ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ ಮಾಡಲಾಗಿದೆ. ಕೆಲಸ ಬಿಟ್ಟ ಬಳಿಕ ಹಣ ಪಡೆಯಲು ಇದ್ದ ನಿಯಮಗಳಲ್ಲಿ ಸಡಿಲಿಕೆ, ಹಣ ಪಡೆಯುವ ವಿಧಾನ ಸರಳೀಕೃತ ಸೇರಿದಂತೆ ಮಹತ್ವದ ಬದಲಾವಣೆ ಮಾಡಲಾಗಿದೆ.

ಇಪಿಎಫ್ಒ 3.0 ನೀತಿ
ಇಪಿಎಫ್ಒ 3.0 ನೀತಿ ಜಾರಿಗೆ ತರಲಾಗಿದೆ. ಹೊಸ ನೀತಿಯಲ್ಲಿ ಪಿಎಫ್ ಹಣ ಹಿಂಪಡೆಯುವಿಕೆ ಸೇರಿದಂತೆ ಹಲವು ನೀತಿಗಳಲ್ಲಿ ಸಡಿಲಿಕೆ ಮಾಡಿ ಪಿಎಫ್ ಸದಸ್ಯರಿಗೆ ಸುಲಭವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಹಣ ಪಡೆಯಲು ನಿಯಮ ರೂಪಿಸಲಾಗಿದೆ. ಕಾರ್ಮಿಕ ಸಚಿವ ಮಾನ್ಸುಕ್ ಮಾಂಡವೀಯ ನೇತೃತ್ವದಲ್ಲಿ ಈ ಬದಲಾವಣೆ ತರಲಾಗಿದೆ.
ತಕ್ಷಣವೇ ಶೇ75ರಷ್ಟು ಹಣ ಪಡೆಯಲು ಸಾಧ್ಯ
ಹೊಸ ಪಿಎಫ್ ನೀತಿ ಪ್ರಕಾರ ಉದ್ಯೋಗ ತೊರೆದ ತಕ್ಷಣವೇ ತಮ್ಮ ಪಿಎಫ್ ಹಣದ ಶೇಕಡಾ 75ರಷ್ಟು ಮೊತ್ತವನ್ನು ಹಿಂಪಡೆಯಲು ಸಾಧ್ಯವಿದೆ. ಇನ್ನು ಸಂಪೂರ್ಣ ಮೊತ್ತವನ್ನು 12 ತಿಂಗಳ ಬಳಿಕ ಪಡೆಯಲು ಸಾಧ್ಯವಿದೆ. ಹಳೇ ನಿಯಮದಲ್ಲಿ ಒಂದು ತಿಂಗಳ ಬಳಿಕ ಶೇಕಡಾ 75ರಷ್ಟು ಹಾಗೂ ಇನ್ನುಳಿದ ಶೇಕಡಾ25 ರಷ್ಟು ಮೊತ್ತವನ್ನು 2 ತಿಂಗಳ ಬಳಿಕ ಪಡೆಯಬಹುದಾಗಿತ್ತು.
ಪಿಂಚಣಿ ಹಣ ಪಡೆಯುವ ನಿಯಮ
ಉದ್ಯೋಗ ಕಳೆದುಕೊಂಡ ಬಳಿಕ ಪಡೆಯುವ ಪಿಂಚಣಿ ಹಣ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಕೆಲಸ ಕಳೆದುಕೊಂಡ ಬಳಿಕ ಅಥವಾ ತೊರದೆ 2 ತಿಂಗಳ ಬಳಿಕ ಪಿಂಚಣಿ ಹಣ ಪಡೆಯಲು ಅರ್ಹವಾಗಿತ್ತು. ಹೊಸ ನಿಯಮದಲ್ಲಿ ಇದು 36 ತಿಂಗಳು ಆಗಿರಬೇಕು
ಇಪಿಎಫ್ ಕಾರ್ಪಸ್
ಹೊಸ 3.0 ನಿಯಮದ ಪ್ರಕಾರ ಇಪಿಎಪ್ ಕಾರ್ಪಸ್ ಮೊತ್ತದಲ್ಲಿ ಶೇಕಡಾ 75ರಷ್ಟು ಹಿಂಪಡೆಯಲು ಸಾಧ್ಯವಿದೆ.ಇನ್ನುಳಿದ ಶೇಕಡಾ 25ರಷ್ಟು ಮೊತ್ತವ್ನು ಮಿನಿಮಮ್ ಬ್ಯಾಲೆನ್ಸ್ ರೂಪದಲ್ಲಿ ಇಡಬೇಕು. 3 ತಿಂಗಳ ಬೇಸಿಕ್ ವೇಜಸ್, ಅಥವಾ ಡಿಎ ಹಿಂಪಡೆಯುವ ನಿಯಮದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ.
ಪ್ರಾಕೃತಿಕ ವಿಕೋಪ
ಕೆಲ ತುರ್ತು ಸಂದರ್ಭದಲ್ಲಿ ಪಿಎಫ್ ಹಣ ಹಿಂಪಡೆಯುವ ಮಿತಿ 5,000 ರೂಪಾಯಿ ಅಥವಾ ಉದ್ಯೋಗಿಯ ಪಿಎಫ್ ಕೊಡುಗೆಯ ಶೇಕಡಾ 50 ರಷ್ಟು ಹಣ , ಇದರಲ್ಲಿ ಯಾವುದು ಕಡಿಮೆ ಮೊತ್ತ ಅದು ಹಿಂಪಡೆಯ ಬಹುದಿತ್ತು. ಆದರೆ ಇದೀಗ ಯಾವುದೇ ಅಲ್ಪ ಪ್ರಮಾಣ ಅಥವಾ ಪಾರ್ಶಿಯಲ್ ಮೊತ್ತ ಪಡೆಯಲು ಕನಿಷ್ಠ 12 ತಿಂಗಳು ಆಗಿರಬೇಕು.
ವೈದ್ಯಕೀಯ ತುರ್ತು ಅಗತ್ಯ
ಈ ಹಿಂದೆ ವೈದ್ಯಕೀಯ ತುರ್ತು ಅಗತ್ಯಕ್ಕಾಗಿ ಉದ್ಯೋಗಿಯ ಪಿಎಫ್ ಕೊಡುಗೆಯಿಂದ 6 ತಿಂಗಳ ವರೆಗಿನ ಬೇಸಿಗ್ ವೇಜಸ್, ಡಿಎ ಮೊತ್ತ ಪಡೆಯಲು ಸಾಧ್ಯವಿತ್ತು. ಈ ನಿಯಮನ್ನು ಉಳಿಸಿಕೊಳ್ಳಲಾಗಿದೆ. ಆದರೆ ಉದ್ಯೋಗಿ ಕನಿಷ್ಠ 12 ತಿಂಗಳ ಸೇವೆ ಸಲ್ಲಿಸಿರಬೇಕು ಎಂಬ ನಿಯಮ ತರಲಾಗಿದೆ.
ವೈದ್ಯಕೀಯ ತುರ್ತು ಅಗತ್ಯ
ಶಿಕ್ಷಣ, ಮದುವೆ
ಶಿಕ್ಷಣ ಹಾಗೂ ಮದುವೆಗಾಗಿ ಈ ಹಿಂದೆ 7 ವರ್ಷ ಪೂರೈಸಿರುವ ಉದ್ಯೋಗಿ ಶೇಕಡಾ 50 ರಷ್ಟು ಮೊತ್ತವನ್ನು 3 ಬಾರಿ ಶಿಕ್ಷಣಕ್ಕಾಗಿ 2 ಬಾರಿ ಮದುವೆಗಾಗಿ ಹಿಂಪಡೆಯಬಹುದಿತ್ತು. ಆದರೆ ಹೊಸ ನೀತಿಯಲ್ಲಿ 10 ಬಾರಿ ಶಿಕ್ಷಣಕ್ಕೆ, 5 ಬಾರಿ ಮದುವೆಗೆ ಪಡೆಯಲು ಸಾಧ್ಯವಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

