- Home
- News
- India News
- India Latest News Live: ಶೀಘ್ರ ಇರಾನ್ ತೊರೆಯಿರಿ: ಯುದ್ಧಭೀತಿ ಬೆನ್ನಲ್ಲೇ ಭಾರತದಿಂದ ಮುಂಜಾಗ್ರತೆ
India Latest News Live: ಶೀಘ್ರ ಇರಾನ್ ತೊರೆಯಿರಿ: ಯುದ್ಧಭೀತಿ ಬೆನ್ನಲ್ಲೇ ಭಾರತದಿಂದ ಮುಂಜಾಗ್ರತೆ

ನವದೆಹಲಿ: ಇರಾನ್‌ನಲ್ಲಿ ಕಳೆದ 18 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಯ ಬೆದರಿಕೆ ಹಾಕುತ್ತಿರುವ ಕಾರಣ, ಇರಾನ್‌ನಲ್ಲಿರುವ ಭಾರತೀಯರಿಗೆ ಆದಷ್ಟು ಬೇಗ ದೇಶ ತೊರೆಯುವಂತೆ ಭಾರತ ಸರ್ಕಾರ ಸೂಚಿಸಿದೆ. ಬಗ್ಗೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ‘ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯರು (ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು, ಪ್ರವಾಸಿಗರು) ವಾಣಿಜ್ಯ ವಿಮಾನ ಸೇರಿದಂತೆ ಲಭ್ಯವಿರುವ ಸಾರಿಗೆ ಮೂಲಕ ದೇಶವನ್ನು ತೊರೆಯಿರಿ’ ಎಂದು ಒತ್ತಾಯಿಸಿದೆ.
ಜತೆಗೆ, ತುರ್ತು ಸಂದರ್ಭದಲ್ಲಿ 989128109115; 989128109109; 989128109102; 989932179359 ಅಥವಾ cons.tehran@mea.gov.in ಮೂಲಕ ತಮ್ಮನ್ನು ಸಂಪರ್ಕಿಸಲು ತಿಳಿಸಿದೆ. ದು ಕಡೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸರ್ಕಾರ ಬಲಪ್ರಯೋಗ, ಬಂಧನ, ಗಲ್ಲುಶಿಕ್ಷೆಯ ಬೆದರಿಕೆಯಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಇನ್ನೊಂದು ಕಡೆ ಅಮೆರಿಕ ಅಧ್ಯಕ್ಷ ಟ್ರಂಪ್ ದಾಳಿಯ ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಭಾರತ ಈ ಎಚ್ಚರಿಕೆ ನೀಡಿದೆ.