- Home
- Entertainment
- TV Talk
- ಬ್ಯಾಂಕಾಕ್ನಲ್ಲಿ Karna Serial: ಕರ್ಣ- ನಿಧಿ ಹನಿಮೂನ್ ಸ್ಪೆಷಲ್; ನಡೆಯುತ್ತಾ ಅನಾಹುತ
ಬ್ಯಾಂಕಾಕ್ನಲ್ಲಿ Karna Serial: ಕರ್ಣ- ನಿಧಿ ಹನಿಮೂನ್ ಸ್ಪೆಷಲ್; ನಡೆಯುತ್ತಾ ಅನಾಹುತ
ಕರ್ಣ ತನ್ನ ಮಗನೆಂದು ತಿಳಿದು ರಮೇಶ್ ಪ್ರೀತಿ ತೋರುತ್ತಿದ್ದು, ಕರ್ಣ ಮತ್ತು ನಿಧಿಯನ್ನು ಬ್ಯಾಂಕಾಕ್ ಹನಿಮೂನ್‌ಗೆ ಕಳುಹಿಸಿದ್ದಾರೆ. ಅಲ್ಲಿ ನಿಧಿಯ ಆಸೆಗಳನ್ನು ಈಡೇರಿಸಲು ಕರ್ಣ ಸಿದ್ಧನಾಗಿದ್ದು, ವಿಮಾನದಲ್ಲಿನ ಘಟನೆಯು ಅವರ ಪ್ರಯಾಣದ ಬಗ್ಗೆ ಅನುಮಾನ ಮೂಡಿಸಿದೆ.

ಎಲ್ಲವೂ ಸುಸೂತ್ರ
ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ರಮೇಶನಿಗೆ ಕರ್ಣ ತನ್ನ ಸ್ವಂತ ಮಗ ಎಂದುತಿಳಿಯುತ್ತಲೇ ಆತನಿಗಾಗಿ ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾನೆ.
ಹನಿಮೂನ್‌ಗೆ ಕರ್ಣ- ನಿಧಿ
ಅದೇ ಇನ್ನೊಂದೆಡೆ, ಮಾಲತಿ ಮತ್ತು ರಮೇಶ್ ಸೇರಿ, ಕರ್ಣ ಮತ್ತು ನಿಧಿಯನ್ನು ಹನಿಮೂನ್‌ಗೆ ಕಳುಹಿಸುತ್ತಿದ್ದಾರೆ. ಅದೂ ಬ್ಯಾಂಕಾಂಕ್ನಲ್ಲಿ.
ಲಿಸ್ಟ್ ಕೊಟ್ಟ ನಿಧಿ
ಇದೀಗ ಮುದ್ದಾದ ಜೋಡಿ ಬ್ಯಾಂಕಾಂಕ್ಗೆ ಹೋಗಿದ್ದು, ಅಲ್ಲಿಗೆ ಹೋದ ಮೇಲೆ ಏನೇನು ಬೇಕು ಎನ್ನೋದನ್ನು ನಿಧಿ ದೊಡ್ಡ ಲಿಸ್ಟ್ ಮಾಡುವ ಮೂಲಕ ಕರ್ಣನಿಗೆ ಕೊಟ್ಟಿದ್ದಾಳೆ. ಅವಳ ಎಲ್ಲಾ ಆಸೆಗಳನ್ನೂ ಈಡೇರಿಸುವುದಾಗಿ ಕರ್ಣ ಹೇಳಿದ್ದಾನೆ.
ಬ್ಯಾಂಕಾಂಕ್ ರಸದೌತಣ
ಇನ್ನು ಕೆಲವು ಎಪಿಸೋಡ್ಗಳು ಬ್ಯಾಂಕಾಂಕ್ನ ಸುಂದರ ದೃಶ್ಯಗಳನ್ನು ಸೆರೆ ಹಿಡಿಯಲಿದ್ದು, ವೀಕ್ಷಕರಿಗೆ ರಸದೌತಣ ಉಣಬಡಿಸಲಿದೆ.
ನಿತ್ಯಾಳ ಸೀಮಂತಕ್ಕೆ ರೆಡಿ
ಅದೇ ಇನ್ನೊಂದೆಡೆ, ನಿತ್ಯಾಳ ಸೀಮಂತಕ್ಕೂ ರೆಡಿ ಮಾಡಿಕೊಳ್ಳಲಾಗುತ್ತಿದೆ. ಇಷ್ಟು ದಿನ ಮರೆಯಾಗಿದ್ದ ನಿತ್ಯಾ ಮತ್ತೆ ಮರಳಿದ್ದಾಳೆ. ಅಲ್ಲಿಗೆ ಈ ಸೀರಿಯಲ್ ಇನ್ನೊಂದು ಹಂತಕ್ಕೆ ಹೋಗಲಿದೆ.
ಏನಾಗಲಿದೆ ಜೋಡಿಗೆ?
ಒಟ್ಟಿನಲ್ಲಿ, ಸೀರಿಯಲ್ನಲ್ಲಿ ಮುಂದೇನಾಗಲಿದೆ ಎನ್ನುವ ಕುತೂಹಲ ಎಲ್ಲರದ್ದು. ಬ್ಯಾಂಕಾಂಕ್ಗೆ ಹೋಗುವಾಗ ವಿಮಾನ ಅಲ್ಲಾಡಿದಾಗ ಹೆದರಿದ ನಿಧಿ, ತನ್ನ ವಿಷ್ ಲಿಸ್ಟ್ನಲ್ಲಿ ಮತ್ತೊಂದು ಸೇರಿಸಿ, ಇಬ್ಬರೂ ಸೇಫ್ ಆಗಿ ಬರಬೇಕು ಎಂದು ಹೇಳಿದ್ದಾಳೆ.ಅಲ್ಲಿಗೆ ಇಬ್ಬರಲ್ಲಿ ಒಬ್ಬರಿಗೆ ಏನಾದರೂ ಸಮಸ್ಯೆ ತಲೆದೋರತ್ತಾ ಎನ್ನುವ ಗುಮಾನಿ ಕೂಡ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

