- Home
- Business
- 2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಗೊತ್ತಾ? ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಲೆಕ್ಕಾಚಾರಕ್ಕೆ ಬೆಚ್ಚಿದ ಜನ
2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಗೊತ್ತಾ? ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಲೆಕ್ಕಾಚಾರಕ್ಕೆ ಬೆಚ್ಚಿದ ಜನ
2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಗೊತ್ತಾ? ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಲೆಕ್ಕಾಚಾರಕ್ಕೆ ಬೆಚ್ಚಿದ ಜನ, ಕಾರಣ ಡೇವಿಡ್ ಟೈಟ್ ಹೊಸ ವರ್ಷದಲ್ಲಿ ಚಿನ್ನದ ಬೆಲೆಯ ಏರಿಕೆ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಬೆಲೆ ಜನಸಾಮಾನ್ಯರು ಚಿನ್ನ ಕನಸಿನಲ್ಲೂ ಯೋಚನೆ ಮಾಡುವುದು ಬಿಡುತ್ತಾರೆ.

ಬಲು ದುಬಾರಿಯಾದ ಬಂಗಾರ
ಮದುವೆ ಸೀಸನ್ ಆರಂಭಗೊಂಡಿದೆ.ಭಾರತದಲ್ಲಿ ಇದೀಗ ಚಿನ್ನದ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಚಿನ್ನದ ಬೆಲೆ ಬಲು ದುಬಾರಿಯಾಗಿದೆ. ಇಂದು 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1.40 ಲಕ್ಷ ರೂಪಾಯಿ. ಜನಸಾಮಾನ್ಯರಿಗೆ ಚಿನ್ನ ಕೈಗೆಟುಕುದ ವಸ್ತುವಾಗಿದೆ. ಈಗಿರುವ ಬೆಲೆ ದುಬಾರಿ ಎಂದರೆ 2026ರಲ್ಲಿ ಚಿನ್ನದ ಬೆಲೆ ನೋಡಿದರೆ ಶಾಕ್ ಆಗುವುದು ಖಚಿತ.
ಡೇವಿಡ್ ಟೈಟ್ ನುಡಿದ ಭವಿಷ್ಯ
ವಿಶ್ವ ಚಿನ್ನ ಮಂಡಳಿ ಸಿಇಒ ಡೇವಿಡ್ ಟೈಟ್ 2026ರಲ್ಲಿ ಚಿನ್ನದ ಬೆಲೆ ಏರಿಕೆ ಕುರಿತು ಮಾತನಾಡಿದ್ದಾರೆ. ಸದ್ಯ ಚಿನ್ನದ ಬೆಲೆ ಏರಿಕೆಯಾಗುತ್ತಿರುವ ರೀತಿ, ಅಮೆರಿಕ, ಚೀನಾ ಮಾರುಕಟ್ಟೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಚಿನ್ನದ ಬೆಲೆ ದುಪ್ಪಟ್ಟಾಗಲಿದೆ ಎಂದಿದ್ದಾರೆ. ಇಷ್ಟೇ ಅಲ್ಲ 2026ರ ಆರಂಭದಲ್ಲಿ 10 ಗ್ರಾಂ ಚಿನ್ನಕ್ಕೆ ಎಷ್ಟಾಗಲಿದೆ ಎಂದು ವಿವರ ನೀಡಿದ್ದಾರೆ.
10 ಗ್ರಾಂ ಚಿನ್ನಕ್ಕೆ ಬೆಲೆ ಎಷ್ಟಾಗಲಿದೆ?
ಡೇವಿಡ್ ಟೈಟ್ ಪ್ರಕಾರ 2026ರ ಒದು ಔನ್ಸ್ ಚಿನ್ನಕ್ಕೆ 6000 ಅಮೆರಿಕನ್ ಡಾಲರ್ ನಷ್ಟಾಗಲಿದೆ. ಭಾರತೀಯ ರೂಪಾಯಿಗಳಲ್ಲಿ 5,41,920 ರೂಪಾಯಿ. ಆಂದರೆ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1.90 ಲಕ್ಷ ರೂಪಾಯಿ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಒಂದು ಔನ್ಸ್ ಎಂದರೆ 28 ಗ್ರಾಂ.
1.90 ರಿಂದ ಮತ್ತೆ ಏರಿಕೆ ಅಚ್ಚರಿಯಲ್ಲ
1.90 ಲಕ್ಷ ರೂಪಾಯಿ ಬೆಲೆಗೆ ಚಿನ್ನದ ಮೌಲ್ಯ ನಿಲ್ಲುವುದಿಲ್ಲ. 2026ರ ಆರಂಭಿಕ ಹಂತದಲ್ಲಿ ಈ ಬೆಲೆಗೆ ಚಿನ್ನದ ಮೌಲ್ಯದ ಏರಿಕೆಯಾಗಲಿದೆ. ಆದರೆ 2026ರ ಅಂತ್ಯದ ವೇಳೆಗೆ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ಇದು ನಿಲುಕಗೆ ಸಿಗದು ಎಂದು ಡೇವಿಡ್ ಟೈಟ್ ಹೇಳಿದ್ದಾರೆ.
1.90 ರಿಂದ ಮತ್ತೆ ಏರಿಕೆ ಅಚ್ಚರಿಯಲ್ಲ
ಬೆಂಗಳೂರಿನಲ್ಲಿ ಎಷ್ಟಿದ ಚಿನ್ನದ ಬೆಲೆ
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 12,700 ರೂಪಾಯಿ ಆಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 13,855 ರೂಪಾಯಿ ಆಗಿದೆ. ದಿನದಿಂದ ದಿನಕ್ಕೆ ಬಂಗಾರ ಬೆಲೆ ಏರಿಕೆಯಿಂದ ಇದೀಗ ಅತೀ ಗರಿಷ್ಠ ಬೆಲೆಯಲ್ಲಿ ಚಿನ್ನ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಎಷ್ಟಿದ ಚಿನ್ನದ ಬೆಲೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

