ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ಸಹಾಯಕ್ಕೆ ಅಮೆರಿಕ ನಿಲ್ಲಲಿದೆ. ಆದರೆ ಅಲ್ಲಿ ಮೋದಿ ನಾಯಕನಾಗಿ ಇರಬೇಕು. ಬೇರೆ ನಾಯಕರಿದ್ದರೆ ನಾನು ಗ್ಯಾರೆಂಟಿ ಕೊಡಲಾರೆ ಎಂದು ಭೇಟಿ ವೇಳೆ ಟ್ರಂಪ್ ಹೇಳಿಕೆ ವೈರಲ್ ಆಗಿದೆ.
- Home
- News
- India News
- India Latest News Live: ಭಾರತದ ಮೇಲೆ ದಾಳಿ ಮಾಡಿದ್ರೆ ನೆರವಿಗೆ ನಾವಿದ್ದೇವೆ, ಆದ್ರೆ ಮೋದಿ ನಾಯಕನಾಗಿದ್ರೆ ಮಾತ್ರ, ಟ್ರಂಪ್ ಗ್ಯಾರೆಂಟಿ
India Latest News Live: ಭಾರತದ ಮೇಲೆ ದಾಳಿ ಮಾಡಿದ್ರೆ ನೆರವಿಗೆ ನಾವಿದ್ದೇವೆ, ಆದ್ರೆ ಮೋದಿ ನಾಯಕನಾಗಿದ್ರೆ ಮಾತ್ರ, ಟ್ರಂಪ್ ಗ್ಯಾರೆಂಟಿ

ಪುಣೆ: ‘ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅಂಡಮಾನ್ ಜೈಲಲ್ಲಿದ್ದಾಗ ಬ್ರಿಟಿಷ್ ಸರ್ಕಾರಕ್ಕೆ 10 ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅವರು ತಮ್ಮ ಶಿಕ್ಷೆ ಕಮ್ಮಿ ಮಾಡಲು ಕೋರಿದ್ದರು. ಆದರೆ ಅವರ ಸ್ವರವು ನಮ್ರತೆಯಿಂದ ಕೂಡಿರಲಿಲ್ಲ ಮತ್ತು ಆಗಿನ ಬ್ರಿಟಿಷರಿಗೆ ನಿಷ್ಠೆ ವ್ಯಕ್ತಪಡಿಸುವ ಪದಗಳನ್ನು ಅವು ಹೊಂದಿರಲಿಲ್ಲ’ ಎಂದು ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.
ಸಾವರ್ಕರ್ ಕುರಿತು ಕಾಂಗ್ರೆಸ್ಸಿಗ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಪ್ರಶ್ನಿಸಿ ಅವರ ವಿರುದ್ಧ ಪುಣೆ ಸಂಸದ/ಶಾಸಕ ಕೋರ್ಟಲ್ಲಿ ನಡೆದಿರುವ ಮಾನಹಾನಿ ಪ್ರಕರಣದ ವಿಚಾರಣೆ ವೇಳೆ ಸಾತ್ಯಕಿ ಈ ಹೇಳಿಕೆ ನೀಡಿದರು.
‘ಕ್ಷಮಾದಾನ ಅರ್ಜಿಯು ಕಾನೂನಾತ್ಮಕ ಕ್ರಮವಾಗಿತ್ತು. ಅದು ಅಪರಾಧವಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
India Latest News Live 17 June 2026ಭಾರತದ ಮೇಲೆ ದಾಳಿ ಮಾಡಿದ್ರೆ ನೆರವಿಗೆ ನಾವಿದ್ದೇವೆ, ಆದ್ರೆ ಮೋದಿ ನಾಯಕನಾಗಿದ್ರೆ ಮಾತ್ರ, ಟ್ರಂಪ್ ಗ್ಯಾರೆಂಟಿ
India Latest News Live 17 June 2026403 ರನ್ ಬೃಹತ್ ಟಾರ್ಗೆಟ್ ಮುಂದೆ ಹೋರಾಟ ನೀಡಿ ಸೋತ ಆಫ್ಘಾನ್, ಭಾರತಕ್ಕೆ 170 ರನ್ ಭರ್ಜರಿ ಗೆಲುವು
ಭಾರತ ನೀಡಿದ 402 ರನ್ ಬೃಹತ್ ಟಾರ್ಗೆಟ್ ಮುಂದೆ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡಿದೆ. ರಹಮತ್ ಶಾ ಬ್ಯಾಟಿಂಗ್ ಆಫ್ಘಾನಿಸ್ತಾನ ತಂಡವನ್ನು ಹೀನಾಯ ಸೋಲಿನಿಂದ ತಪ್ಪಿಸಿತ್ತು. ಆದರೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಭಾರತ ಸರಣಿ ಗೆದ್ದುಕೊಂಡಿತು.
India Latest News Live 17 June 2026Temple - ಮನುಷ್ಯನ ಚರ್ಮದಂತೆ ಮೃದುವಾದ 10 ಅಡಿ ವಿಗ್ರಹ, ರಾತ್ರಿ ಕೇಳಿಸುತ್ತೆ ಸಿಂಹ ಘರ್ಜನೆ - ಇಲ್ಲಿದೆ ನಿಗೂಢ ದೇಗುಲ!
Telanganaದಲ್ಲಿ ಅನೇಕ ಹಳೆಯ ದೇವಸ್ಥಾನಗಳಿವೆ. ಆದರೆ ಕೆಲವು ಕ್ಷೇತ್ರಗಳು ತಮ್ಮ ವಿಶೇಷತೆಗಳಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿವೆ. ಅಂತಹ ಅಪರೂಪದ ದೇವಾಲಯಗಳಲ್ಲಿ ಮುಲುಗು ಜಿಲ್ಲೆಯ ಮಲ್ಲೂರುನಲ್ಲಿರುವ ಹೇಮಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವೂ ಒಂದು.
India Latest News Live 17 June 2026Kamalinee Mukherjee - ಅದು ಭಕ್ತಿ ಸಿನಿಮಾ, ಆದ್ರೂ ನಾಗ್ ನೋಡಿ ಕಂಟ್ರೋಲ್ ತಪ್ಪುತ್ತಿದ್ದೆ ಅನ್ನೋದಾ ಈ ನಟಿ!
Kamalinee Mukherjee, ನಟ ನಾಗಾರ್ಜುನ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ. 'ಶಿರಡಿ ಸಾಯಿ' ಸಿನಿಮಾ ಶೂಟಿಂಗ್ ವೇಳೆ ನಾಗಾರ್ಜುನರನ್ನು ನೋಡುತ್ತಲೇ ಇರುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
India Latest News Live 17 June 2026OG 2 ಬಗ್ಗೆ ಕೊನೆಗೂ ಬಂತು ದೊಡ್ಡ ಅಪ್‌ಡೇಟ್ - ಪವನ್ ಕಲ್ಯಾಣ್ ಫ್ಯಾನ್ಸ್ ಕಾಯುತ್ತಿದ್ದ ಸುದ್ದಿ ಇದೇ!
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬ್ಲಾಕ್‌ಬಸ್ಟರ್ ‘They Call Him OG’ ಚಿತ್ರದ ಸೀಕ್ವೆಲ್ OG 2 ಬಗ್ಗೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ವಿದೇಶ ಪ್ರವಾಸದಿಂದ ವಾಪಸ್ ಆದ ತಕ್ಷಣ ಶೂಟಿಂಗ್ ಆರಂಭವಾಗಲಿದೆ.
India Latest News Live 17 June 2026Near Death Experience - ಸಾವಿನ ನಂತರ ಏನಾಗುತ್ತೆ? ಬದುಕುಳಿದವರು ಹೇಳಿದ್ರು ಬೆಚ್ಚಿಬೀಳಿಸೋ ಸತ್ಯಗಳು!
ಸಾವಿನ ಬಾಗಿಲು ತಟ್ಟಿ ಬಂದವರು ಹೇಳುವ ಅನುಭವಗಳು ನಿಗೂಢ ಮತ್ತು ಅಷ್ಟೇ ಆಶ್ಚರ್ಯಕರ. 'ಸಾವಿನಂಚಿನ ಅನುಭವ'ಗಳ (Near Death Experiences) ಬಗ್ಗೆ ಆಧುನಿಕ ವಿಜ್ಞಾನ ಈಗ ಹೊಸ ಬೆಳಕು ಚೆಲ್ಲುತ್ತಿದೆ.
India Latest News Live 17 June 2026Preethi Raj Shetty - ಟಿವಿಕೆ ಸೇರಿದ ಕೂಡಲೇ ವಿಜಯ್‌ರ ಕಾನೂನು ಸಲಹೆಗಾರ್ತಿ ಆದ ವಕೀಲೆ.. ಯಾರಿವರು ಶೆಟ್ಟಿ?
Vijay ಮತ್ತು ಸಂಗೀತಾ ಅವರ ವಿಚ್ಛೇದನ ಪ್ರಕರಣ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ, ಟಿವಿಕೆ ಪಕ್ಷ ಸೇರಿದ ವಕೀಲೆ ಪ್ರೀತಿ ರಾಜ್ ಶೆಟ್ಟಿ, ವಿಜಯ್ ಅವರ ವೈಯಕ್ತಿಕ ಪ್ರಕರಣಗಳನ್ನು ನಿಭಾಯಿಸುತ್ತಿದ್ದಾರೆ.
India Latest News Live 17 June 2026ರೈತರಿಗೆ ಗುಡ್ ನ್ಯೂಸ್ - ಈ ದಿನದಂದು ಬರಲಿದೆ PM Kisan ಯೋಜನೆಯ 2 ಸಾವಿರ ರೂಪಾಯಿ ಹಣ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ಹಣವು ಜೂನ್ 20, 2026 ರಂದು ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದಿಂದ 9.44 ಕೋಟಿಗೂ ಅಧಿಕ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಿದ್ದಾರೆ.
India Latest News Live 17 June 2026ಜೂ.30ರೊಳಗೆ ಕೆವೈಸಿ ಮಾಡದಿದ್ರೆ ಗ್ಯಾಸ್ ಸಬ್ಸಿಡಿ ಕಟ್ - ಮನೆಯಿಂದ್ಲೇ ಮಾಡೋದು ಹೇಗೆ- ಹಂತ ಹಂತದ ಮಾಹಿತಿ
India Latest News Live 17 June 2026Sanchita Ugale - 'ನನ್ನ ಮಗಳಿಗೆ ಕಿರುಕುಳ ಕೊಡ್ತಿದ್ರು' - ಮಗಳ ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ತಂದೆ!
Sanchita Ugale ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಗಳ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ ತಂದೆ, ಆಕೆ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು, ಕೆಲವರು ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
India Latest News Live 17 June 2026Dipika Chikhlia - ರಾಮಾಯಣದ ಸೀತೆ ಮಾಡರ್ನ್ ಅವತಾರದಲ್ಲಿ - ದೀಪಿಕಾ ಫೋಟೋ ನೋಡಿ ಫ್ಯಾನ್ಸ್ ಫಿದಾ!
Ramayan Sita: ರಾಮಾಯಣ ಸೀರಿಯಲ್‌ನಲ್ಲಿ ಸೀತೆಯ ಪಾತ್ರದಿಂದ ಮನೆಮಾತಾದ ದೀಪಿಕಾ ಚಿಖ್ಲಿಯಾ ಇತ್ತೀಚೆಗೆ ಜೀನ್ಸ್ ಮತ್ತು ಬಿಳಿ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಮಾಡರ್ನ್ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
India Latest News Live 17 June 2026ಆಫ್ಘಾನ್ ಎದುರು ದೊಡ್ಡ ಶತಕ ಸಿಡಿಸಿ ಶಿಖರ್ ಧವನ್, ವಿರಾಟ್ ಕೊಹ್ಲಿಯ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್..!
ಲಖನೌ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ದೊಡ್ಡ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದರ ಜತೆಗೆ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ.
India Latest News Live 17 June 2026Alia Bhatt - ಆಲ್ಫಾ ಟ್ರೇಲರ್‌ನಲ್ಲಿವೆ 7 ಪವರ್‌ಫುಲ್ ಡೈಲಾಗ್‌ಗಳು, ಆಲಿಯಾ ಪಂಚ್‌ಗೆ ಫ್ಯಾನ್ಸ್ ಫಿದಾ!
Alpha Trailer: 'ಆಲ್ಫಾ' ಸಿನಿಮಾದ ಟ್ರೇಲರ್ ಯಾಕೆ ಇಷ್ಟೊಂದು ಚರ್ಚೆಯಲ್ಲಿದೆ? ಟ್ರೇಲರ್‌ನಲ್ಲಿರುವ ಯಾವ ಡೈಲಾಗ್‌ಗಳು ಸದ್ದು ಮಾಡುತ್ತಿವೆ ಮತ್ತು ಅತಿ ಹೆಚ್ಚು ಚರ್ಚೆಯಾಗುತ್ತಿರುವ ಡೈಲಾಗ್ ಯಾವುದು?
India Latest News Live 17 June 2026Orry Income - ಅಬ್ಬಬ್ಬಾ! ಒಂದೇ ರೀಲ್ಸ್‌ಗೆ 76 ಲಕ್ಷ - ಮದುವೆ-ಪಾರ್ಟಿಗೆ ಓರಿ ಚಾರ್ಜ್ ಕೇಳಿದ್ರೆ ಶಾಕ್ ಆಗ್ತೀರಾ!
Orry Income: ಸೋಷಿಯಲ್ ಮೀಡಿಯಾ ಸ್ಟಾರ್ ಓರಿ ಒಂದೇ ರೀಲ್‌ನಿಂದ ₹76 ಲಕ್ಷ ಸಂಪಾದಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಮದುವೆ, ಬರ್ತ್‌ಡೇ ಮತ್ತು ಖಾಸಗಿ ಕಾರ್ಯಕ್ರಮಗಳಿಗೆ ₹15 ರಿಂದ ₹25 ಲಕ್ಷದವರೆಗೆ ಶುಲ್ಕ ಪಡೆಯುತ್ತಾರೆ.
India Latest News Live 17 June 2026ಇನ್ನು ವಿಮಾನದಲ್ಲೇ ಓಡಾಡಿ, ಏರ್ ಇಂಡಿಯಾದಿಂದ ಅತೀ ಕಡಿಮೆ ಬೆಲೆಯ ಬೆಸಿಕ್ ಫೇರ್ ಪ್ರಯಾಣ ಜಾರಿ
ಇನ್ನು ಮುಂದೆ ವಿಮಾನ ಪ್ರಯಾಣ ದುಬಾರಿ ಅಲ್ಲ. ಅತೀ ಕಡಿಮೆ ಬೆಲೆಯಲ್ಲಿ ಏರ್ ಇಂಡಿಯಾ ಬೇಸಿಕ್ ಫೇರ್ ಜಾರಿಗೊಳಿಸಿದೆ. ಭಾರತದ ಯಾವುದೇ ಮೂಲೆಗೆ ಕೈಗೆಟುಕುವ ಬೆಲೆಯಲ್ಲಿ ಟೆಕೆಟ್ ಲಭ್ಯ. ಏನಿದು ಬೇಸಿಕ್ ಫೇರ್ ?
India Latest News Live 17 June 2026Cocktail 2 - ನಮ್ಮಿಬ್ಬರ ಮಧ್ಯೆ ಲೆಸ್ಬಿಯನ್ ಕಥೆ ಇಲ್ಲ, ಅದು ಎಮೋಷನಲ್ ತ್ರಿಕೋನ ಅಷ್ಟೇ - ಕೃತಿ, ರಶ್ಮಿಕಾ ಸ್ಪಷ್ಟನೆ
Cocktail 2 ಸಿನಿಮಾದಲ್ಲಿ ಕೃತಿ, ರಶ್ಮಿಕಾ ನಡುವೆ ಲೆಸ್ಬಿಯನ್ ಲವ್ ಸ್ಟೋರಿ ಇದೆ ಎಂಬ ವದಂತಿಗೆ ನಟಿಯರೇ ಸ್ಪಷ್ಟನೆ ನೀಡಿದ್ದಾರೆ. ಇದು ಫಿಸಿಕಲ್ ತ್ರೀಸಮ್ ಅಲ್ಲ, ಎಮೋಷನಲ್ ತ್ರೀಸಮ್ ಎಂದು ಕೃತಿ ಸನೋನ್ ಹೇಳಿದ್ದಾರೆ.
India Latest News Live 17 June 2026Ind vs Afg - ಟೀಂ ಇಂಡಿಯಾಗೆ ಮತ್ತೊಂದು ಆಘಾತ, ಮತ್ತೋರ್ವ ಸ್ಟಾರ್ ಕ್ರಿಕೆಟಿಗನಿಗೆ ಗಾಯ!
India Latest News Live 17 June 2026ಇಂಡಿ ಒಕ್ಕೂಟ ಪ್ರತಿ ಪಕ್ಷದಲ್ಲಿ ಬಿರುಗಾಳಿ, ಸಮಾಜವಾದಿ ಪಾರ್ಟಿ ಇಬ್ಬಾಗ ಸಾಧ್ಯತೆ; ಯುಪಿ ಸಚಿವನ ಸುಳಿವು
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಮಹಾರಾಷ್ಟ್ರದಲ್ಲಿ ಉದ್ದವ್ ಶಿವಸೇನಾದಲ್ಲಿ ಬಂಡಾಯದ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಇಬ್ಬಾಗದ ಸುಳಿವು ಸಿಗುತ್ತಿದೆ. ಯುಪಿ ಸಚಿನ ಈ ಕುರಿತು ಸ್ಫೋಟಕ ಮಾಹಿತಿ ನೀಡಿದ್ದಾರೆ.
India Latest News Live 17 June 2026ತಾಯಿ...ತಾಯಿಯೇ... ಭಾರತದ ಶೂಟರ್ ಜಸ್ಪಾಲ್ ರಾಣಾ ಸಾವಿನ ಸುದ್ದಿ SA ತಾಯಿಯೂ ನಿಧನ!
India Latest News Live 17 June 2026Telegram Ban - 'ಮುಂದಿನ ನಿಷೇಧ ಯಾರ ಮೇಲೆ? ವಾಟ್ಸಾಪ್ ಮೇಲಾ?' ಟೆಲಿಗ್ರಾಂ ಬ್ಯಾನ್ ಮಾಡಿದ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ
NEET-UG ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಂ ಬ್ಯಾನ್(Telegram ban) ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಹುಲ್ ಗಾಂಧಿ(Rahul gandhi) ತೀವ್ರವಾಗಿ ಟೀಕಿಸಿದ್ದಾರೆ. 'ಪೇಪರ್ ಲೀಕ್ ಮಾಫಿಯಾ'ವನ್ನು ಹಿಡಿಯುವ ಬದಲು, ಆ್ಯಪ್ ಬಳಸುವ ವಿದ್ಯಾರ್ಥಿಗಳಿಗೆ ಇನ್ನಷ್ಟು ತೊಂದರೆ ಕೊಡ್ತಿದೆ ಎಂದು ಟೀಕೆ