ನಮ್ಮ ಮಿಸೈಲ್‌ಗೆ ಭಾರತ ದೂರವಲ್ಲ, ಬಾಂಗ್ಲಾ ದೊಂಬಿಗೆ ಮೋದಿ ಸರ್ಕಾರಕ್ಕೆ ಪಾಕ್ ನಾಯಕ ವಾರ್ನಿಂಗ್, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಕಲಹಕ್ಕೆ ಭಾರತ ಕಾರಣ ಎಂದು ಆರೋಪಿಸಿರುವ ಷರೀಫ್ ಸರ್ಕಾರದ ನಾಯಕ ಬೆದರಿಕೆ ಹಾಕಿದ್ದಾನೆ. 

ಇಸ್ಲಾಮಾಬಾದ್ (ಡಿ.23) ಪಾಕಿಸ್ತಾನದ ಪ್ರಧಾನಿ ಶಬಬಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಮ್ ಲೀಗ್ ಪಕ್ಷದ ನಾಯಕನೊಬ್ಬ ಭಾರತಕ್ಕೆ ವಾರ್ನಿಂಗ್ ನೀಡಿದ್ದಾನೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಕಲಹದ ಹಿಂದೆ ಭಾರತ ಕೈವಾಡವಿದೆ ಎಂದು ಪಾಕಿಸ್ತಾನ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಆರೋಪಿಸಿದ್ದಾನೆ. ಆದರೆ ಈ ಯುವಕ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ, ಭಾರತ ಹಾಗೂ ಪ್ರಧಾನಿ ಮೋದಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾನೆ. ಪಾಕಿಸ್ತಾನದ ಮಿಸೈಲ್‌ಗೆ ಭಾರತ ಅತೀ ದೂರದ ದೇಶವಲ್ಲ. ನಮ್ಮ ಮಿಸೈಲ್ ರೇಂಜ್‌ನಲ್ಲಿ ಭಾರತವಿದೆ ಎಂದಿದ್ದಾನೆ.

ಪಾಕಿಸ್ತಾನ ಸೇನೆ ನೆರವು ಬಾಂಗ್ಲಾದೇಶಕ್ಕಿದೆ

ಬಾಂಗ್ಲಾದೇಶಧ ಸಾರ್ವಭೌಮತ್ವದ ಮೇಲೆ ಭಾರತ ದಾಳಿ ಮಾಡಿದರೆ ಪಾಕಿಸ್ತಾನ ಸುಮ್ಮನೆ ಕೂರಲ್ಲ. ಬಾಂಗ್ಲಾದೇಶದ ಸ್ವಾತಂತ್ರ, ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ, ಅಥವಾ ಬಾಂಗ್ಲಾದೇಶವನ್ನು ಎದುರಿಸುವ ಧೈರ್ಯ ತೋರಿದರೆ ಪಾಕಿಸ್ತಾನ ಜನ, ಪಾಕಿಸ್ತಾನ ಸೇನೆ ಬಾಂಗ್ಲಾದೇಶದ ನೆರವಿಗೆ ನಿಲ್ಲಲಿದೆ. ಪಾಕಿಸ್ತಾನದ ಬಳಿ ಇರುವ ಮಿಸೈಲ್‌ಗೆ ಭಾರತ ಅತೀ ದೂರದಲ್ಲಿ ಇಲ್ಲ ಎಂದು ಉಸ್ಮಾನಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಖಂಡ ಭಾರತ ಪರಿಕಲ್ಪನೆಗೆ ವಿರೋಧ

ಭಾರತದ ಅಖಂಢ ಭಾರತ ಪರಿಕಲ್ಪನೆಗೆ ಉಸ್ಮಾನಿ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ಪ್ರತ್ಯೇಕ ರಾಷ್ಟ್ರ. ಬಾಂಗ್ಲಾದೇಶಕ್ಕೆ ಎಲ್ಲಾ ನೆರವು ಪಾಕಿಸ್ತಾನ ನೀಡಲಿದೆ. ಬಾಂಗ್ಲಾದೇಶದಲ್ಲಿ ಭಾರತ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಭಾರತ ಒಂದು ಹೆಜ್ಜೆ ಇಟ್ಟರೆ ಪಾಕಿಸ್ತಾನ ಅನಿವಾರ್ಯವಾಗಿ ಯುದ್ಧಕ್ಕೆ ಇಳಿಯಲಿದೆ ಎಂದು ಉಸ್ಮಾನಿ ಹೇಳಿದ್ದಾರೆ.

ಬಾಂಗ್ಲಾ ನಾಯಕನ ಹತ್ಯೆ

ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಾಯಕ ಶರೀಪ್ ಹದಿಯನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಪ್ರತೀಕಾರವಾಗಿ ಬಾಂಗ್ಲಾದೇಶದಲ್ಲಿ ಭಾರಿ ಹಿಂಸಾಚಾರ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಹಿಂದೂ ದೀಪು ಚಂದ್ರದಾಸ್‌ನ ಮೇಲೆ ದಾಳಿ ಮಾಡಿ ಹತ್ಯೆ ಮಾಡಲಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿ ಥಳಿಸಿ ಹಲ್ಲೆ

ಬಾಂಗ್ಲಾದೇಶದಲ್ಲಿ ಹಿಂದೂ ದೀಪು ಚಂದ್ರದಾಸ್ ಮೇಲೆ ಉದ್ರಿಕ್ತರ ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿದೆ. ಪ್ರವಾದಿ ಮೊಹಮ್ಮದ್ ಅವಮಾನಿಸಿದ್ದಾನೆ ಎಂದು ಆರೋಪಿಸಿ ಹತ್ಯೆ ಮಾಡಲಾಗಿತ್ತು. ಆದರೆ ದೀಪು ಚಂದ್ರದಾಸ್ ಯಾವುದೇ ಅವಮಾನ ಮಾಡಿರಲಿಲ್ಲ. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಟಾರ್ಗೆಟ್ ಮಾಡಿ ನಡೆಯುತ್ತಿರುವ ಪ್ರತಿಭಟನೆ, ದಾಳಿಯಲ್ಲಿ ದೀಪು ಚಂದ್ರದಾಸ್ ಹತನಾಗಿದ್ದಾನೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ದಾಳಿ ವಿರೋಧಿಸಿ ಭಾರತದ ದೆಹಲಿಯಲ್ಲಿ ಬಾಂಗ್ಲಾದೇಶದ ಹೈಕಮಿಶನರ್ ಕಚೇರಿ ಮಂಭಾಗದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ.