MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಶುಭ್‌ಮನ್ ಗಿಲ್ ನಾಯಕತ್ವಕ್ಕೆ ಕುತ್ತು? ಭಾರತ ಏಕದಿನ ತಂಡಕ್ಕೆ ಹೊಸ ನಾಯಕ ಎಂಟ್ರಿ?

ಶುಭ್‌ಮನ್ ಗಿಲ್ ನಾಯಕತ್ವಕ್ಕೆ ಕುತ್ತು? ಭಾರತ ಏಕದಿನ ತಂಡಕ್ಕೆ ಹೊಸ ನಾಯಕ ಎಂಟ್ರಿ?

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಿಂದ ಹೊರಬಿದ್ದ ಶುಭ್‌ಮನ್ ಗಿಲ್‌ಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆಯಿದೆ. ಗಿಲ್‌ಗೆ ಏಕದಿನ ತಂಡದ ನಾಯಕತ್ವವೂ ಕೈತಪ್ಪುವ ಸಾಧ್ಯತೆಯಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

1 Min read
Author : Naveen Kodase
Published : Dec 23 2025, 06:48 PM IST
Share this Photo Gallery
  • FB
  • TW
  • Linkdin
  • Whatsapp
17
ಗಿಲ್‌ ನಾಯಕತ್ವದಿಂದ ಔಟ್?
Image Credit : Getty

ಗಿಲ್‌ ನಾಯಕತ್ವದಿಂದ ಔಟ್?

ಶುಭ್‌ಮನ್ ಗಿಲ್ 2025ರ ಮಧ್ಯದಲ್ಲಿ ಭಾರತ ಏಕದಿನ ತಂಡದ ನಾಯಕನಾಗಿ ಅಧಿಕೃತವಾಗಿ ನೇಮಕವಾಗಿದ್ದಾರೆ. ಸದ್ಯ ಶ್ರೇಯಸ್ ಅಯ್ಯರ್ ಏಕದಿನ ತಂಡದ ಉಪನಾಯಕರಾಗಿದ್ದಾರೆ.

27
ಟಿ20 ವಿಶ್ವಕಪ್‌ನಿಂದ ಗಿಲ್ ಔಟ್
Image Credit : Getty

ಟಿ20 ವಿಶ್ವಕಪ್‌ನಿಂದ ಗಿಲ್ ಔಟ್

ಇದೀಗ ಡಿಸೆಂಬರ್ 20ರಂದು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದಾಗ ಉಪನಾಯಕರಾಗಿದ್ದ ಶುಭ್‌ಮನ್ ಗಿಲ್ ಅವರನ್ನು ಕೈಬಿಡಲಾಗಿದೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು.

Related Articles

Related image1
T20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಈ ಟೂರ್ನಿ ಆಡಲು ರೆಡಿಯಾದ ಶುಭ್‌ಮನ್ ಗಿಲ್! ಹೆಗಲಿಗೆ ಮಹತ್ವದ ಜವಾಬ್ದಾರಿ?
Related image2
'ಈ ಕ್ರಿಕೆಟಿಗನ ವೃತ್ತಿ ಬದುಕು ಹಾಳು ಮಾಡಿದ್ರಾ ಧೋನಿ?' ನಿವೃತ್ತಿ ಬೆನ್ನಲ್ಲೇ ತುಟಿಬಿಚ್ಚಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
37
ಶ್ರೇಯಸ್ ಅಯ್ಯರ್ ನೂತನ ಏಕದಿನ ತಂಡದ ನಾಯಕ?
Image Credit : Getty

ಶ್ರೇಯಸ್ ಅಯ್ಯರ್ ನೂತನ ಏಕದಿನ ತಂಡದ ನಾಯಕ?

ಇನ್ನು ಇದೆಲ್ಲದರ ನಡುವೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಭಾರತ ಏಕದಿನ ತಂಡದ ನಾಯಕತ್ವದಿಂದ ಶುಭ್‌ಮನ್ ಗಿಲ್ ಅವರನ್ನು ಕೆಳಗಿಳಿಸಿ ಶ್ರೇಯಸ್ ಅಯ್ಯರ್‌ಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗುತ್ತದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ.

47
ಯಾಕೆ ಹೀಗೆ?
Image Credit : Getty

ಯಾಕೆ ಹೀಗೆ?

ಗಿಲ್ ನಾಯಕರಾದ ಬಳಿಕ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಗಿಲ್ ನಾಯಕತ್ವದ ಜತೆಗೆ ಬ್ಯಾಟರ್ ಆಗಿ ಒತ್ತಡ ನಿಭಾಯಿಸಲು ವಿಫಲವಾಗುತ್ತಿರುವುದು ಬಿಸಿಸಿಐ ಆಯ್ಕೆ ಸಮಿತಿ ತಲೆನೋವು ಹೆಚ್ಚುವಂತೆ ಮಾಡಿದೆ.

57
ಅಯ್ಯರ್‌ ಬಗ್ಗೆ ಬಿಸಿಸಿಐ ಲೆಕ್ಕಾಚಾರವೇನು?
Image Credit : Getty

ಅಯ್ಯರ್‌ ಬಗ್ಗೆ ಬಿಸಿಸಿಐ ಲೆಕ್ಕಾಚಾರವೇನು?

ಹೀಗಾಗಿ ಗಿಲ್ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ಪಟ್ಟ ಕಟ್ಟಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಶ್ರೇಯಸ್ ಅಯ್ಯರ್ ನಾಯಕನಾಗಿ ಐಪಿಎಲ್‌ನಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದರ ಜತೆಗೆ ಏಕದಿನ ಕ್ರಿಕೆಟ್‌ನಲ್ಲಿ ಅಯ್ಯರ್ ಸ್ಥಿತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

67
ಕೆ ಎಲ್ ರಾಹುಲ್ ಹಂಗಾಮಿ ನಾಯಕ
Image Credit : X/Cricket with Ansh

ಕೆ ಎಲ್ ರಾಹುಲ್ ಹಂಗಾಮಿ ನಾಯಕ

ಇನ್ನು ಇತ್ತೀಚೆಗೆ ಗಾಯದ ಸಮಸ್ಯೆಯಿಂದ ಶ್ರೇಯಸ್ ಅಯ್ಯರ್ ಹಾಗೂ ಶುಭ್‌ಮನ್ ಗಿಲ್ ಭಾರತ ಏಕದಿನ ತಂಡದಿಂದ ಹೊರಗುಳಿದಿದ್ದರು. ಈ ವೇಳೆ ಕೆ ಎಲ್ ರಾಹುಲ್ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.

77
ಅಯ್ಯರ್‌ಗೆ ನಾಯಕತ್ವ ಪಟ್ಟ
Image Credit : Getty

ಅಯ್ಯರ್‌ಗೆ ನಾಯಕತ್ವ ಪಟ್ಟ

ಆದರೆ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಶುಭ್‌ಮನ್ ಗಿಲ್ ಬದಲಿಗೆ ಮುಂಬೈ ಮೂಲದ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ ಭಾರತ ಏಕದಿನ ತಂಡದ ನಾಯಕತ್ವ ಕಟ್ಟಲು ಮುಂದಾಗಿದೆ ಎನ್ನಲಾಗುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಶುಭಮನ್ ಗಿಲ್
ಶ್ರೇಯಸ್ ಅಯ್ಯರ್

Latest Videos
Recommended Stories
Recommended image1
ಟಿ20 ವಿಶ್ವಕಪ್: ಶಿವಂ ದುಬೆ ಮಹಾ ಎಡವಟ್ಟು, ಗೆದ್ದರೂ ಭಾರತಕ್ಕೆ ನೆಮ್ಮದಿಯಿಲ್ಲ!
Recommended image2
ಸ್ಕೋರ್ 24 ಆದ್ರೂ ಇಂಪ್ಯಾಕ್ಟ್ ದೊಡ್ಡದು! ಸಂಜು ಸ್ಯಾಮ್ಸನ್ ಬೆನ್ನುತಟ್ಟಿದ ಗೌತಮ್ ಗಂಭೀರ್
Recommended image3
ಟಿ20 ವಿಶ್ವಕಪ್: ಇಂದು ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಕಿವೀಸ್‌ ಸೆಮಿಗೆ, ಪಾಕ್‌ ಮನೆಗೆ!
Related Stories
Recommended image1
T20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಈ ಟೂರ್ನಿ ಆಡಲು ರೆಡಿಯಾದ ಶುಭ್‌ಮನ್ ಗಿಲ್! ಹೆಗಲಿಗೆ ಮಹತ್ವದ ಜವಾಬ್ದಾರಿ?
Recommended image2
'ಈ ಕ್ರಿಕೆಟಿಗನ ವೃತ್ತಿ ಬದುಕು ಹಾಳು ಮಾಡಿದ್ರಾ ಧೋನಿ?' ನಿವೃತ್ತಿ ಬೆನ್ನಲ್ಲೇ ತುಟಿಬಿಚ್ಚಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved