Will Mumbai Get Its First BJP Mayor? BMC Election Exit Polls Predict History ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶಗಳ ಮೇಲೆ ಎಲ್ಲರೂ ಗಮನಹರಿಸಿದ್ದರೂ, ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳು ಮಹಾಯುತಿ ಬಹುಮತ ಪಡೆಯುತ್ತದೆ ಎಂದು ಭವಿಷ್ಯ ನುಡಿದಿವೆ.
ಮುಂಬೈ(ಜ.15): ಮುಂಬೈ ಮಹಾನಗರ ಪಾಲಿಕೆಯ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ, ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ಬಹುಮತ ಪಡೆಯುತ್ತದೆ ಎಂದು ಹಲವು ಸಂಸ್ಥೆಗಳು ಭವಿಷ್ಯ ನುಡಿದಿವೆ. ಆದ್ದರಿಂದ, ಮುಂಬೈ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮುಂಬೈ ಮೇಯರ್ ಆದ ಇತಿಹಾಸವನ್ನು ಬಿಜೆಪಿ ಮಾಡಲಿದೆಯೇ? ಎನ್ನುವ ವಿಚಾರದ ಮೇಲೆ ಎಲ್ಲರ ಗಮನ ಶುರುವಾಗಿದೆ.ಪೋಲ್ ಆಫ್ ಪೋಲ್ಸ್ ಹಾಗೂ ಸಾರ್ವಜನಿಕ ಅಭಿಪ್ರಾಯದ ಎಕ್ಸಿಟ್ ಪೋಲ್‌ಗಳು ಕೂಡ ಮಹಾಯುತಿ ಮೈತ್ರಿಕೂಟವು ಮುಂಬೈ ಮಹಾನಗರ ಪಾಲಿಕೆಯಲ್ಲಿ 138 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿವೆ. ಈಗಾಗಲೇ, ಕಾಂಗ್ರೆಸ್, ಶಿವಸೇನೆ ಮತ್ತು ಆರ್‌ಪಿಐ ಮುಂಬೈನಲ್ಲಿ ಮೇಯರ್ ಆಗಿರುವುದರಿಂದ, ಇತಿಹಾಸದಲ್ಲಿ ಮೊದಲ ಬಾರಿಗೆ ಮುಂಬೈ ಮಹಾನಗರ ಪಾಲಿಕೆಗೆ ಬಿಜೆಪಿ ಮೇಯರ್ ಆಗಲಿದೆಯೇ ಅನ್ನೋ ಕುತೂಹಲ ಗರಿಗೆದರಿದೆ.
ಎಲ್ಲರ ಗಮನ ಮುಂಬೈ ಮಹಾನಗರ ಪಾಲಿಕೆಯ ಫಲಿತಾಂಶದ ಮೇಲಿದ್ದರೂ, ಮತದಾನದ ನಂತರ ಬಿಡುಗಡೆಯಾದ ಎಕ್ಸಿಟ್ ಪೋಲ್ ಅಂದಾಜಿನ ಪ್ರಕಾರ, ಮುಂಬೈನಲ್ಲಿ ಮಹಾಯುತಿ ಸಂಪೂರ್ಣ ಬಹುಮತ ಪಡೆಯುವುದು ಖಚಿತವಾಗಿದೆ. ಮಹಾಯುತಿ 138 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ, ಮುಂಬೈ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಮೇಯರ್ ಆಯ್ಕೆಯಾಗಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಇಲ್ಲಿಯವರೆಗೆ, ಐತಿಹಾಸಿಕ ಮತ್ತು ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಅನ್ನು ಕಾಂಗ್ರೆಸ್, ಶಿವಸೇನೆ ಮತ್ತು ಆರ್‌ಪಿಐ ಹೊಂದಿತ್ತು. ಇನ್ನು 1997ರಿಂದ 2017ರವರೆಗೂ ಮುಂಬೈ ಮಹಾನಗರ ಪಾಲಿಕೆಗೆ ಶಿವಸೇನೆ ನಾಯಕ ಮೇಯರ್ ಆಗಿದ್ದರು.
ಆರ್‌ಪಿಐನಿಂದ ಮೇಯರ್ ಆಗಿದ್ದ ಚಂದ್ರಕಾಂತ್ ಹಂಡೋರ್
ಚಂದ್ರಕಾಂತ್ ಹಂಡೋರ್ ಅವರು ಮಹಾರಾಷ್ಟ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯ ಮಾಜಿ ಕ್ಯಾಬಿನೆಟ್ ಸಚಿವರಾಗಿದ್ದರು. ಅವರು 1992 ರಿಂದ 1993 ರ ಅವಧಿಗೆ ಮುಂಬೈ ಮೇಯರ್ ಆಗಿ ಆಯ್ಕೆಯಾದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ, ಆರ್‌ಪಿಐನ ಚಂದ್ರಕಾಂತ್ ಹಂಡೋರ್ ಮುಂಬೈ ಮೇಯರ್ ಆಗಿ ನೇಮಕವಾಗಿದ್ದರು.


