ಭಾರತ ನೀಡಿದ 402 ರನ್ ಬೃಹತ್ ಟಾರ್ಗೆಟ್ ಮುಂದೆ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡಿದೆ. ರಹಮತ್ ಶಾ ಬ್ಯಾಟಿಂಗ್ ಆಫ್ಘಾನಿಸ್ತಾನ ತಂಡವನ್ನು ಹೀನಾಯ ಸೋಲಿನಿಂದ ತಪ್ಪಿಸಿತ್ತು. ಆದರೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಭಾರತ ಸರಣಿ ಗೆದ್ದುಕೊಂಡಿತು.
ಲಖನೌ (ಜೂ.17) ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ 2ನೇ ಏಕದಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ 403 ರನ್ ಟಾರ್ಗೆಟ್ ನೀಡಿತ್ತು. ಬೃಹತ್ ಟಾರ್ಗೆಟ್ ಪಡೆದ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡಿದೆ. ಉತ್ತಮ ಆರಂಭ ಪಡೆದ ಬಳಿಕ ದಿಢೀರ್ ಕುಸಿತ ಕಂಡ ಆಫ್ಘಾನಿಸ್ತಾನ ತಂಡಕ್ಕೆ ರಹಮತ್ ಶಾ ಆಸೆರೆಯಾದರು. ಏಕಾಂಗಿ ಹೋರಾಟ ನೀಡಿದರು. ಆದರೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಆಫ್ಘಾನಿಸ್ತಾನ 44.3 ಓವರ್‌ನಲ್ಲಿ 232 ರನ್ ಸಿಡಿಸಿ ಸೋಲು ಕಂಡಿತು. ಭಾರತ 170 ರನ್ ಗೆಲುವಿನೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿತು.
ರಹಮತ್ ಶಾ ಏಕಾಂಗಿ ಹೋರಾಟ
ಆಫ್ಘಾನಿಸ್ತಾನ ಉತ್ತಮ ಆರಂಭ ಪಡೆದಿತ್ತು. ರೆಹಮಾನುಲ್ಹಾ ಗುರ್ಬಾಜ್ ಹಾಗೂ ಇಬ್ರಾಹಿಂ ಜರ್ದಾನ್ ಅರ್ಧಶತಕ ಜೊತೆಯಾಟ ನೀಡಿದ್ದರು. ಗರ್ಬಾಜ್ 33 ಎಸೆತದಲ್ಲಿ 44 ರನ್ ಸಿಡಿಸಿದ್ದರು. ಇತ್ತ ಇಬ್ರಾಹಿಂ 21 ರನ್ ಕಾಣಿಕೆ ನೀಡಿದ್ದರು. ಸೆದಿಖುಲ್ಹಾ ಅತಲ್ ಹೋರಾಟ ನೀಡಿ 42 ರನ್ ಸಿಡಿಸಿದರು. ತಂಡದ ವಿಕೆಟ್ ಪತನವಾಗುತ್ತಿದ್ದಂತೆ ರಹಮತ್ ಶಾ ಏಕಾಂಗಹಿ ಹೋರಾಟ ಆರಂಭಗೊಂಡಿತು. ರಹಮತ್ ಶಾಗೆ ಇತರರಿಂದ ಸಾಥ್ ಸಿಗಲಿಲ್ಲ. ಅರ್ಶದೀಪ್ ಸಿಂಗ್ ಹಾಗೂ ಗುರ್ನೂರ್ ಬ್ರಾರ್ ದಾಳಿಗೆ ಆಫ್ಘಾನಿಸ್ತಾನ ತತ್ತರಿಸಿತು. ಇತ್ತ ವಾಶಿಂಗ್ಟನ್ ಸುಂದರ್ ಹಾಗೂ ಪ್ರಿನ್ಸ್ ಯಾದವ್ ಕೂಡ ವಿಕೆಟ್ ಕಬಳಿಸಿ ಆಫ್ಘಾನಿಸ್ತಾನ ಕಟ್ಟಿ ಹಾಕಿದರು.
ಭಾರತಕ್ಕೆ 170 ರನ್ ಭರ್ಜರಿ ಗೆಲುವು
ಏಕಾಂಗಿ ಹೋರಾಟ ನೀಡಿದ ರಹಮತ್ ಶಾ 79 ರನ್ ಸಿಡಿಸಿ ಔಟಾದರು.ಇತ್ತಆಫ್ಘಾನಿಸ್ತಾನ 44.3 ಓವರ್‌ಗಳಲ್ಲಿ 232 ರನ್ ಸಿಡಿಸಿ ಆಲೌಟ್ ಆಯಿತು. ಭಾರತ 170 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದಕೊಂಡಿತು.
ಅತ್ಯಂತ ಗರಿಷ್ಠ ಅಂತರದ ಸೋಲು
ಆಫ್ಘಾನಿಸ್ತಾನಕ್ಕೆ ಈ ಸೋಲು ತಮ್ಮ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಅಂತರದ ಸೋಲಾಗಿ ಪರಿಣಮಿಸಿದೆ.
- 275 ರನ್ ಸೋಲು vs ಆಸ್ಟ್ರೇಲಿಯಾ ( 2015)
- 170 ರನ್ ಸೋಲು vs ಭಾರತ( 2026 )
- 155 ರನ್ ಸೋಲು vs ಶ್ರೀಲಂಕಾ (2024)
- 154 ರನ್ ಸೋಲು vs ಜಿಂಬಾಬ್ವೆ ( 2018)


