್ದರು. ಇದೀಗ ಈ ಘೋಷಣೆ ಜಾರಿಗೆ ಬರುತ್ತಿದೆ. ದಸರಾಗೆ ಅಂದರೆ ಸೆಪ್ಟೆಂಬರ್ 22ರಂದು ಹೊಸ ಜಿಎಸ್‌ಟಿ ನೀತಿ ಜಾರಿಯಾಗುತ್ತಿದೆ. ಹಲವು ಸುಧಾರಣೆ ತರಲಾಗಿದೆ. ಈ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹೊಸ ನೀತಿ ಕುರಿತು ಮಾಹಿತಿ ನೀಡಿದ್ದಾರೆ. ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 22ರಿಂದ ಕೇವಲ ಎರಡು ಸ್ಲ್ಯಾಬ್ ಮಾತ್ರ

ಸೆಪ್ಟೆಂಬರ್ 22ರಿಂದ ಹೊಸ ಜಿಎಸ್‌ಟಿ ನೀತಿ ಜಾರಿಗೆ ಬರುತ್ತಿದೆ. ಹೀಗಾಗಿ ಕೇವಲ ಎರಡು ಸ್ಲ್ಯಾಬ್ ಮಾತ್ರ ಇರಲಿದೆ. ಅಂದರೆ ಶೇಕಡಾ 5ರಷ್ಟು ಜಿಎಸ್‌ಟಿ ಹಾಗೂ ಶೇಕಡಾ 18 ರಷ್ಟು ಜಿಎಸ್‌ಟಿ. ಇನ್ನು ಆರೋಗ್ಯ ವಿಮೆ ಕುರಿತು ಚರ್ಚಿಸಾಗಿತ್ತು. ವಿಮೆ ಮೊತ್ತಗಳು ಇಳಿಕೆಯಾಗಲಿದೆ.

ಸ್ಲ್ಯಾಬ್ ಬದಲಾವಣೆ ಯಿಂದ ದರಗಳು ಬದಲಾವಣೆ ಆಗಲಿವೆ. ಸ್ಲ್ಯಾಬ್ ಗಳ ಬದಲಾವಣೆ ಗೆ ಕೌನ್ಸಿಲ್ ನ ಎಲ್ಲಾ ಸದಸ್ಯರು ಒಪ್ಪಿದ್ದಾರೆ ಎಂದು ನಿರ್ಮಾಲಾ ಸೀತಾರಾಮನ್ ಹೇಳಿದ್ದಾರೆ. ಸಾಮಾನ್ಯ ಮತ್ತು‌ ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳು ಮೇಲೆ ತೆರಿಗೆ ಶೇ.5 ಕ್ಕೆ ಇಳಿಕೆ ಮಾಡಲಾಗುತ್ತಿದೆ. ಯುಎಚ್ ಡಿ ಹಾಲು, ಚಪಾತಿ, ಪನ್ನೀರ್ ಸೇರಿ ಇವುಗಳ ಮೇಲೆ ತೆರಿಗೆ ಪೂರ್ಣ ವಿನಾಯಿತಿ ನೀಡಲಾಗಿದೆ.

ಎಲ್ಲಾ ಟಿವಿಗಳು ಶೇ .18, ವಾಷಿಂಗ್ ಮಿಷನ್ ಶೇ 18 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಲಾಗುತ್ತದೆ. ರೈತರ ಬಳಕೆ ಮಾಡುವ ವಸ್ತುಗಳ ಮೇಲೆ ತೆರಿಗೆ ಇಳಿಕೆ ಮಾಡಲಾಗುತ್ತಿದೆ. ಸಿಮೆಂಟ್ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇನ್ನು ಆರೋಗ್ಯ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. 33 ಜೀವ ರಕ್ಷಕ ಔಷಧಿಗಳ ಮೇಲೆ ವಿನಾಯಿತಿ ನೀಡಲಾಗಿದೆ. ಸಣ್ಣ ಕಾರು, ಬೈಕ್ ಗಳು

ಶೇ 18 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಕಾರು ಬೈಕ್‌ಗಳ ಮೇಲಿನ ಬೆಲೆ ಕಡಿಮೆಯಾಗಲಿದೆ. ಬಸ್ , ಟ್ರಕ್ಸ್, ಅಂಬ್ಯೂಲೆನ್ಸ್, ತ್ರಿಚಕ್ರ ವಾಹನಗಳು ಶೇ 18, ಆಟೋಮೊಬೈಲ್ ವಸ್ತುಗಳು ಶೇ 18ಕ್ಕೆ ಇಳಿಕೆಯಾಗುತ್ತಿದೆ.

ಶೇ 40 ಸ್ಲ್ಯಾಬ್ ಪರಿಚಯ

ಈ ಬಾರಿ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಹೊಸ ಸ್ಲ್ಯಾಬ್ ಸೇರಿಸಲಾಗಿದೆ. ಸಿಗರೇಟ್, ಗುಟ್ಕಾ, ಪಾನ್ ಮಸಾಲ, ತಂಬಾಕು ಪದಾರ್ಥಗಳ ಮೇಲೆ ಶೇಕಡಾ 40 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಮೂಲಕ ಈ ವಸ್ತುಗಳು ಮತ್ತಷ್ಟು ದುಬಾರಿಯಾಗಲಿದೆ.

48 ಸಾವಿರ ಕೋಟಿ ರೂಪಾಯಿ ಹೊರೆ

ಹೊಸ ಜಿಎಸ್‌ಟಿ ನೀತಿಯಿಂದ ಜನಸಾಮಾನ್ಯರಿಗೆ ಒಳಿತಾಗಲಿದೆ. ಜನಸಾಮಾನ್ಯರು ನೀಡುತ್ತಿದ್ದ ದುಬಾರಿ ತೆರಿಗೆಯಿಂದ ರಿಲೀಫ್ ಸಿಲಿದೆ. ಕಡಿಮೆ ಬೆಲೆಗೆ ವಸ್ತುಗಳು ಲಭ್ಯವಾಗಲಿದೆ. ಜೊತೆಗೆ ಔಷಧಿ ಸೇರಿದಂತೆ ಕೆಲ ವಸ್ತುಗಳ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಇದು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿ ಹೊರೆ ನೀಡಲಿದೆ. ಹೊಸ ಜಿಎಸ್‌ಟಿ ನೀತಿಯಿಂದ ಬರೋಬ್ಬರಿ 48 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ.