ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಮಹಾರಾಷ್ಟ್ರದಲ್ಲಿ ಉದ್ದವ್ ಶಿವಸೇನಾದಲ್ಲಿ ಬಂಡಾಯದ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಇಬ್ಬಾಗದ ಸುಳಿವು ಸಿಗುತ್ತಿದೆ. ಯುಪಿ ಸಚಿನ ಈ ಕುರಿತು ಸ್ಫೋಟಕ ಮಾಹಿತಿ ನೀಡಿದ್ದಾರೆ.

ಲಖನೌ (ಜೂ.17) ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಬಳಿಕ ಇಂಡಿ ಒಕ್ಕೂಟದಲ್ಲಿದ್ದ ಒಂದೊಂದು ಪಕ್ಷಗಳು ಇಬ್ಬಾಗದ ಆತಂಕ ಎದುರಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಾಯಕರು ಎನ್‌ಡಿಎಗೆ ಬೆಂಬಲ ಸೂಚಿಸಿದ್ದಾರೆ. ಇತ್ತ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದಲ್ಲಿ ಬಂಡಾಯ ತೀವ್ರಗೊಳ್ಳುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಉತ್ತರ ಪ್ರದೇಶದ ಸಮಾದವಾದಿ ಪಾರ್ಟಿಯಲ್ಲೂ ಬಂಡಾಯ ಸೂಚನೆ ಸಿಕ್ಕಿದೆ. ಈ ಕುರಿತು ಉತ್ತರ ಪ್ರದೇಶ ಸಚಿವ ಒಂ ಪ್ರಕಾಶ್ ರಾಜ್‌ಭಾರ್ ಟ್ವೀಟ್ ಮೂಲಕ ಕೋಲಾಹಲ ಎಬ್ಬಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಾಜವಾದಿ ಪಾರ್ಟಿ ನಾಯಕರು ಎನ್‌ಡಿಎ ಬೆಂಬಲ

ಉತ್ತರ ಪ್ರದೇಶಧ ವಿರೋಧ ಪಕ್ಷದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಸಮಾಜವಾದಿ ಪಾರ್ಟಿಯ ಬಹುತೇಕ ನಾಯರು ಎನ್‌ಡಿಎಗೆ ಬೆಂಬಲ ನೀಡಲು ಸಜ್ಜಾಗಿದ್ದಾರೆ ಎಂದು ರಾಜ್‌ಭಾರ್ ಹೇಳಿದ್ದಾರೆ. ಸಮಾಜವಾದಿ ಪಾರ್ಟಿಯ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಈಗಾಗಲೇ ಬಿಜೆಪಿ ಸಂಪರ್ಕಿಸಿದ್ದಾರೆ. ಇದರ ಬೆನ್ನಲ್ಲೇ ಹಲವು ಸಮಾಜವಾದಿ ಪಾರ್ಟಿ ನಾಯಕರು ಎನ್‌ಡಿಎಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ಟ್ವೀಟ್ ಮೂಲಕ ರಾಜ್‌ಭಾರ್ ಬಾಂಬ್ ಸಿಡಿಸಿದ್ದಾರೆ.

ರಾಮ್ ಗೋಪಾಲ್ ಯಾದವ್ ಈಗಾಗಲೇ ಅಮಿತ್ ಶಾಗೆ ಮನವಿ ಮಾಡಿದ್ದಾರೆ ಎಂದು ರಾಜ್‌ಭಾರ್ ಹೇಳಿದ್ದಾರೆ. ಗೋಮ್ತಿ ನದಿ ಹಗರಣ ಸಮಾಜವಾದಿ ಪಾರ್ಟಿ ನಾಯಕರಿಗೆ ಸುತ್ತಿಕೊಂಡಿದೆ. ಇದರ ಬೆನ್ನಲ್ಲೇ ನಾಯಕರು ಸಮಾಜವಾದಿ ಪಾರ್ಟಿಯಿಂದ ಹಲವು ನಾಯಕರು ಸ್ಥಳಾಂತರ ಮಾಡುತ್ತಿದ್ದಾರೆ ಎಂದು ರಾಜ್‌ಭಾರ್ ಹೇಳಿದ್ದಾರೆ.

ಸಮಾಜವಾದಿ ಪಾರ್ಟಿ ಸ್ಪಷ್ಟನೆ

ಸಮಾದವಾದಿ ಪಾರ್ಟಿಯಲ್ಲಿ ಯಾವುದೇ ಬಂಡಾಯವಿಲ್ಲ. ಒಂ ಪ್ರಕಾಶ್ ರಾಜ್‌ಭಾರ್ ಅವರ ಸುಹಲದೇವ ಭಾರತೀಯ ಸಮಾಜ ಪಾರ್ಟಿಯಲ್ಲಿರುವ ಒಟ್ಟು ನಾಯಕರು ಕಾರ್ಯಕರ್ತರಿಗಿಂತ ಹೆಚ್ಚು ಶಾಸಕರು ನಮ್ಮ ಪಾರ್ಟಿಯಲ್ಲಿದ್ದಾರೆ. ಮೊದಲು ಅವರ ಪಾರ್ಟಿ ಏನಾಗಿದೆ ಎಂದು ನೋಡಿಕೊಳ್ಳಲಿ. ಸಮಾಜವಾದಿ ಪಾರ್ಟಿ ಮತ್ತಷ್ಟು ಬಲಿಷ್ಠವಾಗಿದೆ ಎಂದು ಎಸ್‌ಪಿ ವಕ್ತಾರ ಮನೀಶ್ ಸಿಂಗ್ ಹೇಳದ್ದಾರೆ.

ದೇಶದಲ್ಲಿ ಇದೀಗ ಪ್ರಾದೇಶಿಕ ಪಾರ್ಟಿಗಳ ಬಂಡಾಯದ ಮಾತೇ ಕೇಳಿಬರುತ್ತಿದೆ. ಟಿಎಂಸಿ ಪಕ್ಷದ ಶಾಸಕರು, ಸಂಸದರು ಸೇರಿ 58 ಮಂದಿ ಎನ್‌ಡಿಎಗೆ ಬೆಂಬಲ ಸೂಚಿಸಿದ್ದಾರೆ. ಉದ್ದವ್ ಠಾಕ್ರೆ ಬಣದ ಶಿವಸೇನೆಯಲ್ಲೂ ಬಂಡಾಯದ ಬಿಸಿ ಕೇಳಿಬರುತ್ತಿದೆ. ಈ ಕುರಿತು ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.ಯಾರೆಲ್ಲಾ ಪಕ್ಷ ತೊರೆಯುತ್ತಿದ್ದಾರೋ ಅವರು ಸ್ವತಂತ್ರರು. ಆದರೆ ಯಾವುದೇ ಬಂಡಾಯ ಪಕ್ಷದಲ್ಲಿ ಇಲ್ಲಾ ಎಂದಿದ್ದಾರೆ.