
ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
'ಕಾಕ್ರೋಚ್ ಜನತಾ ಪಾರ್ಟಿ' ಎಂಬ ವಿಡಂಬನಾತ್ಮಕ ವೇದಿಕೆಯು ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, ತನ್ನನ್ನು 'ನಿರುದ್ಯೋಗಿ ಯುವಕರ ಧ್ವನಿ' ಎಂದು ಕರೆದುಕೊಂಡಿದೆ. ಕೇಂದ್ರ ಸರ್ಕಾರವು ಇದರ 'ಎಕ್ಸ್' ಖಾತೆಯನ್ನು ನಿರ್ಬಂಧಿಸಿದೆ.
ಬೆಂಗಳೂರು (ಮೇ.22): ಕೇವಲ ಒಂದು ವಾರದಲ್ಲಿ ಇಂಟರ್ನೆಟ್ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿರುವ ವಿಡಂಬನಾತ್ಮಕ ವೇದಿಕೆ 'ಕಾಕ್ರೋಚ್ ಜನತಾ ಪಾರ್ಟಿ' (CJP) ಈಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಇನ್‌ಸ್ಟಾಗ್ರಾಂನಲ್ಲಿ 1.9 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿರುವ ಈ ವೇದಿಕೆ, "ಸೋಮಾರಿಗಳು ಮತ್ತು ನಿರುದ್ಯೋಗಿ ಯುವಕರ ಧ್ವನಿ" ಎಂದು ತನ್ನನ್ನು ಘೋಷಿಸಿಕೊಂಡಿದೆ.
ಪಕ್ಷಾಂತರಿಗಳಿಗೆ 20 ವರ್ಷ ನಿಷೇಧ ಹಾಗೂ ಮಹಿಳೆಯರಿಗೆ ಶೇ. 50 ಮೀಸಲಾತಿಯಂತಹ ಗಂಭೀರ ಪ್ರಣಾಳಿಕೆ ಹೊರಡಿಸಿರುವ ಈ ವೇದಿಕೆಯ 'ಎಕ್ಸ್' ಖಾತೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ನಿರ್ಬಂಧಿಸಿದೆ.

'ಕಾಕ್ರೋಚ್ ಜನತಾ ಪಾರ್ಟಿ' ಬೆನ್ನಿಗೆ ನಿಂತ ಶಶಿ ತರೂರ್: ವಿಪಕ್ಷಗಳಿಗೆ ಕಾಂಗ್ರೆಸ್ ಸಂಸದ ಕೊಟ್ಟ ಬಿಗ್ ಸಲಹೆ ಏನು?
ಇದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಖಂಡಿಸಿದ್ದು, ವಿಪಕ್ಷಗಳು ಈ ಯುವ ಅಲೆಯನ್ನು ಬಳಸಿಕೊಳ್ಳಲು ಕರೆ ನೀಡಿದ್ದಾರೆ. ಸದ್ಯ ಈ ವಿದ್ಯಮಾನವು ದೇಶದ ಇಂದಿನ ನಿರುದ್ಯೋಗಿ ಯುವ ಪೀಳಿಗೆಯ (Gen Z) ಗಂಭೀರ ರಾಜಕೀಯ ಹೋರಾಟವೋ ಅಥವಾ ಕೇವಲ ಸೋಷಿಯಲ್ ಮೀಡಿಯಾ ಕ್ರೇಜೋ ಎಂಬ ಚರ್ಚೆ ಮುಂಚೂಣಿಗೆ ಬಂದಿದೆ.