10:22 PM (IST) Jul 23

India Latest News Live 23 July 2026ಸೇಫ್ಟಿಯಲ್ಲಿ ಹೊಸ Maruti Brezza Facelift ಕ್ರಾಂತಿ, 5 ಸ್ಟಾರ್‌ BNCAP ರೇಟಿಂಗ್‌ನೊಂದಿಗೆ ಆಗಲಿದೆ ಲಾಂಚ್‌

ಮಾರುತಿ ಸುಜುಕಿ ತನ್ನ ಜನಪ್ರಿಯ ಬ್ರೆಝಾ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೆ ಸಿದ್ಧಪಡಿಸಿದ್ದು, ಇದು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಈ ನೂತನ ಮಾದರಿಯು ವೆಂಟಿಲೇಟೆಡ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾದಂತಹ ಪ್ರೀಮಿಯಂ ಫೀಚರ್‌ಗಳೊಂದಿಗೆ ಬರಲಿದೆ.

Read Full Story
10:05 PM (IST) Jul 23

India Latest News Live 23 July 2026'ಸೋನಮ್‌, ಇಟ್ಸ್‌ ಡನ್‌ ಬ್ರೋ' ವಾಂಗ್ಚುಕ್‌ಗೆ ಸಲ್ಲು ಮನವಿ; ವಿದ್ಯಾರ್ಥಿಗಳಿಗೆ ಪ್ರತಿಭಟನೆ ಅಂತ್ಯಗೊಳಿಸಲು ಹೇಳಿದ ಸಲ್ಮಾನ್‌ ಖಾನ್‌

ನೀಟ್ ಪರೀಕ್ಷೆ ಸೋರಿಕೆ ಖಂಡಿಸಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ನಟ ಸಲ್ಮಾನ್ ಖಾನ್ ಬೆಂಬಲ ಸೂಚಿಸಿದ್ದಾರೆ. ಪ್ರಧಾನಿಯವರೇ ಭರವಸೆ ನೀಡಿರುವುದರಿಂದ ಹೋರಾಟವನ್ನು ಅಂತ್ಯಗೊಳಿಸುವಂತೆ ವಾಂಗ್ಚುಕ್ ಅವರಿಗೆ ಮನವಿ ಮಾಡಿದ್ದಾರೆ.

Read Full Story
09:00 PM (IST) Jul 23

India Latest News Live 23 July 2026ಸರ್ಕಾರದ ಬಿಗ್‌ ಆಕ್ಷನ್‌, ಸಿಜೆಪಿ ಹಿಂಸಾಚಾರದಲ್ಲಿ ಭಾಗಿಯಾದವರ ಪಾಸ್‌ಪೋರ್ಟ್‌ ಕ್ಯಾನ್ಸಲ್‌?

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ನಂತರ, ದೆಹಲಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗುರುತಿಸಿ, ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯಿದೆ.

Read Full Story
08:13 PM (IST) Jul 23

India Latest News Live 23 July 2026ಸಚಿನ್‌ ದಾಖಲೆ ಮುರಿದು ವೈಭವ್‌ ಸೂರ್ಯವಂಶಿ ಚರಿತ್ರೆ, ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ನಿಟ್ಟುಸಿರು ಬಿಟ್ಟ ಶ್ರೇಯಸ್‌ ಅಯ್ಯರ್‌

15 ವರ್ಷದ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ, ಅಂತರರಾಷ್ಟ್ರೀಯ ಟಿ20ಯಲ್ಲಿ ಅರ್ಧಶತಕ ಗಳಿಸಿದ ಜಗತ್ತಿನ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Read Full Story
07:29 PM (IST) Jul 23

India Latest News Live 23 July 2026ಜಸ್ಟ್‌ 18 ಎಸೆತದಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ, ಸಿಕ್ಸರ್‌ ಎಷ್ಟಿತ್ತು?

15 ವರ್ಷದ ಭಾರತೀಯ ಯುವ ಆಟಗಾರ ವೈಭವ್ ಸೂರ್ಯವಂಶಿ, ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Read Full Story
07:06 PM (IST) Jul 23

India Latest News Live 23 July 2026Negative Energy - ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಅಂತ ತಿಳಿಯೋದು ಹೇಗೆ? ಇದರಿಂದ ಆಗುವ ಸಮಸ್ಯೆಗಳೇನು?

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳ ಪ್ರಕಾರ, ಮನೆಯ ವಾತಾವರಣ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾದರೆ ಸಮಸ್ಯೆಗಳು ತಪ್ಪಿದ್ದಲ್ಲ ಎನ್ನುತ್ತಾರೆ ಪಂಡಿತರು. ಹಾಗಾದ್ರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ತಿಳಿಯುವುದು ಹೇಗೆ? ನೋಡೋಣ

Read Full Story
06:38 PM (IST) Jul 23

India Latest News Live 23 July 2026CJP ಪ್ರತಿಭಟನಾಕಾರರಿಂದ ಕಲ್ಲು ತೂರಾಟ - ಗರ್ಭಿಣಿ ಪೊಲೀಸ್​ ಅಧಿಕಾರಿ ಮಗು ಸಾವು- ಏನಿದರ ಅಸಲಿಯತ್ತು

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದ್ದು, ಈ ವೇಳೆ ಗರ್ಭಿಣಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡು ಮಗುವನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ನಿಜವಾಗಿಯೂ ಆಗಿದ್ದೇನು? ಏನಿದರ ಅಸಲಿತ್ತು?

Read Full Story
05:40 PM (IST) Jul 23

India Latest News Live 23 July 20262027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ಭಾರತ ತಂಡ ಆಯ್ಕೆ ಮಾಡಿದ ಯುವರಾಜ್ ಸಿಂಗ್! ಆದ್ರೆ ಈ ಮ್ಯಾಚ್‌ ವಿನ್ನರ್‌ಗಿಲ್ಲ ಸ್ಥಾನ

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ 2027ರ ಏಕದಿನ ವಿಶ್ವಕಪ್‌ಗೆ ತಮ್ಮ ಸಂಭಾವ್ಯ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಶುಭ್‌ಮನ್ ಗಿಲ್‌ಗೆ ನಾಯಕತ್ವ ನೀಡಿದ್ದು, ಅನುಭವಿ ವೇಗಿ ಹಾಗೂ ಮ್ಯಾಚ್ ವಿನ್ನರ್ ಮೊಹಮ್ಮದ್ ಶಮಿಯನ್ನು ತಂಡದಿಂದ ಕೈಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.
Read Full Story
05:23 PM (IST) Jul 23

India Latest News Live 23 July 2026ಭಾರತದ 'ಆಪರೇಷನ್ ಸಿಂಧೂರ್' ಅದ್ಭುತ ಯಶಸ್ಸು, ಪಾಕ್ ಸೇನೆ ಸುಳ್ಳು ಹೇಳ್ತಿದೆ - ಇಮ್ರಾನ್ ಖಾನ್ ಸಹೋದರಿ ಸ್ಫೋಟಕ ಹೇಳಿಕೆ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ನೊರೀನ್ ನಿಯಾಜಿ, ಭಾರತದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಯಶಸ್ಸನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಸೇನೆಯ ಸೋಲನ್ನು ಮುಚ್ಚಿಹಾಕಲು ಪಾಕಿಸ್ತಾನ ಸುಳ್ಳು ಹೇಳುತ್ತಿದೆ ಮತ್ತು ಇಸ್ರೇಲ್ ಅನ್ನು ಗುರುತಿಸಲು ರಹಸ್ಯವಾಗಿ ಒಪ್ಪಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆ ಪಾಕಿಸ್ತಾನದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
Read Full Story
04:36 PM (IST) Jul 23

India Latest News Live 23 July 2026CJP Propest - ಕಾಕ್ರೋಚ್ ಪ್ರತಿಭಟನೆಯಲ್ಲಿ ಗಮನ ಸೆಳೆದ ಸೋನಿಯಾ ಸೆಹ್ರಾವತ್​ ಯಾರು? ಯಾಕಿಷ್ಟು ಚರ್ಚೆ

ದೆಹಲಿ ಪ್ರತಿಭಟನೆಯ ವೇಳೆ ಆರ್‌ಎಎಫ್ ಅಧಿಕಾರಿ ಸೋನಿಯಾ ಸೆಹ್ರಾವತ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಜಿರಳೆ ಚಿತ್ರವು ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರನ್ನು ಅವಮಾನಿಸಲಾಗಿದೆ ಎಂಬ ಆರೋಪದ ನಡುವೆ, ಅವರ ಹಿನ್ನೆಲೆ ಮತ್ತು ಸರ್ಕಾರಿ ನೌಕರರ ಸಾಮಾಜಿಕ ಮಾಧ್ಯಮ ಬಳಕೆಯ ನಿಯಮಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.
Read Full Story
04:03 PM (IST) Jul 23

India Latest News Live 23 July 2026ಭಾರತಕ್ಕೆ ಲಗ್ಗೆ ಇಟ್ಟ ಐಷಾರಾಮಿ ಎಲೆಕ್ಟ್ರಿಫೈಡ್ ಮರ್ಸಿಡಿಸ್, ಕಾರಿನ ದುಡ್ಡಲ್ಲಿ ಬೆಂಗಳೂರಲ್ಲಿ ಸೈಟ್ ತೆಗೆದು ಮನೆ ಕಟ್ಟಬಹುದು!

ಮರ್ಸಿಡಿಸ್-ಬೆನ್ಜ್ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಫೈಡ್ ಎಎಂಜಿ ಇ-ಕ್ಲಾಸ್, 'ಮರ್ಸಿಡಿಸ್-ಎಎಂಜಿ ಇ 53 ಹೈಬ್ರಿಡ್ 4ಮ್ಯಾಟಿಕ್+' ಅನ್ನು ಬಿಡುಗಡೆ ಮಾಡಿದೆ. ಈ ಐಷಾರಾಮಿ ಕಾರು ಶಕ್ತಿಶಾಲಿ 3.0-ಲೀಟರ್ ಇಂಜಿನ್ ಮತ್ತು ಕೇವಲ ಎಲೆಕ್ಟ್ರಿಕ್ ಮೋಡ್‌ನಲ್ಲಿ 100 ಕಿ.ಮೀ. ವರೆಗೆ ಚಲಿಸುತ್ತದೆ.

Read Full Story
03:48 PM (IST) Jul 23

India Latest News Live 23 July 2026ದೇಶಾದ್ಯಂತ 629 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ವಿಳಂಬ - 103 ಗುತ್ತಿಗೆದಾರರು ಬ್ಲ್ಯಾಕ್‌ಲಿಸ್ಟ್‌

ದೇಶದಲ್ಲಿ 629 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನಿಗದಿತ ಸಮಯ ಮೀರಿ ವಿಳಂಬವಾಗಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಕಳಪೆ ಕಾಮಗಾರಿ ನಡೆಸಿದ 103 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ..

Read Full Story
03:42 PM (IST) Jul 23

India Latest News Live 23 July 2026'ನಾನು ಅವನಿಗೆ ಹೆಚ್ಚಿಗೆ.....' - ಜಿಂಬಾಬ್ವೆ ಎದುರಿನ ಮೊದಲ ಮ್ಯಾಚ್‌ಗೂ ಮುನ್ನ ವೈಭವ್ ಸೂರ್ಯವಂಶಿ ಬಗ್ಗೆ ಶ್ರೇಯಸ್ ಅಯ್ಯರ್ ಅಚ್ಚರಿ ಹೇಳಿಕೆ

ಹರಾರೆ: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ, ಇಂದಿನಿಂದ ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಮೊದಲ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ.

Read Full Story
02:23 PM (IST) Jul 23

India Latest News Live 23 July 2026ಜನರನ್ನು ಮೂರ್ಖರನ್ನಾಗಿಸಬೇಡಿ, ನಾಟಕ ಬೇಡ - ರಾಹುಲ್ ಗಾಂಧಿ ವಿರುದ್ಧ ಸೋನಂ ವಾಂಗ್ಚುಕ್​ ಪತ್ನಿ ಕಿಡಿಕಿಡಿ

ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ನಡೆಸಿದ ನೀಟ್ ಹಗರಣ ಸಂಬಂಧಿತ ಪ್ರತಿಭಟನೆಯನ್ನು ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಟೀಕಿಸಿದ್ದಾರೆ. ಈ ಪ್ರತಿಭಟನೆಯು "ಪ್ರಾಮಾಣಿಕವಲ್ಲ" ಎಂದಿರುವ ಅವರು, ರಾಜಕಾರಣಿಗಳು ವಾಂಗ್ಚುಕ್ ಅವರ ಖ್ಯಾತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸೇರಬೇಕಿತ್ತು ಎಂದು ಹೇಳಿದ್ದಾರೆ.
Read Full Story
02:04 PM (IST) Jul 23

India Latest News Live 23 July 2026ಮಧುಚಂದ್ರದ ರಕ್ತ ಕಥೆ - ಸೋನಂ ಜಾಮೀನು ರದ್ದು- 3 ವಾರಗಳ ಒಳಗೆ ಶರಣು; 'ಸುಪ್ರೀಂ'​ ಹೇಳಿದ್ದೇನು?

ಹನಿಮೂನ್​ಗೆಂದು ಕರೆದೊಯ್ದು ಪತಿಯನ್ನೇ ಕೊಲೆ ಮಾಡಿಸಿದ ಆರೋಪ ಹೊತ್ತಿರುವ ಸೋನಮ್ ರಘುವಂಶಿಗೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಮೂರು ವಾರಗಳಲ್ಲಿ ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣವನ್ನು ಆರು ತಿಂಗಳೊಳಗೆ ಇತ್ಯರ್ಥಪಡಿಸುವಂತೆಯೂ ಪರೋಕ್ಷವಾಗಿ ಸೂಚನೆ ನೀಡಿದೆ.
Read Full Story
01:32 PM (IST) Jul 23

India Latest News Live 23 July 2026FIFA Team Of The Tournament - ಫಿಫಾ ವಿಶ್ವಕಪ್‌ ಇಲೆವೆನ್‌ ಪ್ರಕಟ - ಹ್ಯಾರಿ ಕೇನ್‌, ಯಮಾಲ್‌ ಔಟ್‌!

ಫಿಫಾ, ವಿಶ್ವಕಪ್ ಟೂರ್ನಿಯ ಅತ್ಯುತ್ತಮ ತಂಡವನ್ನು ಪ್ರಕಟಿಸಿದೆ. ಸ್ಪೇನ್ ಮತ್ತು ಫ್ರಾನ್ಸ್‌ನಿಂದ ತಲಾ ಮೂವರು ಆಟಗಾರರು ಹಾಗೂ ಅರ್ಜೆಂಟೀನಾದಿಂದ ಇಬ್ಬರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಫಿಫಾ ವಿಶ್ವಕಪ್‌ ಟೀಂ ಆಫ್‌ ದಿ ಟೂರ್ನಮೆಂಟ್‌ನಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ ಬನ್ನಿ.

Read Full Story
01:23 PM (IST) Jul 23

India Latest News Live 23 July 2026ಪಶ್ಚಿಮ ಏಷ್ಯಾ ಯುದ್ಧದ ಬಿಸಿ - ಭಾರತದ ದೈತ್ಯ ತೈಲ ಕಂಪನಿ ಬಿಪಿಸಿಎಲ್, ಎಚ್‌ಪಿಸಿಎಲ್ ಕೋಟ್ಯಂತರ ರೂಪಾಯಿ ಭಾರಿ ನಷ್ಟ!

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾದ ಕಾರಣ, ದೇಶೀಯ ಇಂಧನ ದರಗಳನ್ನು ಹೆಚ್ಚಿಸದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಚ್‌ಪಿಸಿಎಲ್ ₹12,265 ಕೋಟಿ ಮತ್ತು ಬಿಪಿಸಿಎಲ್ ₹3,962.13 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿವೆ.
Read Full Story
12:56 PM (IST) Jul 23

India Latest News Live 23 July 2026'ಶ್ರೀರಾಮನ ನಿಂದಿಸೋದು' -ಡೆಲ್ಲಿ ಪ್ರತಿಭಟನೆ ವಿರುದ್ಧ ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿರುವ ಅವರು, ಭಾರತದಲ್ಲಿ ನಡೆಯುವ ಪ್ರತಿಭಟನೆಗಳ ಹಿಂದೆ ಒಂದು ನಿರ್ದಿಷ್ಟ ಸ್ಕ್ರಿಪ್ಟ್ ಕೆಲಸ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

Read Full Story
12:56 PM (IST) Jul 23

India Latest News Live 23 July 2026ಜಿಂಬಾಬ್ವೆ ಎದುರು ಮೂವರ ಪಾದಾರ್ಪಣೆಗೆ ವೇದಿಕೆ ಸಜ್ಜು! ಭಾರತ-ಜಿಂಬಾಬ್ವೆ ಮ್ಯಾಚ್ ಆರಂಭದ ಸಮಯದಲ್ಲೂ ಮಹತ್ವದ ಬದಲಾವಣೆ

ಇಂದು ಹರಾರೆಯಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತ ತಂಡದಲ್ಲಿ ರಿಂಕು ಸಿಂಗ್ ಕಮ್‌ಬ್ಯಾಕ್ ಮಾಡಲಿದ್ದು, ಹಲವು ಯುವ ಆಟಗಾರರು ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದೆ.
Read Full Story
12:28 PM (IST) Jul 23

India Latest News Live 23 July 202650 ವರ್ಷಗಳ ಬಳಿಕ ತಮಿಳು ನಾಡಿನಲ್ಲಿ ಇತಿಹಾಸ ಮರುಕಳಿಸಿತು! CM Thalapathy Vijay ಅಂದ್ರೆ ಸುಮ್ನೇನಾ?

Actor Thalapathy Vijay: ಒಬ್ಬರು ಅಧಿಕಾರದಲ್ಲಿ ಮುಖ್ಯಮಂತ್ರಿ... ಇನ್ನೊಂದೆಡೆ ಥಿಯೇಟರ್‌ನಲ್ಲಿ ಮಾಸ್ ಹೀರೋ! 50 ವರ್ಷಗಳ ನಂತರ ತಮಿಳು ಚಿತ್ರರಂಗದ ಇತಿಹಾಸದಲ್ಲಿ ಈ ಅಪರೂಪದ ಘಟನೆ ಪುನರಾವರ್ತನೆಯಾಗಿದೆ. ಎಂಜಿಆರ್‌ನಿಂದ ದಳಪತಿ ವಿಜಯ್‌ವರೆಗೆ ನಡೆದ ಈ ಟ್ರೆಂಡಿಂಗ್ ಬೆಳವಣಿಗೆ ಇದು.

Read Full Story