ಸೌರವ್ ಗಂಗೂಲಿ ನಾಯಕತ್ವದಲ್ಲಿ ದಾದಾಗಿರಿ ಆರಂಭಗೊಂಡಿತ್ತು. ಟೀಂ ಇಂಡಿಯಾದ ಆ್ಯಟಿಟ್ಯೂಡ್ ಕೂಡ ಬದಲಾಗಿತ್ತು. ಈ ಕುರಿತು ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ರೋಚಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ನವದೆಹಲಿ (ಆ.30) ಕ್ರಿಕೆಟ್ ಜಗತ್ತಿನಲ್ಲಿ ಟೀಂ ಇಂಡಿಯಾ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಭಾರತದ ಕ್ರಿಕೆಟಿಗರಿಗೆ ಸ್ಲೆಡ್ಜಿಂಗ್ ಮಾಡಿದರೆ ಅಲ್ಲೇ ಅದೇ ಭಾಷೆಯಲ್ಲಿ ಉತ್ತರ ನೀಡುತ್ತಾರೆ. ಕಿತ್ತಾಟಕ್ಕೂ ಸೈ, ಪ್ರದರ್ಶನ ಮೂಲಕ ಉತ್ತರ ನೀಡಲು ಸೈ ಎನಿಸಿಕೊಂಡಿದೆ. ಆದರೆ ಈ ಆಕ್ರಮಣಕಾರಿ ಮನೋಭಾವ ಸಂಪ್ರದಾಯ ಆರಂಭಗೊಂಡಿದ್ದು ಸೌರವ್ ಗಂಗೂಲಿ ನಾಯಕತ್ವದಲ್ಲಿ. ಗಂಗೂಲಿ ನಾಯಕನಾಗುವ ಮೊದಲು ಟೀಂ ಇಂಡಿಯಾ ಮೈದಾನದಲ್ಲಿ ಯಾರೇ ಸ್ಲೆಡ್ಜಿಂಗ್ ಮಾಡಿದರೂ ಬ್ಯಾಟ್ ಮೂಲಕ ಬೌಲಿಂಗ್ ಮೂಲಕ ಉತ್ತರ ಕೊಡುತ್ತಿತ್ತು. ಆದರೆ ಗಂಗೂಲಿ ನಾಯಕತ್ವದಲ್ಲಿ ಹಾಗಲ್ಲ, ಸ್ಲೆಡ್ಜಿಂಗ್ ಮಾಡಿದರೆ ಅಲ್ಲೇ ತಿರುಗೇಟು ಕೊಡೋ ಪದ್ಧತಿ ಆರಂಭಗೊಂಡಿತು ಎಂದು ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ.
ಮನೋಭಾವ ಬದಲಿಸಿದ ಗಂಗೂಲಿ
ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಹೆಚ್ಚು ಅಗ್ರೆಸ್ಸೀವ್ ಕ್ರಿಕೆಟ್ ಆರಂಭಿಸಿತು. ಆಟದಲ್ಲಿ ಅಗ್ರೆಸ್ಸೀವ್, ಮೈದಾನದಲ್ಲಿ ಅಗ್ರೆಸ್ಸೀವ್ , ಸ್ಲೆಡ್ಜಿಂಗ್ ವಿಚಾರದಲ್ಲೂ ಅಗ್ರೆಸ್ಸೀವ್ ಆಗಿತ್ತು. ಅಲ್ಲಿಗೆ ಯಾರೇ ಮೈದಾನದಲ್ಲಿ ಸ್ಲೆಡ್ಜಿಂಗ್ ಮಾಡಿದರೂ ಟೀಂ ಇಂಡಿಯಾ ಕ್ರಿಕೆಟಿಗರು ಸಹಸಿಕೊಳ್ಳುತ್ತಿದ್ದರು. ಅದೇ ಭಾಷೆಯಲ್ಲಿ ತಿರುಗೇಟು ನೀಡುವ ಬದಲು ತಮ್ಮ ಪ್ರದರ್ಶನ ಮೂಲಕ ಉತ್ತರ ನೀಡಲು ಪ್ರಯತ್ನಿಸುತ್ತಿದ್ದರು. ಆದರೆ ಗಂಗೂಲಿ ನಾಯಕತ್ವದಲ್ಲಿ ಈ ಮನೋಭಾವ ಬದಲಾಯಿತು ಎಂದು ದೀಪ್‌ದಾಸ್ ಗುಪ್ತಾ ಹೇಳಿದ್ದಾರೆ.
ಸೌರವ್ ಗಂಗೂಲಿ ದಾದಾ ಎಂದೇ ಜನಪ್ರಿಯರಾಗಿದ್ದರು. ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಹೆಚ್ಚು ಅಗ್ರೀಸ್ಸೀವ್ ಆಗಿದ್ದರು. ಎದುರಾಳಿಗಳು ಏನಾದರು ಹೇಳಿದರೆ ಅಲ್ಲೇ ಮೂರು ಹೇಳುತ್ತಿದ್ದೆವು. ಸನ್ನೆ ಮಾಡಿದರೂ ಟೀಂ ಇಂಡಿಯಾ ಕ್ರಿಕೆಟಿಗರು ಸನ್ನ ಜೊತೆ ಎರಡು ಡೈಲಾಗ್ ಕೂಡ ಸೇರಿಸುತ್ತಿದ್ದರು. ಸೌಮ್ಯ ಸ್ವಭಾವದಲ್ಲಿದ್ದ ಭಾರತ ತಂಡ ಗಂಗೂಲಿ ನಾಯಕತ್ವದಲ್ಲಿ ಎಲ್ಲರ ರಾಜರಾಗಿದ್ದರು. ಎಲ್ಲರ ಆತ್ಮವಿಶ್ವಾಸ ಹೆಚ್ಚಾಗಿತ್ತು ಎಂದು ಗುಪ್ತಾ ಹೇಳಿದ್ದಾರೆ.
ಗಂಗೂಲಿ ಟೀಂ ಇಂಡಿಯಾದಲ್ಲಿ ತಂದ ಈ ಬದಲಾವಣೆಯಿಂದ ಭಾರತೀಯ ಕ್ರಿಕೆಟಿಗರ ಆತ್ಮವಿಶ್ವಾಸ ಹೆಚ್ಚಾಗಿತ್ತು. ವಿದೇಶಿ ನೆಲದಲ್ಲೂ ಭಾರತ ಘರ್ಜಿಸಲು ಆರಂಭಿಸಿತು. ಎದುರಾಳಿ ತಂಡದ ನೆಲದಲ್ಲೇ ಟ್ರೋಫಿ ಗೆಲ್ಲುವ, ಸರಣಿ ಗೆಲ್ಲು ಕಿಚ್ಚು ಹೆಚ್ಚಾಯಿತು. ಯಾವುದಕ್ಕೂ ಹೆದರಲ್ಲ ಅನ್ನೋ ಆ್ಯಟಿಟ್ಯೂಡ್ ಮೂಲಕ ಟೀಂ ಇಂಡಿಯಾ ಮುಂದೆ ಸಾಗಿತ್ತು ಎಂದು ಗುಪ್ತಾ ಹೇಳಿದ್ದಾರೆ.
ಗಂಗೂಲಿ ನಾಯಕತ್ವದಲ್ಲಿ ಯಾರೂ ಸಹಿಸಿಕೊಳ್ಳುತ್ತಿರಲಿಲ್ಲ. ಗಂಗೂಲಿ ಅಗ್ರೆಸ್ಸೀವ್ ಕ್ರಿಕೆಟರ್ ಮಾತ್ರವಲ್ಲ, ಸ್ಲೆಡ್ಜಿಂಗ್ ನಿಂತರೆ ಯಾರನ್ನೂ ಬಿಡುವುದಿಲ್ಲ. ಯಾವುದೇ ಸರಣಿಯಲ್ಲಿ, ವಿಕೆಟ್ ಕಿತ್ತಾಗ ಗಂಗೂಲಿ ಮುಂದೆ ಸ್ಲೆಡ್ಜಿಂಗ್ ಮಾಡಿದರೆ, ಹೆಚ್ಚು ಸಂಭ್ರಮಿಸಿದರೆ ಅದೇ ಪಂದ್ಯ ಅಥವಾ ಮುಂದಿನ ಪಂದ್ಯದಲ್ಲಿ ಗಂಗೂಲಿ ತಿರುಗೇಟು ಪಕ್ಕಾ ಆಗಿತ್ತು. ಆ್ಯಂಡ್ರೂ ಫ್ಲಿಂಟಾಪ್ ಶರ್ಟ್ ಬಿಚ್ಚಿ ಕುಣಿದಿದ್ದಕ್ಕೆ ಗಂಗೂಲಿ ಲಾರ್ಡ್ಸ್ ಮೈದಾನದಲ್ಲಿ ಸೇಡು ತೀರಿಸಿಕೊಂಡಿದ್ದರು. ಗಂಗೂಲಿಯ ಈ ಮನೋಭವಾಗಳು ಟೀಂ ಇಂಡಿಯಾದಲ್ಲೂ ಎಲ್ಲರೂ ಅನುಸರಿಸಲು ಆರಂಭಿಸಿದರು ಎಂದು ಗುಪ್ತಾ ಹೇಳಿದ್ದಾರೆ.


