ಕೆಲವರು ಸುಮ್ಮನಿರಲಾರದೇ ಏನೋ ಮಾಡುವುದಕ್ಕೆ ಹೋಗಿ ತಮಗೆ ತಾವೇ ಹಾನಿ ಮಾಡಿಕೊಳ್ತಾರೆ. ಅದೇ ರೀತಿ ಇಲ್ಲೊಂದು ಕಡೆ ದುಬೈ ಶೇಕ್ ರೀತಿ ವೇಷ ಧರಿಸಿ ಮಜಾ ಮಾಡುವುದಕ್ಕೆ ಹೋಗಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಡಿಟೇಲ್ ಸ್ಟೋರಿ ಇಲ್ಲಿದೆ.
ಪ್ರಪಂಚದಲ್ಲಿ ಎಂತೆಂಥಾ ಹುಚ್ಚು ಜನರಿರ್ತಾರೆ ಅಂತ ಊಹಿಸೋದಕ್ಕೂ ಆಗೋಲ್ಲ, ಕೆಲವರು ಸುಮ್ಮನಿರಲಾರದೇ ಏನೋ ಮಾಡುವುದಕ್ಕೆ ಹೋಗಿ ತಮಗೆ ತಾವೇ ಹಾನಿ ಮಾಡಿಕೊಳ್ತಾರೆ. ಅದೇ ರೀತಿ ಇಲ್ಲೊಂದು ಕಡೆ ದುಬೈ ಶೇಕ್ ರೀತಿ ವೇಷ ಧರಿಸಿ ಮಜಾ ಮಾಡುವುದಕ್ಕೆ ಹೋಗಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಇಬ್ಬರು ಸ್ಥಳೀಯ ಯುವಕರು ತಾವು ದುಬೈ ವಾಸಿಗಳು ಅಂತ ಹೇಳ್ಕೊಂಡು ದುಬೈ ಶೇಕ್‌ಗಳ ರೀತಿಯೇ ವೇಷ ಹಿಂದೂ ಪವಿತ್ರ ಕ್ಷೇತ್ರವಾದ ಹರಿದ್ವಾರದ ಬೀದಿಗಳು ಗಂಗಾ ಘಾಟ್‌ಗಳಲ್ಲಿ ಸುತ್ತಾಡುವುದಕ್ಕೆ ಆರಂಭಿಸಿದ್ದಾರೆ. ಇವರ ಅವತಾರ ನೋಡಿ ಗಂಗಾ ಘಾಟ್‌ನಲ್ಲಿದ್ದ ಅರ್ಚಕರು ಅವರನ್ನು ಅಲ್ಲೇ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಅವರು ತಮ್ಮನ್ನು ತಾವು ಹಿಬಿಬುಲ್ಲಾ ಹಾಗೂ ಹಬೀಬಿ ದುಬೈನಿಂದ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.
ನಂತರ ಘಾಟ್‌ನಲ್ಲಿದ್ದ ಅರ್ಚಕರು ಇವರಿಬ್ಬರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಂತರ ವಿಚಾರಣೆ ವೇಳೆ ಇವರ ನಿಜ ಸ್ವರೂಪ ಬಯಲಾಗಿದೆ. ಹೀಗೆ ಗಂಗಾತಟದಲ್ಲಿ ದುಬೈ ಶೇಕ್ ರೀತಿ ವೇಷ ಹಾಕಿ ಜನರನ್ನು ಯಮಾರಿಸಲು ಹೋಗಿ ಪೊಲೀಸರ ಅತಿಥಿಗಳಾದ ಯುವಕರನ್ನು 22 ವರ್ಷ ಪ್ರಾಯದ ನವೀನ್ ಕುಮಾರ್ ಹಾಗೂ ಪ್ರಿನ್ಸ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಹರಿದ್ವಾರದ ಎಸ್‌ಐಡಿಸಿಯುಎಲ್‌ನ ನಿವಾಸಿಗಳಾಗಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಪೊಲೀಸ್ ವಿಚಾರಣೆ ವೇಳೆ ಇವರಿಬ್ಬರು ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ದುಬೈ ಶೇಕ್‌ಗಳಂತೆ ವೇಷ ಧರಿಸಿ ಗಂಗಾ ಘಾಟ್‌ನಲ್ಲಿ ಓಡಾಡಿರುವುದಾಗಿ ಹೇಳಿಕೊಂಡಿದ್ದಾರೆ. ನಂತರ ಇಬ್ಬರು ತಮ್ಮ ಕೃತ್ಯದ ಬಗ್ಗೆ ಪೊಲೀಸರ ಮುಂದೆ ಕ್ಷಮೆ ಕೇಳಿದ್ದಾರೆ. ಕೃತ್ಯದಿಂದಾಗಿ ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಲ್ಲಿ ಕ್ಷಮೆ ಯಾಚಿಸುವುದಾಗಿ ಅವರು ಕ್ಷಮೆ ಕೋರಿದ ನಂತರ ಪೊಲೀಸರು ಈ ಇಬ್ಬರು ಯುವಕರನ್ನು ಬಿಟ್ಟು ಕಳುಹಿಸಿದ್ದಾರೆ.
ಆದರೆ ಇವರು ದುಬೈ ಶೇಕ್ ರೀತಿ ವೇಷ ಧರಿಸಿ ಗಂಗಾ ತಟದಲ್ಲಿ ಓಡಾಡ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ, ಅವರು ತಾವು ಭಾರತದಲ್ಲಿ ಎಲ್ಲಿ ಬೇಕಾದರೂ ಓಡಾಡಬಹುದು ಎಂದು ಹೇಳುವುದನ್ನು ಕೇಳಬಹುದಾಗಿದೆ. ಈ ಸಮಯದಲ್ಲಿಯೇ ಅಲ್ಲಿದ್ದ ಅರ್ಚಕರೊಬ್ಬರು ಇಲ್ಲಿಂದ ಹೋಗುವಂತೆ ಅವರಿಗೆ ಹೇಳಿದ್ದಾರೆ. ನಂತರ ಅದೇ ಅರ್ಚಕರು ಅಲ್ಲಿ ಕಾರ್ಯಾಚರಿಸುವ ಗಂಗಾ ಸಭಾದ ಸದಸ್ಯರಿಗೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಇವರು ಪೊಲೀಸ್ ಠಾಣೆಯಲ್ಲಿ ಕ್ಷಮೆ ಕೇಳುತ್ತಿರುವ ವೀಡಿಯೋವನ್ನು ಕೂಡ ಹರಿದ್ವಾರದ ಪೊಲೀಸರು ಬಿಡುಗಡೆ ಮಾಡಿದ್ದು, ಇವರು ಹೀಗೆ ಅರೇಬಿಕ್ ವೇಷ ಧರಿಸಿ ಈ ಹಿಂದೆಯೂ ಇಂತಹದ್ದೇ ವೀಡಿಯೋ ಮಾಡಿದ್ದರು. ಆದರೆ ಹರ್ ಕಿ ಪೌರಿ ಪ್ರದೇಶದಕ್ಕೆ ಅರೇಬಿಕ್ ಧಿರಿಸಿನಲ್ಲಿ ಬರುವಂತಿಲ್ಲ ಎಂಬ ವಿಚಾರ ಅವರಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಕೇರಳ ಕ್ರೀಡಾ ಹಾಸ್ಟೆಲ್‌ನಲ್ಲಿ ಇಬ್ಬರು ಹುಡುಗಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಹರಿದ್ವಾರದ ಕುಂಭಮೇಳ ಪ್ರದೇಶದಲ್ಲಿರುವ ಎಲ್ಲಾ ಗಂಗಾ ಘಾಟ್‌ಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವಂತೆ ಹಿಂದೂ ಗುಂಪುಗಳು ಒತ್ತಾಯಿಸುತ್ತಿರುವಾಗಲೇ ಇಂತಹದೊಂದು ಘಟನೆ ನಡೆದಿದ್ದರಿಂದ ಆ ಪ್ರದೇಶದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹರಿದ್ವಾರದಲ್ಲಿ ಹರ್ ಕಿ ಪೌರಿ ಮತ್ತು ಸುತ್ತಮುತ್ತಲಿನ ಗಂಗಾ ಘಾಟ್‌ಗಳನ್ನು ನಿರ್ವಹಿಸುವ ಮತ್ತು ನಿರ್ವಹಿಸುವ ಸಂಸ್ಥೆಯಾದ ಶ್ರೀ ಗಂಗಾ ಸಭಾವೂ, ಉತ್ತರಾಖಂಡ ಸರ್ಕಾರವು 2027 ರಲ್ಲಿ ನಡೆಯುವ ಅರ್ಧ ಕುಂಭಕ್ಕೂ ಮೊದಲು ಕುಂಭಮೇಳ ಪ್ರದೇಶವನ್ನು ಹಿಂದೂಯೇತರರಿಗೆ ನಿರ್ಬಂಧಿತ ವಲಯವೆಂದು ಘೋಷಿಸಬೇಕೆಂದು ಒತ್ತಾಯಿಸಿದೆ.
ಇದನ್ನೂ ಓದಿ: ತನ್ನ ವಾಯುಪ್ರದೇಶ ಹಠಾತ್ ಮುಚ್ಚಿದ ಇರಾನ್: ಭಾರತ ಅಮೆರಿಕಾಗೆ ನಡುವೆ ಸಂಚರಿಸುತ್ತಿದ್ದ ಹಲವು ವಿಮಾನಗಳ ಹಾರಾಟ ರದ್ದು


