ಕೇರಳದ ಕಣ್ಣೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಶಿಲ್ಪಾ ಎಂಬ ಮಹಿಳೆಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಗೋವಾದಲ್ಲಿ ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ಆಕೆ, ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದಳು. ಮತ್ತೆ ಡ್ರಗ್ಸ್ ದಂಧೆಗಿಳಿದ ಆಕೆಯನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಒಮ್ಮೆ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಮಹಿಳೆಯನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ. ಮಾದಕ ದ್ರವ್ಯಗಳ ಮಾರಾಟ ಮಾಡುವ ಪ್ರಕರಣದಲ್ಲಿ ಈ ಹಿಂದೆ ಗೋವಾದಲ್ಲಿ ಜೈಲು ಪಾಲಾಗಿದ್ದ ಮಹಿಳೆ 2 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದಳು. ಆದರೆ ಜೈಲೂಟ ತಿಂದು ಬಂದರೂ ಆಕೆಯ ಬುದ್ಧಿ ಬದಲಾಗಿರಲಿಲ್ಲ, ಮತ್ತೆ ಅದೇ ದಂಧೆ ಶುರು ಮಾಡಿದ ಆಕೆಯನ್ನು ಪೊಲೀಸರು ಮತ್ತೆ ಬಂಧಿಸಿ ಜೈಲಿಗಟ್ಟಿದ್ದು, ಆಕೆಯ ಬಳಿ ಇದ್ದ ಮಾರಕ ಸಿಂಥೆಟಿಕ್ ಡ್ರಗ್ ಮೆಥಾಂಫೆಟಮೈನ್ ಡ್ರಗ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ದೇವರ ನಾಡು ಕೇರಳದ ಕಣ್ಣೂರಿನ ಪಪ್ಪಿನಿಸೇರಿಯಲ್ಲಿ 32 ವರ್ಷದ ಶಿಲ್ಪಾ ಬಂಧಿತ ಮಹಿಳೆ. ಈಕೆ ಕಲ್ಯಾಶ್ಸೆರಿ 5ನೇ ಬ್ಲಾಕ್ ನಿವಾಸಿಯಾಗಿದ್ದು, ಕಣ್ಣೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರಗ್ ಮಾಫಿಯಾದ ಪ್ರಮುಖ ಪೆಡ್ಲರ್ ಈಕೆ ಎಂದು ಅಬಕಾರಿ ಪೊಲೀಸರು ಹೇಳುತ್ತಿದ್ದಾರೆ.

ಗೋವಾದಲ್ಲಿಯೂ ಇದೇ ರೀತಿ ಮಾದಕ ವಸ್ತು ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಆಕೆ ಗೋವಾದಲ್ಲಿ ಹಲವು ತಿಂಗಳುಗಳ ಕಾಲ ಜೈಲಿನಲ್ಲಿದ್ದಳು ಕೇವಲ ಎರಡು ತಿಂಗಳ ಹಿಂದಷ್ಟೇ ಆಕೆ ಬಿಡುಗಡೆಯಾಗಿದ್ದಳು. ಆದರೆ ಬಿಡುಗಡೆಯಾದ ನಂತರವೂ ಆಕೆ ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಸಕ್ರಿಯಳಾಗಿದ್ದಾಳೆ ಎಂಬ ರಹಸ್ಯ ಮಾಹಿತಿ ಅಬಕಾರಿ ಇಲಾಖೆಗೆ ಸಿಕ್ಕಿತು. ಇದರ ಬೆನ್ನಲ್ಲೇ ಕಾರ್ಯಾಚರಣೆಗಿಳಿದ ಅಬಕಾರಿ ಪೊಲೀಸರು ಕಳೆದ ಕೆಲವು ದಿನಗಳಿಂದ ಆಕೆಯ ಮೇಲೆ ಕಟ್ಟುನಿಟ್ಟಿನ ಕಣ್ಗಾವಲಿಟ್ಟಿದ್ದರು.

ಇದನ್ನೂ ಓದಿ: ಹಬೀಬುಲ್ಲಾ ಹಬೀಬಿ ಅಂತ ಹೇಳ್ಕೊಂಡು ಗಂಗಾ ಘಾಟ್‌ನಲ್ಲಿ ಸುತ್ತಾಡ್ತಿದ್ದ ದುಬೈ ಇಬ್ಬರು ದುಬೈ ಶೇಕ್‌ಗಳ ಬಂಧನ..!

ಪಾಪಿನಿಸ್ಸೆರಿ ಅಬಕಾರಿ ನಿರೀಕ್ಷಕ ಇ.ವೈ. ಜಸಿರಾಲಿ ನೇತೃತ್ವದ ತಂಡ ನಡೆಸಿದ ಮಿಂಚಿನ ದಾಳಿಯಲ್ಲಿ ಆರೋಪಿ ಶಿಲ್ಪಾ ಸಿಕ್ಕಿಬಿದ್ದಿದ್ದು, ಅಬಕಾರಿ ತಂಡವು ಅವರ ಬಳಿ ಇದ್ದ 0.459 ಗ್ರಾಂ ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಂಡಿದೆ. ಮಹಿಳೆಗೆ ಮಾದಕವಸ್ತು ಪೂರೈಕೆದಾರರು ಮತ್ತು ಕಣ್ಣೂರಿನಲ್ಲಿರುವ ಮಾದಕವಸ್ತು ಜಾಲದ ಬಗ್ಗೆ ಅಬಕಾರಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಆರೋಪಿಯನ್ನು ಕಣ್ಣೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಕೇರಳ ಕ್ರೀಡಾ ಹಾಸ್ಟೆಲ್‌ನಲ್ಲಿ ಇಬ್ಬರು ಹುಡುಗಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ