
ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
ಹಿರಿಯ ನಿರ್ಮಾಪಕ ಚಿನ್ನೇಗೌಡರ ಪತ್ನಿ, ವಿಜಯ್ ರಾಘವೇಂದ್ರ - ಶ್ರೀಮುರಳಿಯವರ ತಾಯಿ ಜಯಮ್ಮ ವಿಧಿವಶರಾಗಿದ್ದಾರೆ. ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಈ ಇಬ್ಬರು ಅದ್ಭುತ ನಟರನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಮ್ಮೆಯ ತಾಯಿ ಜಯಮ್ಮ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಹಿರಿಯ ನಿರ್ಮಾಪಕ ಚಿನ್ನೇಗೌಡರ ಪತ್ನಿ, ವಿಜಯ್ ರಾಘವೇಂದ್ರ - ಶ್ರೀಮುರಳಿಯವರ ತಾಯಿ ಜಯಮ್ಮ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದಈ ಇಬ್ಬರೂ ಸ್ಟಾರ್ ನಟರು ಅವರಮ್ಮನ ಮುದ್ದಿನ ಮಕ್ಕಳು. ಈ ಹಿಂದೆ ಹಲವು ಬಾರಿ ತಮ್ಮ ತಾಯಿ ಹೇಗೆ ತಮ್ಮ ಯಶಸ್ಸಿಗೆ ಕಾರಣ ಅನ್ನೋದನ್ನ ಹೇಳಿದ್ರು. ಇದೀಗ ಅಮ್ಮನನ್ನ ಕಳೆದುಕೊಂಡು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ ವಿಜಯ್ ರಾಘವೇಂದ್ರ & ಶ್ರೀಮುರಳಿ.
ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ..!
ಇಬ್ಬರು ತಾರೆಯರ ಯಶಸ್ಸಿನ ಹಿಂದಿತ್ತು ತಾಯಿಯ ಹರಕೆ..!
ಜಯಮ್ಮ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್‌ವುಡ್ ಗಣ್ಯರು
ಚಿನ್ನಾರಿಮುತ್ತ ಖ್ಯಾತಿಯ ನಟ ವಿಜಯ್ ರಾಘವೇಂದ್ರ ಮತ್ತು ರೋರಿಂಗ್ ಸ್ಟಾರ್ ಖ್ಯಾತಿಯ ಶ್ರೀಮುರುಳಿ ಈ ಇಬ್ಬರನ್ನೂ ಹತ್ತಿರದವರು ಜಯಮ್ಮನ ಮಕ್ಕಳು ಅಂತಾನೇ ಕರೀತಿದ್ರು. ಯಾಕಂದ್ರೆ ಇವರ ತಾಯಿಯ ಹೆಸರು ಜಯಮ್ಮ ಮತ್ತು ಈ ಇಬ್ಬರೂ ಆ ಜಯಮ್ಮನ ಮುದ್ದಿನ ಮಕ್ಕಳು.
ನಿರ್ಮಾಪಕ ಚಿನ್ನೇಗೌಡರ ಪತ್ನಿಮತ್ತು ಇಬ್ಬರು ಅದ್ಭುತ ನಟರನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಮ್ಮೆಯ ತಾಯಿ ಜಯಮ್ಮ ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಹೆಚ್ಚಿನ ಮಾಹಿತಿಗೆ ‘ಸಿನಿಮಾ ಹಂಗಾಮ’ ವಿಡಿಯೋ ನೋಡಿ...