BBK 13: ಬಿಗ್‌ಬಾಸ್ ಕನ್ನಡ ಮೊದಲ ಎಲಿಮಿನೇಷನ್: ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು?
ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವೀಕೆಂಡ್ ಪಂಚಾಯ್ತಿ! ವಿಮಾನದಲ್ಲಿರುವ ನಾಮಿನೇಟ್ ಆದ ಸದಸ್ಯರಲ್ಲಿ ಯಾರು ಹೊರಹೋಗಲಿದ್ದಾರೆ? ಸೌಂದರ್ಯಾ ಶೆಟ್ಟಿ ಸೇಫ್! ಪೂರ್ತಿ ವಿವರ ತಿಳಿಯಲು ಕ್ಲಿಕ್ ಮಾಡಿ.

ಬಿಗ್‌ಬಾಸ್ ಮೊದಲ ವೀಕೆಂಡ್ ಪಂಚಾಯ್ತಿ
ಇಂದು ಕನ್ನಡ ಬಿಗ್‌ಬಾಸ್ ಸೀಸನ್ 13ರ ಮೊದಲ ಪಂಚಾಯ್ತಿ ನಡೆಯಲಿದೆ. ಹಾಗೆಯೇ ಒಬ್ಬರಿಗೆ ಬಿಗ್‌ಬಾಸ್ ಆಟ ನಾಳೆಗೆ ಮುಕ್ತಾಯವಾಗಲಿದೆ. ಬಿಗ್‌ಬಾಸ್ ಶೋ ಎರಡು ತಂಡಗಳಾಗಿವೆ. ವಿಮಾನದಲ್ಲಿರೋ ಎಲ್ಲಾ ಪ್ರಯಾಣಿಕರು ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದಾರೆ. ಮನೆಯಲ್ಲಿರುವ ಸದಸ್ಯರು ಸೇಫ್ ಆಗಿದ್ದಾರೆ.
ನಾಮಿನೇಟ್ ಸದಸ್ಯರು ಯಾರು?
ವಿಮಾನದಲ್ಲಿರೋ ಸದಸ್ಯರ ಪೈಕಿ ಆಸಿಯಾ ಫಿರ್ದೋಸ್, ಮಾಡರ್ನ್ ಮಹಾಕವಿ ಮಂಜ ಮತ್ತು ಓಂಪ್ರಕಾಶ್ ರಾವ್ ಒಂದು ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಿ ಬಂದಿದ್ದಾರೆ. ಇನ್ನುಳಿದ ಕಿರಣ್ ಶಾಸ್ತ್ರಿ, ಪ್ರಥಮಾ ಪ್ರಸಾದ್, ಅವಿನಾಶ್ ಮತ್ತು ಧನುಷ್ ಅವರಿಗೆ ಮನೆ ಪ್ರವೇಶಿಸುವ ಅದೃಷ್ಟ ಇನ್ನು ದೊರೆತಿಲ್ಲ. ಈ ನಾಲ್ವರ ಪೈಕಿ ಒಬ್ಬರು ನಾಮಿನೇಟ್ ಆದ್ರ ಮನೆಯನ್ನು ನೋಡದೇ ಹೋದಂತೆ ಆಗುತ್ತದೆ.
ಸೌಂದರ್ಯಾ ಶೆಟ್ಟಿ ಅದೃಷ್ಟ
ಶುಕ್ರವಾರ ಸಂಚಿಕೆಯ ಫೈನಲ್ ಕಾಲ್ ಟಾಸ್ಕ್‌ನಿಂದ ಸೌಂದರ್ಯಾ ಶೆಟ್ಟಿ ಸೇವ್ ಆಗಿದ್ದು, ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಡೈಮಂಡ್ ಹುಡುಕಾಟ ಟಾಸ್ಕ್‌ನಂತೆ ನಡೆದ ಆಟದಲ್ಲಿ ಮನೆ ಸದಸ್ಯರ ಒಮ್ಮತದ ಮೇರೆಗೆ ಸೌಂದರ್ಯಾ ಅವರನ್ನ ಆಯ್ಕೆ ಮಾಡಲಾಗಿತ್ತು. ಹಾಗಾಗಿ ಕೊನೆ ಕ್ಷಣದಲ್ಲಿ ಸೌಂದರ್ಯಾ ಶೆಟ್ಟಿ ಸೇಫ್ ಆಗಿದ್ದಾರೆ.
ಗಗನ್ ಚಾಣಾಕ್ಷತೆ
ಬಿಗ್‌ಬಾಸ್ ಆರಂಭವಾದ ಮೊದಲ ದಿನದಿಂದಲೂ ಗಗನ್ ಚಿನ್ನಪ್ಪ ಅತ್ಯಂತ ಚಾಣಾಕ್ಷತನದಿಂದ ಆಟ ಆಡಿಕೊಂಡು ಬಂದಿದ್ದಾರೆ. ಮೊದಲ ಟಾಸ್ಕ್ ಗೆಲ್ಲುವ ಮೂಲಕ ಮನೆಯ ವಿಐಪಿ ಆಗಿರೋ ಗಗನ್ ಎಲ್ಲಾ ಆಟಗಳಿಗೆ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಗಗನ್ ಆಟದ ವೈಖರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಯಾರು ಹೋಗಬಹುದು?
ಮನೆಯಿಂದ ಯಾರು ಹೋಗಬಹುದು ಎಂಬುದರ ಬಗ್ಗೆ ಸ್ಪರ್ಧಿಗಳ ನಡುವೆಯೂ ತೀವ್ರ ಚರ್ಚೆ ನಡೆಯುತ್ತಿದೆ. ಸೌಂದರ್ಯ ಶೆಟ್ಟಿ ಪ್ರಕಾರ, ಧನುಷ್ ಅಥವಾ ಅವಿನಾಶ್ ಹೋಗಬಹುದಂತೆ. ಮತ್ತೊಂದೆಡೆ ಪ್ರಥಮಾ ಪ್ರಸಾದ್ ಬಗ್ಗೆ ಸೌಂದರ್ಯಾ ಶೆಟ್ಟಿ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

