ಅವನು ಸಿಂಹ, ನಾನು ಸಿಂಹಿಣಿ; ನಿಶ್ಚಿತಾರ್ಥ ಉಂಗುರ ಹಿಂದಿರುವ ಸೀಕ್ರೆಟ್ ಬಿಚ್ಚಿಟ್ಟ ಹರಿಪ್ರಿಯಾ
ಕೊನೆಗೂ ನಿಶ್ಚಿತಾರ್ಥ ಉಂಗುರ ಹೇಗಿದೆ ಎಂದು ರಿವೀಲ್ ಮಾಡಿದ ಹರಿಪ್ರಿಯಾ- ವಸಿಷ್ಠ ಸಿಂಹ. ಸಿಂಹ ಡಿಸೈನ್ ಸೂಪರ್ ಎಂದ ನೆಟ್ಟಿಗರು...

ಸ್ಯಾಂಡಲ್‌ವುಡ್ ಮುದ್ದು ಮುಖದ ಚೆಲುವೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಡಿಸೆಂಬರ್ 3ರಂದು ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಪ್ರೀತಿ ವಿಚಾರ ಮತ್ತು ನಿಶ್ಚಿತಾರ್ಥದ ವಿಚಾರವನ್ನು ಸ್ಪೆಷಲ್ ಆಗಿ ರಿವೀಲ್ ಮಾಡಿದ ಸಿಂಹ ಮತ್ತು ಪ್ರಿಯಾ ತಮ್ಮ ಎಂಗೇಜ್‌ಮೆಂಟ್ ಉಂಗುರ ಹೇಗಿದೆ ಎಂದು ಈಗ ಬಹಿರಂಗ ಪಡಿಸಿದ್ದಾರೆ.
'ಸಾಮಾನ್ಯಕ್ಕಿಂತ ವಿಭಿನ್ನವಾಗಿರುವುದು ನಮ್ಮ ಸದಾ ಆಯ್ಕೆ ಅಗಿರುತ್ತದೆ. ನನ್ನ ಎರಡನೇ ಹೆಸರು ಏನು ಆಗಲಿದೆ ಅದರ ಮೇಲೆ ನನಗೆ ತುಂಬಾ ಪ್ರೀತಿ ಇದೆ, 'ಸಿಂಹ'
'ಸಿಂಹ ನಮ್ಮ ಎಂಗೇಜ್‌ಮೆಂಟ್ ಉಂಗುರದ ಮೇಲೆ ಇರಬೇಕು ಅನ್ನೋದು ನನ್ನ ಆಸೆ ಆಗಿತ್ತು. ಜೀವನ ಪೂರ್ತಿ ನಮ್ಮ ಜೊತೆಗಿರುವ ಉಂಗುರ ಇದಾಗಲಿದೆ ಎಂದು ಸ್ಪೆಷಲ್ ಆಗಿರಬೇಕಿತ್ತು'
'ಕಸ್ಟಮ್ ಡಿಸೈನರ್‌ಗಳ ಜೊತೆ ಸೇರಿಕೊಂಡು ನಾವು ಈ ಡಿಸೈನ್ ಮಾಡಿಸಿದ್ದು. ಗ್ರಾಫಿಕ್ ಡಿಸೈನರ್‌ಗಳು octagon ಮತ್ತು oval ಶೇಪ್‌ನಲ್ಲಿ ಉಂಗುರ ಮಾಡಿದ್ದಾರೆ'
'ನಮ್ಮ ಉಂಗುರ ಹೇಗಿದೆ ನೋಡಿ...ಈ ರೀತಿ ಮೂಡಿ ಬಂದಿರುವುದಕ್ಕೆ ತುಂಬಾನೇ ಖುಷಿ ಇದೆ' ಎಂದು ಹರಿಪ್ರಿಯಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.