Leaving wet clothes in washer overnight: ತೊಳೆದ ಒದ್ದೆ ಬಟ್ಟೆಗಳನ್ನ ರಾತ್ರಿಯಿಡೀ ವಾಷಿಂಗ್ ಮಷಿನ್‌ನಲ್ಲೇ ಬಿಟ್ರೆ ಏನಾಗುತ್ತೆ ಗೊತ್ತಾ? ಎಷ್ಟು ಗಂಟೆಗಳ ಕಾಲ ಬಟ್ಟೆಯನ್ನ ಮಷಿನ್‌ನಲ್ಲಿ ಬಿಡಬಹುದು? ಬಟ್ಟೆ ವಾಸನೆ ಬಾರದಂತೆ ತಡೆಯೋ ಸೀಕ್ರೆಟ್ ಟಿಪ್ಸ್ ಇಲ್ಲಿದೆ, ಮಿಸ್ ಮಾಡ್ದೆ ನೋಡಿ..
ರಾತ್ರಿ ಮಲಗುವ ಮುನ್ನ ವಾಷಿಂಗ್ ಮಷಿನ್‌ಗೆ ಬಟ್ಟೆಗಳನ್ನು ಹಾಕಿ ಆನ್ ಮಾಡುವುದು, ನಂತರ ಆಯಾಸದಿಂದಲೋ ಅಥವಾ ಮರೆತುಹೋಗಿಯೋ ಅದನ್ನು ಹೊರತೆಗೆದು ಒಣಗಿಸದೆ ಹಾಗೆಯೇ ನಿದ್ದೆಗೆ ಜಾರುವುದು ಪ್ರತಿಯೊಬ್ಬರ ಮನೆಯಲ್ಲೂ ನಡೆಯುವ ಸಾಮಾನ್ಯ ಸಂಗತಿ. ಬೆಳಗ್ಗೆ ಎದ್ದು ನೋಡಿದಾಗ ಆ ಒದ್ದೆ ಬಟ್ಟೆಗಳು ಮಷಿನ್‌ನ ಡ್ರಮ್ ಒಳಗೆ ಮುದ್ದೆಯಾಗಿರುತ್ತವೆ. ಮುಚ್ಚಳ ತೆರೆದ ತಕ್ಷಣ ಅದರಿಂದ ಒಂಥರಾ ಬೂಸ್ಟು ಹಿಡಿದ ವಾಸನೆ (Mildew odor) ಮೂಗಿಗೆ ಬಡಿಯುತ್ತದೆ. ತೇವಾಂಶವಿರುವ ಜಾಗದಲ್ಲಿ ರಾತ್ರೋರಾತ್ರಿ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುವುದೇ ಇದಕ್ಕೆ ಮುಖ್ಯ ಕಾರಣ.
ಇಂತಹ ಸಂದರ್ಭದಲ್ಲಿ ಬಟ್ಟೆಗಳನ್ನು ಮತ್ತೆ ಎರಡನೇ ಬಾರಿ ತೊಳೆಯಬೇಕೇ ಅಥವಾ ಹಾಗೆಯೇ ಒಣಗಿಸಬಹುದೇ? ಎಂಬ ಗೊಂದಲ ಎಲ್ಲರಲ್ಲೂ ಇರುತ್ತದೆ. ಇದಕ್ಕೆ ತಜ್ಞರು ನೀಡಿರುವ ಸ್ಪಷ್ಟ ವಿವರಣೆ ಇಲ್ಲಿದೆ.
ರಾತ್ರಿಯಿಡೀ ಒದ್ದೆ ಬಟ್ಟೆಗಳನ್ನು ಮಷಿನ್‌ನಲ್ಲೇ ಬಿಡಬಹುದೇ?
ವಾಷಿಂಗ್ ಸೈಕಲ್ ಮುಗಿದ ತಕ್ಷಣವೇ ಬಟ್ಟೆಗಳನ್ನು ಹೊರತೆಗೆದು ಬಿಸಿಲಿನಲ್ಲಿ ಒಣಗಿಸುವುದು ಅಥವಾ ಡ್ರೈಯರ್‌ಗೆ ಹಾಕುವುದು ಅತ್ಯಂತ ಉತ್ತಮವಾದ ಅಭ್ಯಾಸ. ಆದರೆ ಮರೆತುಹೋಗಿ ರಾತ್ರಿಯಿಡೀ ಒದ್ದೆ ಬಟ್ಟೆಗಳನ್ನು ಮಷಿನ್‌ನಲ್ಲೇ ಬಿಟ್ಟರೂ ಅದರಿಂದ ದೊಡ್ಡ ಅನಾಹುತವೇನೂ ಆಗುವುದಿಲ್ಲ.
"ಬಟ್ಟೆಗಳನ್ನು ರಾತ್ರಿಯಿಡೀ ಬಿಟ್ಟರೆ ಪರವಾಗಿಲ್ಲ, ಆದರೆ ದಿನಗಟ್ಟಲೆ ಅಥವಾ ಒಂದು ವಾರಗಳ ಕಾಲ ಹಾಗೆಯೇ ಬಿಡಬೇಡಿ. ರಾತ್ರಿ ಮರೆತರೂ ಬೆಳಗ್ಗೆ ಎದ್ದ ತಕ್ಷಣ ಮೊದಲ ಕೆಲಸವಾಗಿ ಅವುಗಳನ್ನು ಡ್ರೈಯರ್‌ಗೆ ಅಥವಾ ಬಿಸಿಲಿಗೆ ಒಣಗಲು ಹಾಕಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ" ಎನ್ನುತ್ತಾರೆ ತಜ್ಞರು.
ಎಷ್ಟು ಗಂಟೆಗಳ ಕಾಲ ಬಟ್ಟೆಗಳನ್ನು ಮಷಿನ್‌ನಲ್ಲಿ ಬಿಡಬಹುದು?
ತಜ್ಞರ ಪ್ರಕಾರ, ಒದ್ದೆ ಬಟ್ಟೆಗಳನ್ನು ವಾಷಿಂಗ್ ಮಷಿನ್‌ನಲ್ಲಿ ಗರಿಷ್ಠ 8-12 ಗಂಟೆಗಳಿಗಿಂತ ಹೆಚ್ಚು ಕಾಲ ಬಿಡಲೇಬಾರದು. ಬಟ್ಟೆ ಎಷ್ಟು ಹೊತ್ತು ಸುರಕ್ಷಿತವಾಗಿರಬಹುದು ಎಂಬುದು ನೀವು ಬಟ್ಟೆ ತೊಳೆಯುವ ವಿಧಾನದ ಮೇಲೆ ನಿರ್ಧಾರವಾಗುತ್ತದೆ.
ನೀರಿನ ತಾಪಮಾನ ಮತ್ತು ಡಿಟರ್ಜೆಂಟ್: ಬಿಸಿನೀರು ಮತ್ತು ಉತ್ತಮ ಡಿಟರ್ಜೆಂಟ್ ಬಳಸಿ ತೊಳೆದಿದ್ದರೆ ಬ್ಯಾಕ್ಟೀರಿಯಾಗಳು ಬೇಗ ಬೆಳೆಯುವುದಿಲ್ಲ.
ಬ್ಲೀಚ್ ಬಳಕೆ (Bleach Loads): ಟವೆಲ್, ಬೆಡ್‌ಶೀಟ್, ಸಾಕ್ಸ್, ಒಳಉಡುಪು, ಟೀ-ಶರ್ಟ್ ಮತ್ತು ಕಿಚನ್ ಬಟ್ಟೆಗಳನ್ನು ತೊಳೆಯುವಾಗ ಲಾಂಡ್ರಿ ಬ್ಲೀಚ್ ಬಳಸಿದ್ದರೆ, ಅಂತಹ ಬಟ್ಟೆಗಳನ್ನು ನಿಸ್ಸಂಕೋಚವಾಗಿ ರಾತ್ರಿಯಿಡೀ ಮಷಿನ್‌ನಲ್ಲೇ ಬಿಡಬಹುದು. ರಾತ್ರಿ ಮಲಗುವ ಮುನ್ನ ಮಷಿನ್ ಆನ್ ಮಾಡಿ, ಬೆಳಗ್ಗೆ ಎದ್ದು ಆರಾಮವಾಗಿ ಒಣಗಿಸಬಹುದು. ಏಕೆಂದರೆ ಬ್ಲೀಚ್ ಬ್ಯಾಕ್ಟೀರಿಯಾಗಳನ್ನು ಸಂಪೂರ್ಣವಾಗಿ ಕೊಂದು ವಾಸನೆ ಬಾರದಂತೆ ತಡೆಯುತ್ತದೆ.
ಬಟ್ಟೆಗಳನ್ನು ಮತ್ತೆ ತೊಳೆಯಬೇಕೇ ಎಂದು ಪತ್ತೆ ಹಚ್ಚುವುದು ಹೇಗೆ?
ಬೆಳಗ್ಗೆ ಎದ್ದಾಗ ಆ ಬಟ್ಟೆಗಳನ್ನು ಮತ್ತೆ ತೊಳೆಯಬೇಕೋ ಬೇಡವೋ ಎಂದು ತಿಳಿಯಲು ‘ಸ್ನಿಫ್ ಟೆಸ್ಟ್’ (Sniff Test - ಮೂಸಿ ನೋಡುವುದು) ಏಕೈಕ ದಾರಿ!
ಬಟ್ಟೆಗಳಿಂದ ಕಟುವಾದ ಬೂಸ್ಟು ಅಥವಾ ಬ್ಯಾಕ್ಟೀರಿಯಾದ ಕೊಳೆತ ವಾಸನೆ ಬರುತ್ತಿದ್ದರೆ, ಬಟ್ಟೆಗಳ ಮೇಲೆ ಬ್ಯಾಕ್ಟೀರಿಯಾ ಬೆಳೆದಿದೆ ಎಂದರ್ಥ.
ಬಟ್ಟೆಗಳ ರಾಶಿಯಲ್ಲಿ ಕೇವಲ ಒಂದೇ ಒಂದು ಬಟ್ಟೆಯಿಂದ ವಾಸನೆ ಬರುತ್ತಿದ್ದರೂ ಸಾಕು, ನೀವು ಇಡೀ ಲೋಡ್ ಬಟ್ಟೆಗಳನ್ನು ಮತ್ತೊಮ್ಮೆ ಡಿಟರ್ಜೆಂಟ್ ಹಾಕಿ ವಾಶ್ ಮಾಡಲೇಬೇಕು!
ಸುವಾಸನೆಯುಳ್ಳ ಕೃತಕ ಡಿಟರ್ಜೆಂಟ್‌ಗಳ ಬದಲು ರಾಸಾಯನಿಕ ರಹಿತ (Non-scented) ಸಾಮಾನ್ಯ ಡಿಟರ್ಜೆಂಟ್ ಬಳಸಿದರೆ, ಬಟ್ಟೆ ಸರಿಯಾಗಿ ಸ್ವಚ್ಛವಾಗಿದೆಯೇ ಅಥವಾ ದುರ್ನಾತ ಬೀರುತ್ತಿದೆಯೇ ಎಂಬುದು ಮೂಗಿಗೆ ಸ್ಪಷ್ಟವಾಗಿ ತಿಳಿಯುತ್ತದೆ.
ಬಟ್ಟೆಗಳು ದುರ್ನಾತ ಬಾರದಂತೆ ತಡೆಯಲು ಮುಖ್ಯ ಸಲಹೆಗಳು
ಬಟ್ಟೆಯಿಂದ ವಾಸನೆ ಬರಲು ಕೇವಲ ಒದ್ದೆಯಾಗಿರುವುದಷ್ಟೇ ಕಾರಣವಲ್ಲ, ವಾಷಿಂಗ್ ಮಷಿನ್‌ನ ಒಳಭಾಗದಲ್ಲಿ ಸಂಗ್ರಹವಾಗುವ ಕೊಳೆಯೂ ಕಾರಣವಾಗಿರುತ್ತದೆ. ಇದನ್ನು ತಡೆಯಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ..
ವಾಷಿಂಗ್ ಮಷಿನ್ ಹೀಗೆ ಸ್ವಚ್ಛಗೊಳಿಸಿ (Tub Clean)
ಮಷಿನ್‌ನ ಒಳಗಿನ ಡ್ರಮ್ ಮತ್ತು ಪೈಪ್‌ಗಳಲ್ಲಿ ಕೊಳೆ, ಎಣ್ಣೆಯಂಶ, ಲಿಂಟ್ (ದಾರದ ಪುಡಿ) ಮತ್ತು ಸಾಬೂನಿನ ಜಿಡ್ಡು ಕುಳಿತಿರುತ್ತದೆ. ಇದನ್ನು ಸ್ವಚ್ಛಗೊಳಿಸಲು ತಿಂಗಳಿಗೊಮ್ಮೆ ಹೀಗೆ ಮಾಡಿ..
ವಾಷಿಂಗ್ ಮಷಿನ್‌ನಲ್ಲಿ ಮೊದಲು ಬಿಸಿನೀರು (Hot Water), ಆ ನಂತರ 'ಎಕ್ಸ್‌ಟ್ರಾ ರಿನ್ಸ್' (Extra Rinse) ಆಪ್ಷನ್ ಆಯ್ಕೆ ಮಾಡಿ.
ಮಷಿನ್‌ನ ಬ್ಲೀಚ್ ಡಿಸ್ಪೆನ್ಸರ್‌ಗೆ ಗರಿಷ್ಠ ಮಟ್ಟದವರೆಗೆ (Maximum level) ಡಿಸನ್‌ಫೆಕ್ಟಿಂಗ್ ಬ್ಲೀಚ್ ಸುರಿಯಿರಿ.
ಯಾವುದೇ ಬಟ್ಟೆಗಳನ್ನು ಹಾಕದೆ ಖಾಲಿ ಮಷಿನ್ ಅನ್ನು ಪೂರ್ಣ ಸೈಕಲ್‌ನಲ್ಲಿ ಓಡಿಸಿ.
ಬ್ಲೀಚ್ ಅಂಶ ಸಂಪೂರ್ಣವಾಗಿ ಹೋಗಲು ಮತ್ತೊಮ್ಮೆ ಹೆಚ್ಚುವರಿ ನೀರಿನಿಂದ ರಿನ್ಸ್ (Rinse) ಮಾಡಿ.
ಬಾಗಿಲಿನ ರಬ್ಬರ್ ಗ್ಯಾಸ್ಕೆಟ್ ಮತ್ತು ಡಿಟರ್ಜೆಂಟ್ ಬಾಕ್ಸ್ ಅನ್ನು ಆಗಾಗ ಒರೆಸಿ ಸ್ವಚ್ಛವಾಗಿಡಿ.
ಮಷಿನ್‌ಗೆ ಅತಿಯಾಗಿ ಬಟ್ಟೆ ತುರುಕಬೇಡಿ (Wash Smaller Loads)
ಮಷಿನ್ ಫುಲ್ ಆಗುವಂತೆ ಬಟ್ಟೆಗಳನ್ನು ತುಂಬಿದರೆ, ಪ್ರತಿಯೊಂದು ಬಟ್ಟೆಗೂ ನೀರು ಮತ್ತು ಸೋಪು ಸರಿಯಾಗಿ ತಲುಪದೆ ಕೊಳೆ ಹಾಗೆಯೇ ಉಳಿಯುತ್ತದೆ. ಕಡಿಮೆ ಬಟ್ಟೆಗಳನ್ನು ಹಾಕಿದರೆ ವಾಶ್ ಕ್ವಾಲಿಟಿ ಅತ್ಯುತ್ತಮವಾಗಿರುತ್ತದೆ.
ಬೆವತ ಒದ್ದೆ ಬಟ್ಟೆಗಳನ್ನು ಮೊದಲೇ ಒಣಗಿಸಿ
ಜಿಮ್ ಬಟ್ಟೆಗಳು ಅಥವಾ ಮಳೆಯಲ್ಲಿ ನೆನೆದ ಒದ್ದೆ ಬಟ್ಟೆಗಳನ್ನು ನೇರವಾಗಿ ಲಾಂಡ್ರಿ ಬುಟ್ಟಿಗೆ ಅಥವಾ ಮಷಿನ್‌ಗೆ ಎಸೆಯಬೇಡಿ. ಮೊದಲೇ ಬೆವರಿನಿಂದ ಕೂಡಿರುವ ಬಟ್ಟೆಗಳನ್ನು ಹಾಗೆಯೇ ಹಾಕಿದರೆ, ಅವು ಇಡೀ ಮಷಿನ್‌ನಲ್ಲಿರುವ ಉಳಿದ ಬಟ್ಟೆಗಳಿಗೂ ದುರ್ನಾತ ಹರಡುತ್ತವೆ. ಹಾಗಾಗಿ ಅವುಗಳನ್ನು ಸ್ವಲ್ಪ ಗಾಳಿಗೆ ಒಣಗಿಸಿ, ನಂತರ ಒಟ್ಟಿಗೆ ತೊಳೆಯಿರಿ.


