- Home
- Entertainment
- ಮೇಕಪ್ ಇಲ್ಲದೇ ಪ್ರಭಾಸ್ ಹೀರೋಯಿನ್‌ಗಳನ್ನು ನೋಡಿದ್ದೀರಾ? ಈ 7 ನಾಯಕಿಯರನ್ನು ನೀವು ಗುರುತಿಸೋದು ಕಷ್ಟ!
ಮೇಕಪ್ ಇಲ್ಲದೇ ಪ್ರಭಾಸ್ ಹೀರೋಯಿನ್‌ಗಳನ್ನು ನೋಡಿದ್ದೀರಾ? ಈ 7 ನಾಯಕಿಯರನ್ನು ನೀವು ಗುರುತಿಸೋದು ಕಷ್ಟ!
ಬೆಂಗಳೂರು: 'ದಿ ರಾಜಾ ಸಾಬ್' ಸಿನಿಮಾ ಮೂಲಕ ಪ್ರಭಾಸ್ ಗಮನ ಸೆಳೆದಿದ್ದಾರೆ. ಇದೀಗ ಈ ಸಿನಿಮಾ 200 ಕೋಟಿ ಕ್ಲಬ್ ಸೇರುವ ಹೊಸ್ತಿಲಲ್ಲಿದೆ. ಹೀಗಿರುವಾಗ, ಹಲವು ಸ್ಟಾರ್ ನಟಿಯರು ಈಗಾಗಲೇ ಪ್ರಭಾಸ್ ಜತೆ ತೆರೆ ಹಂಚಿಕೊಂಡಿದ್ದಾರೆ. ಆದರೆ ನೀವು ಯಾವತ್ತಾದರೂ ಮೇಕಪ್ ಇಲ್ಲದೇ ನೋಡಿದ್ದೀರಾ?

ಪ್ರಭಾಸ್ ಜತೆ ನಟಿಸಿರುವ ಹೀರೋಯಿನ್‌ಗಳು
ಹಲವು ಸ್ಟಾರ್ ನಟಿಯರು ಈಗಾಗಲೇ ಪ್ರಭಾಸ್ ಜತೆ ತೆರೆ ಹಂಚಿಕೊಂಡಿದ್ದಾರೆ. ಆದರೆ ನೀವು ಯಾವತ್ತಾದರೂ ಮೇಕಪ್ ಇಲ್ಲದೇ ನೋಡಿದ್ದೀರಾ?
1. ಅನುಷ್ಕಾ ಶೆಟ್ಟಿ
ಪ್ರಭಾಸ್ ನೆಚ್ಚಿನ ನಟಿಯರ ಪೈಕಿ ಕನ್ನಡತಿ ಅನುಷ್ಕಾ ಶೆಟ್ಟಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅನುಷ್ಕಾ ಹಾಗೂ ಪ್ರಭಾಸ್ ಮಿರ್ಚ್, ಬಾಹುಬಲಿಯಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಈ ಇಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವ ಗಾಳಿಸುದ್ದಿಯೂ ಇದೆ. ಅನುಷ್ಕಾ ಮೇಕಪ್ ಇಲ್ಲದೇ ಹೀಗೆ ಕಾಣುತ್ತಾರೆ. ಅಂದಹಾಗೆ ಅನುಷ್ಕಾ 40 ವರ್ಷ ದಾಟಿದ್ದರೂ ಬ್ಯಾಚುಲರ್.
2. ತಮನ್ನಾ ಭಾಟಿಯಾ:
ಪ್ರಭಾಸ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೋಡಿ ಕೂಡಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಜೋಡಿ ಬಾಹುಬಲಿ ಹಾಗೂ ರೆಬೆಲ್‌ನಂತಹ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು, ಹಿಂದಿ ಭಾಷೆಗಳಲ್ಲಿ ತಮನ್ನಾ ಭಾಟಿಯಾ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಈಕೆಯನ್ನು ಮೇಕಪ್ ಇಲ್ಲದೇ ಗುರುತುಹಿಡಿಯೋದು ಕಷ್ಟ ಕಷ್ಟ.
3. ನಯನತಾರ:
ಬಹುಭಾಷಾ ನಟಿ ನಯನತಾರಾ ಜತೆ ಪ್ರಭಾಸ್ ಯೋಗಿಯಂತಹ ಹಿಟ್ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದಾರೆ. ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿರುವ ನಯನತಾರಾ ಮೇಕಪ್ ಇಲ್ಲದೇ ಗುರುತು ಹಿಡಿಯೋದು ಕಷ್ಟ. ನಯನತಾರಾ ದಕ್ಷಿಣ ಭಾರತದ ಟಾಪ್ ನಾಯಕಿಯರಲ್ಲಿ ಒಬ್ಬರು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
4. ಪೂಜಾ ಹೆಗ್ಡೆ:
ಪೂಜಾ ಹೆಗ್ಡೆ ಹಾಗೂ ಪ್ರಭಾಸ್ ರಾಧೆ ಶ್ಯಾಮ್ ಎನ್ನುವ ಲವ್ ಸ್ಟೋರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಸಿನಿಪ್ರಿಯರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಅಂದಹಾಗೆ ಪೂಜಾ ಹೆಗ್ಡೆ ಮೇಕಪ್ ಇಲ್ಲದೇ ಹೊರಗೆ ಕಾಣಿಸಿಕೊಳ್ಳುವುದೇ ಇಲ್ಲ. ಮೇಕಪ್ ಇಲ್ಲದೇ ಪೂಜಾ ಹೆಗ್ಡೆ ಹೇಗೆ ಕಾಣುತ್ತಾರೆ ಎನ್ನುವುದನ್ನು ನೀವೇ ನೋಡಿ.
5. ದೀಪಿಕಾ ಪಡುಕೋಣೆ:
ಕನ್ನಡತಿ, ಬಾಲಿವುಡ್‌ನ ಸಹಜ ಸುಂದರ ನಟಿ ದೀಪಿಕಾ ಪಡುಕೋಣೆ, ಪ್ರಭಾಸ್ ಜತೆ ಕಲ್ಕಿಯಂತಹ ಬಿಗ್ ಬಜೆಟ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಬ್ಲಾಕ್‌ಬಸ್ಟರ್ ಕೂಡಾ ಆಗಿದ್ದು ಈಗ ಇತಿಹಾಸ. ದೀಪಿಕಾ ಪಡುಕೋಣೆಯನ್ನು ಮೇಕಪ್ ಇಲ್ಲದೇ ಇದ್ದಾಗ ಹೀಗೆ ಕಾಣಿಸುತ್ತಾರೆ.
6. ಕಾಜಲ್ ಅಗರ್ವಾಲ್:
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಕಾಜಲ್ ಅಗರ್ವಾಲ್ ಹಾಗೂ ಪ್ರಭಾಸ್ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮೇಕಪ್ ಇಲ್ಲದ ಕಾಜಲ್ ಗುರುತಿಸೋದು ಅಭಿಮಾನಿಗಳಿಗೆ ಸ್ವಲ್ಪ ಕಷ್ಟವಾಗೋದು ಗ್ಯಾರಂಟಿ.
7. ತ್ರಿಶಾ ಕೃಷ್ಣನ್:
ತ್ರಿಶಾ ಕೃಷ್ಣನ್ ಹಾಗೂ ಪ್ರಭಾಸ್ ಮೊದಲಿಗೆ ವರ್ಷಂನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಪೌರ್ಣಮಿಯಲ್ಲೂ ಈ ಜೋಡಿ ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು. 42 ವರ್ಷದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ತ್ರಿಶಾ ಅವರನ್ನು ಮೇಕಪ್ ಇಲ್ಲದೇ ಗುರುತಿಸೋದು ಕಷ್ಟವೇ ಸರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

