ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹ ಜರುಗಲಿದ್ದು, ಮದುವೆ ಬಗ್ಗೆ ಮಾಹಿತಿ ನೀಡಲು ನವ ಜೋಡಿಗಳು ಬೆಂಗಳೂರಿನ ಕೆ.ಸಿ ಪ್ಯಾಲೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ. 

ಸ್ಯಾಂಡಲ್​ವುಡ್​ನಲ್ಲಿ ನಟ ವಸಿಷ್ಠ ಸಿಂಹ​ ನಟಿ ಹಾಗೂ ಹರಿಪ್ರಿಯಾ ಹಸೆಮಣೆ ಏರಲು ದಿನಾಂಕ ಫಿಕ್ಸ್ ಆಗಿದೆ.  ಹೊಸ ವರ್ಷದ ಆರಂಭದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಜೋಡಿ ಸಿದ್ದವಾಗಿದೆ. ಜನವರಿ 26ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹ ಜರುಗಲಿದ್ದು, ಮದುವೆ ಬಗ್ಗೆ ಮಾಹಿತಿ ನೀಡಲು ನವ ಜೋಡಿಗಳು ಬೆಂಗಳೂರಿನ ಕೆ.ಸಿ ಪ್ಯಾಲೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ. ವಿಶೇಷವಾಗಿ ಮಾಧ್ಯಮ ಮಿತ್ರರಿಗೆ ಸಿಂಹಪ್ರಿಯಾ ಜೋಡಿ ವಿವಾಹ ಕರೆಯೋಲೆಯನ್ನು ನೀಡಿದ್ದಾರೆ.

ನಂತರ ಮಾತನಾಡಿದ ವಸಿಷ್ಠ ಸಿಂಹ, ಲವ್ ಮಾಡಿದ್ದು ನಾವು ಆದರೆ ಈಗ ಅರೆಂಜ್ ಮ್ಯಾರೇಜ್ ಆಗಿದೆ. ಮನೆಯವರು ಜಾಸ್ತಿ ಇನ್ವಾಲ್ ಆಗಿ ಮದುವೆ ಮಾಡುತ್ತಿದ್ದಾರೆ. ಹರಿಪ್ರಿಯಾ ನನ್ನ ಸಿನಿಮಾ ಸೆಟ್‌ಗೆ ವಿಸಿಟ್ ಮಾಡಿ ಸರ್‌ಪ್ರೈಸ್ ಕೊಟ್ರು. ನಾವು ಸರಳವಾಗಿ ಮದುವೆ ಆಗುತ್ತಿಲ್ಲ. ತುಂಬಾ ಅದ್ಧೂರಿಯಾಗಿ ಮದುವೆ ಆಗುತ್ತೇವೆ. ಬೆಂಗಳೂರಿನಲ್ಲಿ ಆರತಕ್ಷತೆ ಇರುತ್ತೆ‌. ಮೈಸೂರಿನಲ್ಲಿ ಮದುವೆ ನಡೆಯುತ್ತೆ ಎಂದು ಹೇಳಿದರು. 

ಜ.26ಕ್ಕೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವಿವಾಹ; ಸಚ್ಚಿದಾನಂದ ಆಶ್ರಮದಲ್ಲಿ ಯಾಕೆ?

ಏರ್‌ಪೋರ್ಟ್ ಫೋಟೋ ಎಂಗೇಜ್ಮೆಟ್ ಫೋಟೋ ಹೊರ ಬಂದಿದ್ದು ನೋಡಿದೆ. ನಾನು ನಾಯಿ ಮರಿ ಕೊಟ್ಟು ಪಟಾಯಿಸಿ ಬಿಟ್ಟೆ ಅಂತ ಅಂದ್ರು. ನಾನು ಪ್ರೀತಿಸಿ ಆ ನಂತರ ನಾಯಿಮರಿ ಕೊಟ್ಟೆ. 2016 ರಲ್ಲಿ ಇಬ್ಬರ ಸ್ನೇಹ ಶುರುವಾಯ್ತು. ನನ್ನ ಗೋಧಿಬಣ್ಣ ಸಿನಿಮಾ ನೋಡಿ ಬಂದು ಹರಿಪ್ರಿಯಾ ವಿಶ್ ಮಾಡಿದ್ರು. ಆ ನಂತರ ಇಬ್ರ ಮಧ್ಯೆ ಪ್ರೀತಿ ಶುರುವಾಯ್ತು. ಮದುವೆ ಪ್ರೀತಿ ವಿಚಾರದಲ್ಲಿ ನಮ್ಮದೇ ಪ್ಯಾಟ್ರನ್ ರೂಢಿಸಿಕೊಂಡಿದ್ದೇವೆ. ನಾನು ಮೈಸೂರು ಹುಡುಗ ಹಾಗಾಗಿ ಅಲ್ಲೆ ಮದುವೆ ಆಗುತ್ತೇನೆ. ನನ್ನ ಜೀವನದಲ್ಲಿ ಕಷ್ಟದ ದಿನಗಳಲ್ಲಿ ಗೆಳತಿಯಾಗಿ ಹರಿಪ್ರಿಯಾ ಶಕ್ತಿ ಎಂದು ಸಿಂಹ ತಿಳಿಸಿದರು.

ಸಿನಿಮಾದ ಪ್ರೀಮಿಯರ್ ಶೋನಲ್ಲಿ ಮೊದಲು ಭೇಟಿ: ಗೋಧಿಬಣ್ಣ ಸಿನಿಮಾ ನೋಡಿ ನಾನು ಕುಟುಂಬದ ಜೊತೆ ವಸಿಷ್ಠ ಸಿಂಹನ ಬಗ್ಗೆ ಹೇಳಿದ್ದೆ. ನಮ್ಮಿಬ್ಬರ ಪ್ರೀತಿಗೆ ಲಾಕ್‌ಡೌನ್ ಕೂಡ ಕಾರಣ ಆಯಿತು. ಸಮಯ ಸಿಕ್ತಾ ಇತ್ತು. ದಿನ ಮಾತಾಡುತ್ತಿದ್ವಿ. ಹರಿಪ್ರಿಯಾ ಮಾತು ಅವರ ನಡವಳಿಕೆ, ಅವರಲ್ಲಿರೋ ಟ್ಯಾಲೆಂಟ್‌ ನನ್ನನ್ನ ತುಂಬಾ ಇಂಪ್ರೆಸ್ ಮಾಡಿದೆ. ನಾನು ಮಾನಸಿಕವಾಗಿ ಕಷ್ಟದಲ್ಲಿದ್ದಾಗ ಅದರಿಂದ ಹೊರಗೆ ಕರೆದುಕೊಂಡು ಬಂದಿದ್ದು ಹರಿಪ್ರಿಯಾ. ಇಬ್ಬರಿಗೂ ಮ್ಯೂಚುಯಲ್‌ ಆಗಿ ಇಷ್ಟ ಇತ್ತು. ಲಾಕ್‌ಡೌನ್‌ನಲ್ಲಿ ಇಬ್ಬರು ಪ್ರೀತಿಯನ್ನ ಹೇಳಿಕೊಂಡ್ವಿ. 

ಅವನು ಸಿಂಹ, ನಾನು ಸಿಂಹಿಣಿ; ನಿಶ್ಚಿತಾರ್ಥ ಉಂಗುರ ಹಿಂದಿರುವ ಸೀಕ್ರೆಟ್‌ ಬಿಚ್ಚಿಟ್ಟ ಹರಿಪ್ರಿಯಾ

ಹರಿಪ್ರಿಯಾಗೆ ನಾನೆ ಮೊದಲು ಪ್ರಪೋಸ್ ಮಾಡಿದೆ. ಸಿಂಹ ಪ್ರಪೋಸ್ ಮಾಡಿದಾಗ ನನಗೂ ಹೇಳಿಕೊಳ್ಳಬೇಕು ಅಂತ ಇತ್ತು.ಅಪ್ಪ ತೀರಿ ಹೋದ ದಿನ ನನಗೆ ಸಿಂಹ ಪ್ರಪೋಸ್ ಮಾಡಿದ್ರು. ಯಾರಿಗೂ ಗೊತ್ತಾಗದ ಹಾಗೆ ಬಹಳ ಪಟ್ಟು ಪ್ರೀತಿ ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಪ್ರೀತಿಗೆ ಎರಡುವರೆ ಮೂರು ವರ್ಷ ಆಗಿದೆ. ನಾಯಿ ಕೊಟ್ಟು ನಾನು ಹರಿಪ್ರಿಯಾರನ್ನ ಪಟಾಯಿಸಿಲ್ಲ ಎಂದು ವಸಿಷ್ಠ ಸಿಂಹ ಹೇಳಿದರು. ಇನ್ನು ನನಗೆ ತುಂಬಾ ಖುಷಿ ಆಗುತ್ತಿದೆ. ಇವತ್ತು ಮದುವೆ ಬಗ್ಗೆ ಮಾತಾಡೋಕೆ ತುಂಬಾ ಭಯ ಆಗ್ತಿದೆ. ನಮ್ಮಿಬ್ಬರ ಬೆಳವಣಿಗೆಯಲ್ಲಿ ಮಾಧ್ಯಮ ದೊಡ್ಡ ಪಾತ್ರ ವಹಿಸಿದೆ. ನಮ್ಮ ಎಂಗೇಜ್ಮೆಟ್ ಪ್ರೀತಿನ ಹೇಳಿಕೊಳ್ಳೋಣ ಅಂತ ಅಂದುಕೊಂಡ್ವಿ. ಆದರೆ ಅದು ಆಗಲಿಲ್ಲ ಎಂದು ಹರಿಪ್ರಿಯಾ ತಿಳಿಸಿದರು.

ಇನ್ನು ನಾನು ಏನೆ ಕೆಲಸ ಮಾಡಿದ್ರು ನನ್ನನ್ನ ನಾನು ತೊಡಗಿಸಿಕೊಳ್ತೇನೆ. ನಾನು ಮದುವೆ ಆದ ಮೇಲೆ ಒಳ್ಳೆ ಕಥೆ ಬಂದ್ರೆ ಸಿನಿಮಾ ಮಾಡುತ್ತೇನೆ. ಮೊದಲು ಹೆಂಡತಿಯಾಗಿ ಮಾನು ಸಕ್ಸಸ್ ಆಗುತ್ತೇನೆ. ಮದುವೆ ಆದ ಮೇಲೆ ಚಿಕ್ಕ ಬ್ರೇಕ್ ನನಗೆ ಬೇಕು. ಸದ್ಯಕ್ಕೆ ನಾನು ಮದುವೆ ಸಂಸಾರವನ್ನ ಎಂಜಾಯ್ ಮಾಡುತ್ತೇವೆ. ಮನಸುಗಳ ಮಾತು ಮಧುರ ಸಿನಿಮಾದ ಹಾಡು ನೋಡಿದಾಗಿನಿಂದ ನಾನು ಹರಿಪ್ರಿಯಾ ಅಭಿಮಾನಿ. ಉಗ್ರಂ ಸಿನಿಮಾ ನೋಡಿದಾಗ್ಲು ಹರಿಪ್ರಿಯಾ ಮೇಲೆ ಅಭಿಮಾನ ಹೆಚ್ಚಾಯ್ತು. ಸೂಜಿದಾರ ಸಿನಿಮಾ ನೋಡಿ ನಾನು ಕಳೆದು ಹೋಗಿದ್ದೆ ಎಂದು ಸಿಂಹ ತಿಳಿಸಿದರು.