ಪಡ್ಡೆ ಹುಡುಗರ ಹೃದಯ ಕದಿಯುತ್ತಿರುವ ಶೋಭಿತಾ: ಗ್ಲಾಮರಸ್ ಫೋಟೋಗಳ ನಡುವೆ ಗುಡ್ ನ್ಯೂಸ್?
ನಟಿ ಶೋಭಿತಾ ಧೂಳಿಪಾಳ ಸದ್ಯ ತಮ್ಮ ಗ್ಲಾಮರಸ್ ಲುಕ್ ಹಾಗೂ ಹೊಸ ಫೋಟೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ನಾಗ ಚೈತನ್ಯ ಜೊತೆ ವೈವಾಹಿಕ ಜೀವನ ನಡೆಸುತ್ತಿರುವ ಶೋಭಿತಾ ಬಗ್ಗೆ ಇದೀಗ ಮತ್ತೊಂದು ಸುದ್ದಿ ವೈರಲ್ ಆಗಿದೆ.

ಹೊಸ ಫೋಟೋಗಳು ವೈರಲ್
ತೆಲುಗು ಮೂಲದ ಚೆಲುವೆ ಶೋಭಿತಾ ಧೂಳಿಪಾಳ ಸದ್ಯ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ತೆಲುಗು ಸಿನಿಮಾಗಳಲ್ಲೂ ನಟಿಸಿರುವ ಈ ಬೆಡಗಿ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ತಮ್ಮ ಗ್ಲಾಮರಸ್ ಲುಕ್‌ನಿಂದ ಸಖತ್ ಸದ್ದು ಮಾಡುತ್ತಿದ್ದಾರೆ. ಅವರ ಹೊಸ ಹೊಸ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಬಾಲಿವುಡ್‌ಗೆ ಎಂಟ್ರಿ
ಶೋಭಿತಾ ಧೂಳಿಪಾಳ ಮೊದಲು ಹಿಂದಿ ಸಿನಿಮಾಗಳ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. 2016ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ‘ರಮನ್ ರಾಘವ್ 2.0’ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆ ಬಳಿಕ ‘ಚೆಫ್’, ‘ಕಾಲಾಕಾಂಡಿ’ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ನಂತರ ತೆಲುಗಿನಲ್ಲಿ ಅಡಿವಿ ಶೇಷ್ ನಾಯಕನಾಗಿ ನಟಿಸಿದ್ದ ‘ಗೂಡಾಚಾರಿ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತೆಲುಗು ಪ್ರೇಕ್ಷಕರಿಗೆ ಮತ್ತಷ್ಟು ಪರಿಚಿತರಾದರು.
ತೆಲುಗು, ತಮಿಳಿನಲ್ಲೂ ಮಿಂಚಿದ ಶೋಭಿತಾ
ಶೋಭಿತಾ ಧೂಳಿಪಾಳ ತೆಲುಗಿನಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇನ್ನು ತಮಿಳಿನಲ್ಲಿ ಅವರು ನಟಿಸಿದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಬಿಡುಗಡೆಯಾದ ಬಳಿಕ ಅವರ ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಚಿತ್ರದಲ್ಲಿ ಅವರ ಲುಕ್ ಹಾಗೂ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸೌತ್ ಇಂಡಸ್ಟ್ರಿಯಲ್ಲಿ ಶೋಭಿತಾಗೆ ತೆಲುಗು ಹಾಗೂ ತಮಿಳಿನಿಂದ ಸಾಲು ಸಾಲು ಅವಕಾಶಗಳು ಬರುತ್ತಿವೆ. ಇದರ ಜೊತೆಗೆ ಬಾಲಿವುಡ್‌ನಲ್ಲೂ ಅವರಿಗೆ ಸಿನಿಮಾಗಳ ಆಫರ್‌ಗಳಿಗೆ ಕೊರತೆಯಿಲ್ಲ.
ನಾಗ ಚೈತನ್ಯ ಜೊತೆ ವೈವಾಹಿಕ ಜೀವನ
ಇನ್ನು ಶೋಭಿತಾ ಧೂಳಿಪಾಳ ಅವರ ವೈಯಕ್ತಿಕ ಜೀವನವೂ ಆಗಾಗ ಸುದ್ದಿಯಾಗುತ್ತಿರುತ್ತದೆ. ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿರುವ ಶೋಭಿತಾ ಸದ್ಯ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಇಬ್ಬರೂ ಹಲವು ಕಾರ್ಯಕ್ರಮಗಳಿಗೆ ಒಟ್ಟಾಗಿ ಹಾಜರಾಗುತ್ತಿದ್ದು, ಅಲ್ಲಿನ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ತಮ್ಮ ಕೆಮಿಸ್ಟ್ರಿಯಿಂದಲೂ ಈ ಜೋಡಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಚೈತನ್ಯ-ಶೋಭಿತಾ ದಂಪತಿ ಪೋಷಕರಾಗ್ತಾರಾ?
ಇದೀಗ ಚೈತನ್ಯ ಹಾಗೂ ಶೋಭಿತಾ ಕುರಿತ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಬ್ಬರೂ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂಬ ಮಾಹಿತಿ ವೈರಲ್ ಆಗುತ್ತಿದೆ. ಆದರೆ ಈ ಕುರಿತು ದಂಪತಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಶೋಭಿತಾ ಧೂಳಿಪಾಳ ತಮ್ಮ ಸಿನಿಮಾಗಳು, ಈವೆಂಟ್‌ಗಳು ಹಾಗೂ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

