- Home
- News
- India News
- India Latest News Live: 5 ವರ್ಷಗಳಲ್ಲಿ 2400 ವಿಮಾನಗಳಲ್ಲಿ ದೋಷ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ
LIVE NOW
India Latest News Live: 5 ವರ್ಷಗಳಲ್ಲಿ 2400 ವಿಮಾನಗಳಲ್ಲಿ ದೋಷ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ

ಸಾರಾಂಶ
ನವದೆಹಲಿ: ಕಳೆದ 5 ವರ್ಷಗಳಲ್ಲಿ ದೇಶದಲ್ಲಿ 8 ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 2400 ವಿಮಾನಗಳಲ್ಲಿ ತಾಂತ್ರಿಕ ದೋಷದ ಸಮಸ್ಯೆ ಉಂಟಾಗಿದೆ. ಈ ಪೈಕಿ 2025ರಲ್ಲೇ ಅತಿ ಕಡಿಮೆ ಘಟನೆ ವರದಿಯಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಕಳೆದ ವಾರ ಸಚಿವಾಲಯ ಲೋಕಸಭೆಗೆ ಸಲ್ಲಿಸಿರುವ ಅಂಕಿಅಂಶಗಳ ಪ್ರಕಾರ, 2022ರಲ್ಲಿ ಅತ್ಯಧಿಕ 524 ಪ್ರಕರಣಗಳು ದಾಖಲಾಗಿದೆ. ಆ ಬಳಿಕ ನಿಧಾನಕ್ಕೆ ಕುಸಿತ ಕಂಡಿದೆ. 2025ರಲ್ಲಿ ಅತಿ ಕನಿಷ್ಠ ಪ್ರಕರಣಗಳು ವರದಿಯಾಗಿದ್ದು, ನವೆಂಬರ್ ತನಕದ ಅಂಕಿ ಅಂಶದಲ್ಲಿ 382 ಘಟನೆಗಳು ನಡೆದಿದೆ.