MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಇನ್ನು ವಿಮಾನದಲ್ಲೇ ಓಡಾಡಿ, ಏರ್ ಇಂಡಿಯಾದಿಂದ ಅತೀ ಕಡಿಮೆ ಬೆಲೆಯ ಬೆಸಿಕ್ ಫೇರ್ ಪ್ರಯಾಣ ಜಾರಿ

ಇನ್ನು ವಿಮಾನದಲ್ಲೇ ಓಡಾಡಿ, ಏರ್ ಇಂಡಿಯಾದಿಂದ ಅತೀ ಕಡಿಮೆ ಬೆಲೆಯ ಬೆಸಿಕ್ ಫೇರ್ ಪ್ರಯಾಣ ಜಾರಿ

ಇನ್ನು ಮುಂದೆ ವಿಮಾನ ಪ್ರಯಾಣ ದುಬಾರಿ ಅಲ್ಲ. ಅತೀ ಕಡಿಮೆ ಬೆಲೆಯಲ್ಲಿ ಏರ್ ಇಂಡಿಯಾ ಬೇಸಿಕ್ ಫೇರ್ ಜಾರಿಗೊಳಿಸಿದೆ. ಭಾರತದ ಯಾವುದೇ ಮೂಲೆಗೆ ಕೈಗೆಟುಕುವ ಬೆಲೆಯಲ್ಲಿ ಟೆಕೆಟ್ ಲಭ್ಯ. ಏನಿದು ಬೇಸಿಕ್ ಫೇರ್ ?

2 Min read
Author : Chethan Kumar
Published : Jun 17 2026, 05:01 PM IST
Share this Photo Gallery
  • FB
  • TW
  • Linkdin
  • Whatsapp
16
ಏರ್ ಇಂಡಿಯಾ ಬೇಸಿಕ್ ಫೇರ್
Image Credit : X

ಏರ್ ಇಂಡಿಯಾ ಬೇಸಿಕ್ ಫೇರ್

ಕಾರು, ಬಸ್ ಪ್ರಯಾಣ ಇದೀಗ ದುಬಾರಿಯಾಗಿದೆ. ಇನ್ನು ರೈಲಿನಲ್ಲಿ ಟಿಕೆಟ್ ಸಿಕ್ಕಿದರೂ ಸೀಟು ಸಿಗುವುದೂ ದುಸ್ತರವಾಗಿದೆ. ಅತ್ತ ವಿಮಾನ ಪ್ರಯಾಣ ದುಬಾರಿ ಎಂದು ಜನಸಾಮಾನ್ಯರು ಏರ್‌ಪೋರ್ಟ್‌ನತ್ತ ಮುಖ ಮಾಡುವುದಿಲ್ಲ. ಆದರೆ ಇನ್ಮುಂದೆ ಹಾಗಿಲ್ಲ. ವಿಮಾನ ಪ್ರಯಾಣವೂ ಅತ್ಯಂತ ಅಗ್ಗವಾಗಲಿದೆ. ಕಾರಣ ಇದೀಗ ಏರ್ ಇಂಡಿಯಾ ಹೊಸ ಬೇಸಿಕ್ ಭೇರ್ ಟ್ರಾವೆಲ್ ಆರಂಭಿಸಿದೆ. ಈ ಮೂಲಕ ಅತೀ ಕಡಿಮೆ ಬೆಲೆಯಲ್ಲಿ ಪ್ರಯಾಣ ಮಾಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕೈಗೆಟುವು ಬೆಲೆಯಲ್ಲಿ ವಿಮಾನ ಪ್ರಯಾಣ
Image Credit : twitter

ಕೈಗೆಟುವು ಬೆಲೆಯಲ್ಲಿ ವಿಮಾನ ಪ್ರಯಾಣ

ಏರ್ ಇಂಡಿಯಾ ಜಾರಿ ಮಾಡಿರುವ ಬೇಸಿಕ್ ಫೇರ್‌ನಲ್ಲಿ ಡೊಮೆಸ್ಟಿಕ್ ಪ್ರಯಾಣಕ್ಕೆ ಮಾತ್ರ ಅವಕಾಶ. ಇದರಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಸಾಧ್ಯವಿಲ್ಲ. ಭಾರತದ ಯಾವುದೇ ಮೂಲೆಗೂ ಬೇಸಿಕ್ ಫೇರ್ ಮೂಲಕ ಏರ್ ಇಂಡಿಯಾದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಪ್ರಯಾಣ ಸಾಧ್ಯವಿದೆ. ಈ ಮೂಲಕ ಏರ್ ಇಂಡಿಯಾ ಎಲ್ಲರಿಗೂ ವಿಮಾನ ಪ್ರಯಾಣ ಕಲ್ಪಿಸಲು ಮುಂದಾಗಿದೆ.

Related Articles

Related image1
Air India ಪ್ರಯಾಣಿಕರಿಗೆ ಸಿಹಿ ಸುದ್ದಿ… ಶೀಘ್ರದಲ್ಲಿ ವಿಮಾನದಲ್ಲಿ ಸಿಗಲಿಗೆ ಈ ಎಲ್ಲಾ ಸೌಲಭ್ಯ!
Related image2
Air India AI2913: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ; ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ತುರ್ತು ಭೂಸ್ಪರ್ಶ
36
ಊಟ ಇರಲಲ್ಲ, ಕಾಫಿ ಟೀ ಲಭ್ಯ
Image Credit : X

ಊಟ ಇರಲಲ್ಲ, ಕಾಫಿ ಟೀ ಲಭ್ಯ

ಬೇಸಿಕ್ ಫೇರ್ ಟಿಕೆಟ್‌ನಲ್ಲಿ ಕಾಂಪ್ಲಿಮೆಂಟರ್ ಮೀಲ್ ಇರುವುದಿಲ್ಲ. ಪ್ರಯಾಣದ ನಡುವೆ ಪ್ರಯಾಣಿಕರಿಗೆ ಕಾಫಿ, ಟೀ ನೀಡಲಾಗುತ್ತದೆ. ಬೇಸಿಕ್ ಫೇರ್ ಪ್ರಮುಖವಾಗಿ ಅತೀ ಕಡಿಮೆ ವೆಚ್ಚದಲ್ಲಿ ಪ್ರಯಾಣ ಕಲ್ಪಿಸುವುದಾಗಿದೆ. ಹೀಗಾಗಿ ಕೆಲ ಸೌಲಭ್ಯಗಳನ್ನು ಏರ್ ಇಂಡಿಯಾ ಕಡಿತ ಮಾಡಿ ಪ್ರಯಾಣ ಸೇವೆ ನೀಡುತ್ತದೆ.

46
ಬೇಸಿಕ್ ಫೇರ್‌ನಲ್ಲಿ ಲಗೇಜ್ ಕೊಂಡೊಯ್ಯಲು ಇದೆ ಅವಕಾಶ
Image Credit : Getty

ಬೇಸಿಕ್ ಫೇರ್‌ನಲ್ಲಿ ಲಗೇಜ್ ಕೊಂಡೊಯ್ಯಲು ಇದೆ ಅವಕಾಶ

ಬೇಸಿಕ್ ಫೇರ್ ಟಿಕೆಟ್ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಇತರರಂತೆ 15 ಕೆಜಿ ಲಗೇಜ್ ಬ್ಯಾಗ್, 7 ಕೆಜಿ ತೂಕದ ಬ್ಯಾಗ್ ಕೊಂಡೊಯ್ಯಲು ಅವಕಾಶವಿದೆ. ಹೀಗಾಗಿ ಬ್ಯಾಗೇಜ್ ವಿಚಾರದಲ್ಲಿ ಯಾವುದೇ ಆತಂಕವಿಲ್ಲ. ಎಕಾನಾಮಿಕ್ ಕ್ಲಾಸ್‌ನಲ್ಲಿರುವಂತೆ ಇಲ್ಲೂ ಅವಕಾಶವಿದೆ.

56
ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ
Image Credit : Asianet News

ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ

ಬೇಸಿಕ್ ಫೇರ್ ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರು ತಮಗೆ ಬೇಕಾದ ಸೌಲಭ್ಯಗಳನ್ನು ಮಾತ್ರ ಪಡೆಯಬಹುದು. ಇನ್ನು ಪ್ರಯಾಣದ ನಡುವೆ ಊಟದ ಅವಶ್ಯಕತೆ ಇದ್ದರೆ ಟಿಕೆಟ್ ಬುಕಿಂಗ್ ಬಳಿಕವೂ ಮೀಲ್ ಬುಕ್ ಮಾಡಬಹುದು. ಹೀಗಾಗಿ ಪ್ರಯಾಣಿಕರ ತೀರಾ ಅಗತ್ಯತೆ ಬುಕ್ ಮಾಡಿ ಅತೀ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಲು ಏರ್ ಇಂಡಿಯಾ ಅನೂಕೂಲ ಮಾಡಿಕೊಡುತ್ತಿದೆ.

66
ಪ್ರಾಯೋಗಿಕ ಹಂತದಲ್ಲೇ ಭರ್ಜರಿ ರೆಸ್ಪಾನ್ಸ್
Image Credit : X

ಪ್ರಾಯೋಗಿಕ ಹಂತದಲ್ಲೇ ಭರ್ಜರಿ ರೆಸ್ಪಾನ್ಸ್

ಭಾರತದ ಹಲವು ಮೂಲೆಗಳಿಗೆ ಜನಸಾಮಾನ್ಯರು ರೈಲಿನ ಮೂಲಕ ಅಥವಾ ಇತರ ಸಾರಿಗೆ ವ್ಯವಸ್ಥೆಗಳ ಮೂಲಕ ಪ್ರಯಾಣಿಸುತ್ತಾರೆ. ದುಬಾರಿ ಪಾವತಿ ಮಾಡಿ ಹೆಚ್ಚು ದಿನ ಪ್ರಯಾಣದಲ್ಲೇ ಕಳೆಯಬೇಕಾಗಿದೆ. ಇದೀಗ ಏರ್ ಇಂಡಿಯಾ ಅಚೀ ಕಡಿಮೆ ವೆಚ್ಚದಲ್ಲಿ ಭಾರತದ ಮೂಲೆ ಮೂಲೆಗೆ ಸೇವೆ ನೀಡಲಿದೆ. ಇದರಿಂದ ಜನಸಾಮ್ಯನರು ವಿಮಾನ ಪ್ರಯಾಣದ ಮೂಲಕ ಸಮಯ, ಹಣ ಎರಡನ್ನು ಉಳಿಸಬಹುದು. ಇದಕ್ಕಾಗಿ ಏರ್ ಇಂಡಿಯಾ ಬೇಸಿಕ್ ಫೇರ್ ಜಾರಿಗೊಳಿಸಿದೆ. ಸದ್ಯ ಪ್ರಯೋಗಿಕ ಹಂತದಲ್ಲಿ ಜಾರಿಯಾಗಿದೆ. ಮೊದಲ ಪ್ರಯತ್ನ ಯಶಸ್ವಿಯಾದರೆ ಹಂತ ಹಂತವಾಗಿ ವಿಸ್ತರಣೆಯಾಗಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಏರ್ ಇಂಡಿಯಾ
ಭಾರತ ಸುದ್ದಿ
ವಿಮಾನ ನಿಲ್ದಾಣ

Latest Videos
Recommended Stories
Recommended image1
ಇಂಡಿ ಒಕ್ಕೂಟ ಪ್ರತಿ ಪಕ್ಷದಲ್ಲಿ ಬಿರುಗಾಳಿ, ಸಮಾಜವಾದಿ ಪಾರ್ಟಿ ಇಬ್ಬಾಗ ಸಾಧ್ಯತೆ; ಯುಪಿ ಸಚಿವನ ಸುಳಿವು
Recommended image2
ತಾಯಿ...ತಾಯಿಯೇ... ಭಾರತದ ಶೂಟರ್ ಜಸ್ಪಾಲ್ ರಾಣಾ ಸಾವಿನ ಸುದ್ದಿ SA ತಾಯಿಯೂ ನಿಧನ!
Recommended image3
Telegram Ban: 'ಮುಂದಿನ ನಿಷೇಧ ಯಾರ ಮೇಲೆ? ವಾಟ್ಸಾಪ್ ಮೇಲಾ?' ಟೆಲಿಗ್ರಾಂ ಬ್ಯಾನ್ ಮಾಡಿದ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ
Related Stories
Recommended image1
Air India ಪ್ರಯಾಣಿಕರಿಗೆ ಸಿಹಿ ಸುದ್ದಿ… ಶೀಘ್ರದಲ್ಲಿ ವಿಮಾನದಲ್ಲಿ ಸಿಗಲಿಗೆ ಈ ಎಲ್ಲಾ ಸೌಲಭ್ಯ!
Recommended image2
Air India AI2913: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ; ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ತುರ್ತು ಭೂಸ್ಪರ್ಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved