ಹಿಮಾಲಯದ ಗುಚ್ಚಿ ಮಶ್ರೂಮ್‌ಗೆ ಮನಸೋತ ಬ್ರಿಕ್ಸ್ ನಾಯಕರು, ಇದರ ಬೆಲೆ ಕೇಳಿದರೆ ಅಚ್ಚರಿ ಖಚಿತ
ಬ್ರಿಕ್ಸ್ ಶೃಂಗಸಭೆಯಲ್ಲಿ ಸಸ್ಯಾಹಾರ ಕುರಿತು ಕಾಂಗ್ರೆಸ್ ನಾಯಕರ ಟೀಕೆಗಳ ನಡುವೆ ಹಿಮಾಲಯದ ವಿಶೇಷ ಗುಚ್ಚಿ ಮಶ್ರೂಮ್ ಭಾರಿ ಸದ್ದು ಮಾಡುತ್ತಿದೆ. ಅತೀ ದುಬಾರಿ ಮಶ್ರೂಮ್ ಎಂದೇ ಜನಪ್ರಿಯವಾಗಿದೆ. ಗುಚ್ಚಿ ಬೆಲೆ, ವಿಶೇಷತೆ ಏನು?

ಹಿಮಾಲಯದ ವಿಶೇಷ ಮಶ್ರೂಮ್
ದೆಹಲಿಯಲ್ಲಿ ಆಯೋಜನೆಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳು , ಪಾರ್ಟ್ನರ್ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಭಾರತದಲ್ಲಿ ಶೇಕಡಾ 80ರಷ್ಟು ಸಸ್ಯಾಹಾರಿಗಳು, ಬ್ರಿಕ್ಸ್ ಸಭೆಯಲ್ಲಿ ಸಸ್ಯಾಹಾರ ಆಹಾರ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಇದರ ನಡುವೆ ಬ್ರಿಕ್ಸ್ ಶೃಂಗಸಭೆಯಲ್ಲಿ ಗುಚ್ಚಿ ಮಶ್ರೂಮ್ ಭಾರಿ ಸದ್ದು ಮಾಡಿದೆ. ಹಿಮಾಲಯದ ವಿಶೇಷ ಮಶ್ರೂಮ್‌ಗೆ ಬ್ರಿಕ್ಸ್ ನಾಯಕರು ಮನಸೋತಿದ್ದಾರೆ.
ಗುಚ್ಚಿ ಮಶ್ರೂಮ್ ವಿಶೇಷತೆ
ಗುಚ್ಚಿ ಮಶ್ರೂಮ್ ಫೈಬರ್, ಪ್ರೋಟಿನ್, ಖನಿಜ, ವಿಟಮಿನ್ ಸೇರಿಕೊಂಡ ಪೌಷ್ಠಿಕ ಆಹಾರ. ಇದು ಕಾಡಿನಲ್ಲಿ ಬೆಳೆಯುವ ನೈಸರ್ಗಿಕವಾದ ಮಶ್ರೂಮ್. ಇದನ್ನು ಬೆಳೆಯಲು ಸಾಧ್ಯವಿಲ್ಲ. ನೈಸರ್ಗಿಕವಾಗಿ ಬೆಳೆಯುವ ಮಶ್ರೂಮ್. ಹೀಗಾಗಿ ಇದು ಅಪರೂಪ ಹಾಗೂ ದುಬಾರಿ. ಗಿರಿ ಶಿಖರಗಳ ಮೇಲಿನ ಕಾಡುಗಳಲ್ಲಿ, ಮರಗಳಲ್ಲಿ ಇದು ಪತ್ತೆಯಾಗುತ್ತದೆ. ಇದನ್ನು ತರಲು ಹರಸಾಹಸ ಮಾಡಬೇಕು.
ಗುಚ್ಚಿ ಮಶ್ರೂಮ್ ಬೆಲೆ
ಪೌಷ್ಠಿಕಾಂಶಗಳಿಂದ ಕೂಡಿದ, ನೈಸರ್ಗಕವಾದ ಹಾಗೂ ವಿಶೇಷ ಮಶ್ರೂಮ್ ಇದಾಗಿದೆ. ಹೀಗಾಗಿ ಇದರ ಬೆಲೆ ಪ್ರತಿ ಕೆಜಿಗೆ 15 ಸಾವಿರ ರೂಪಾಯಿಯಿಂದ 40 ಸಾವಿರ ರೂಪಾಯಿವರೆಗಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಖಂಡಗಳಲ್ಲಿ ಈ ಮಶ್ರೂಮ್ ಸಿಗುತ್ತದೆ. ಅಪರೂಪದ ಹಾಗೂ ಅತೀ ವರಳ ಮಶ್ರೂಮ್ ಇದಾಗಿದೆ.
ಒಣಗಿಸಿದ ಗುಚ್ಚಿ ಮಶ್ರೂಮ್
ಗುಚ್ಚಿ ಮಶ್ರೂಮ್‌ನ್ನು ರೈತರು, ಸ್ಥಳೀಯರು ಕಾಡುಗಳಿಂದ ತಂದು ಒಣಗಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಗುಚ್ಚಿ ಮಶ್ರೂಮ್ ಒಣಗಿಸಿದ ಮಶ್ರೂಮ್ ಗಳಾಗಿದೆ. ಇದು ಅತ್ಯಂತ ಪರಿಮಳ, ವಿಶೇಷ ಆಕಾರಗಳಿಂದಲೇ ಆಕರ್ಷಿಸುತ್ತದೆ. ಹಲವು ರೀತಿಯಲ್ಲಿ ಗುಚ್ಚಿ ಮಶ್ರೂಮ್ ಅಡುಗೆಯಲ್ಲಿ ಬಳಕೆ ಮಾಡುತ್ತಾರೆ. ಸ್ವಾದದಲ್ಲೂ ಅತ್ಯಂತ ರುಚಿಕವಾಗಿರುತ್ತದೆ
ಬ್ರಿಕ್ಸ್ ಶೃಂಗಸಭೆಯಲ್ಲಿ ಗುಚ್ಚಿ
ಬ್ರಿಕ್ಸ್ ಶೃಂಗಸಭೆಯಲ್ಲಿ ಗುಚ್ಚಿ ಮಶ್ರೂಮ್ ಅಡುಗೆ ಮಾಡಲಾಗಿತ್ತು. ಅತೀ ವಿರಳ ಹಾಗೂ ವಿಶೇಷತೆಗಳಿಂದ ಕೂಡಿದ ಗುಚ್ಚಿ ಮಶ್ರೂಮ್‌ಗೆ ಬ್ರಿಕ್ಸ್ ನಾಯಕರು, ಅಧಿಕಾರಿಗಳು ಮನಸೋತಿದ್ದಾರೆ. ಇದೀಗ ಭಾರತದ ಗುಚ್ಚಿ ಮಶ್ರೂಮ್ ವಿಶ್ವದಲ್ಲೇ ಭಾರಿ ಜನಪ್ರಿಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
