ನವದೆಹಲಿ(ಫೆ.01): ಲೋಕಸಭೆ ಚುನಾವಣೆ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಮಧ್ಯಂತರ ಬಜೆಟ್‌ನ್ನು ಮಂಡಿಸಿದೆ.

ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಬಜೆಟ್ ಮಂಡಿಸಲಾಗಿದೆ ಎಂಬ ಆರೋಪದ ಮಧ್ಯೆಯೂ ಜನಪ್ರಿಯ ಬಜೆಟ್‌ನ್ನು ಮಂಡಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ.

ಸಮಾಜದ ಎಲ್ಲಾ ವರ್ಗಕ್ಕೂ ಅನ್ವಯವಾಗಬಹುದಾದ ಜನಪ್ರಿಯ ಬಜೆಟ್ ಇದಾಗಿದ್ದು, ಪ್ರಮುಖವಾಗಿ ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರ ಬಜೆಟ್ ಆಗಿ ಹೊರಹೊಮ್ಮಿದೆ.

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿ ಮಧ್ಯೆ ಬಜೆಟ್ ಮಂಡಿಸಿದ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್, ದೇಶದ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮುಖವಾಗಿ ದೇಶದ ಮಧ್ಯಮ ವರ್ಗಕ್ಕೆ ಈ ಬಾರಿಯ ಮಧ್ಯಂತರ ಬಜೆಟ್ ದೊಡ್ಡ ಕೊಡುಗೆಯನ್ನೇ ನೀಡಿದೆ ಎಂದು ಹೇಳಬಹುದು. ವಾರ್ಷಿಕ 5 ಲಕ್ಷ ರೂ. ವೇತನ ಪಡೆಯುವವರಿಗೆ ಸಂಪೂರ್ಣ ತೆರಿಗೆ ವಿನಾಯ್ತಿ ಘೋಷಿಸಿರುವುದು ಈ ಬಜೆಟ್‌ನ ಅತ್ಯಂತ ಮಹತ್ವದ ಅಂಶಗಳಲ್ಲಿ ಒಂದು. ಯಾವುದೇ ರೀತಿಯ ತೆರಿಗೆ ಹೆಚ್ಚಿಸದೇ ಇರುವುದೂ ಕೂಡ ಈ ಬಜೆಟ್ ನ ಉತ್ತಮ ಅಂಶ ಎನ್ನಬಹುದು.

ಅದರಂತೆ ರೈತಾಪಿ ವರ್ಗಕ್ಕೆ ಭರಪೂರ ಕೊಡುಗೆ ನೀಡಿರುವ ಮಧ್ಯಂತರ ಬಜೆಟ್ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ ಘೋಷಿಸಿದೆ. 2 ಸಾವಿರ ರೂ.ನಂತೆ ಮೂರು ಕಂತುಗಳಲ್ಲಿ ಈ 6 ಸಾವಿರ ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಅಲ್ಲದೇ ದೇಶದ ಕಾರ್ಮಿಕ ವಲಯಕ್ಕೂ ಗಮನಾರ್ಹ ಕೊಡುಗೆ ನೀಡಿರುವ ಮೋದಿ ಸರ್ಕಾರ, ಪ್ರಮುಖವಾಗಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಆದ್ಯತೆ ನೀಡಿದೆ. ಅದರಂತೆ ಈ ವಲಯಕ್ಕೆ ವಾರ್ಷಿಕ 3 ಸಾವಿರ ರೂ. ಪಿಂಚಣಿ ಘೋಷಣೆ ಮಾಡಿದೆ.

ಇನ್ನು ರಕ್ಷಣಾ ಕ್ಷೇತ್ರಕ್ಕೆ ಮಹತ್ವ ನೀಡಿರುವ ಬಜೆಟ್ ಇದಾಗಿದ್ದು, ಒಟ್ಟು 3 ಲಕ್ಷ ಕೋಟಿ ರೂ. ಮೊತ್ತ ಮೀಸಲಿರಿಸಲಾಗಿದೆ. ಅಲ್ಲದೇ ಓಆರ್‌ಓಪಿ ಯೋಜನೆಯನ್ವಯ 35 ಸಾವಿರ ಕೋಟಿ ರೂ. ಪಿಂಚಣಿ ನೀಡಲಾಗಿದೆ.

ಇನ್ನು ಆರೋಗ್ಯ ವಲಯವನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಪ್ರಮುಖವಾಗಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಲು ನಿರ್ಧರಿಸಲಾಗಿದೆ.

ಇನ್ನುಳಿದಂತೆ ಮನರಂಜನಾ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಗ್ರಾಮೀಣ ಅಭೀವೃದ್ಧಿ, ನೈರ್ಮಲ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದ್ದು, ಒಟ್ಟಾರೆ ಸಮಾಜದ ಎಲ್ಲಾ ವರ್ಗವನ್ನೂ ಪ್ರತಿನಿಧಿಸುವ ಬಜೆಟ್ ಇದಾಗಿದೆ ಎಂದು ಹೇಳಬಹುದು.

ಇನ್ನು ಲೋಕಸಭೆ ಚುನಾವಣೆಯಲ್ಲಿ ಈ ಬಜೆಟ್ ಬಿಜೆಪಿಗೆ ಮತ ತಂದುಕೊಡಲಿದೆಯೇ ಎಂಬ ಪ್ರಶ್ನೆಗೆ ಇಷ್ಟು ಬೇಗ ಉತ್ತರ ಸಿಗುವುದು ಕಷ್ಟವಾದರೂ, ಸದ್ಯಕ್ಕಂತೂ ಈ ಬಿಜೆಟ್‌ನ್ನು ದೇಶದ ಜನ ಸ್ವಾಗತಿಸಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ನಿಮ್ಮ ಸುವರ್ಣನ್ಯೂಸ್.ಕಾಂ ಬಜೆಟ್‌ಗೂ ಮೊದಲು, ಬಜೆಟ್ ಸಮಯದಲ್ಲಿ ಮತ್ತು ಬಜೆಟ್ ನಂತರದ ಸಂಪೂರ್ಣ ಮಾಹಿತಿಯನ್ನು ತನ್ನ ಓದುಗರಿಗೆ ಉಣಬಡಿಸಿದ್ದು, ಓದುಗರು ತಮ್ಮ ಆಸಕ್ತ ಕ್ಷೇತ್ರಕ್ಕೆ ಅನುಗುಣವಾಗಿ ಬಜೆಟ್‌ನ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

ಬಜೆಟ್‌ನಲ್ಲಿ ಸಿಹಿ: ಆದಾಯ ತೆರಿಗೆ ವಿನಾಯ್ತಿ ಮಿತಿ 5 ಲಕ್ಷಕ್ಕೆ ಹೆಚ್ಚಳ?

ಬಜೆಟ್ ಅಧಿವೇಶನ: ಭಾರತೀಯರ ಆಶಯ ಅನ್ನ. ಆಶ್ರಯ, ಅರಿವೆ!

ಕೇಂದ್ರ ಬಜೆಟ್: ಇಲ್ಲಿವೆ ನಿಮ್ಮ ನಿರೀಕ್ಷೆ, ಮೋದಿ ಪಾಸಾಗಲಿದ್ದಾರಾ ಪರೀಕ್ಷೆ?

ಬಜೆಟ್‌ಗೂ ಮುನ್ನ ಬಂಪರ್ ಗಿಫ್ಟ್: ಸಿಲಿಂಡರ್ ದರದಲ್ಲಿ ಇಳಿಕೆ!

ಮೋದಿ ಸರ್ಕಾರದಿಂದ ಸಾಮಾನ್ಯ ಜನತೆಗೆ ಬಂಪರ್ ?

ಬಜೆಟ್‌ ಹೇಗೆ ತಯಾರಾಗುತ್ತೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಬಜೆಟ್‌ ಸ್ವಾರಸ್ಯಗಳು: ಮೊದಲ ಹಣಕಾಸು ಸಚಿವರು ಕಾಂಗ್ರೆಸ್ಸಿಗರಲ್ಲ....!

ಈ ಬಾರಿ ಪೂರ್ಣ ಬಜೆಟ್‌ ಅಲ್ಲ, ಲೇಖಾನುದಾನ ಮಾತ್ರ!: ಏಕೆ ಗೊತ್ತಾ?

ಮಂಡನೆಗೂ ಮುನ್ನವೇ ಲೀಕ್ ಆಗಿದೆಯಂತೆ ಬಜೆಟ್: ಕಾಂಗ್ರೆಸ್ ಆರೋಪ!

Live| Union Budget 2019: ಎಲ್ಲರಿಗೂ ಬಜೆಟ್ ಪ್ರಸಾದ, ಸರ್ವೇಜನಃ ಸುಖಿನೋಭವಂತು

ಕೇಂದ್ರ ಬಜೆಟ್, ನಿಮ್ಮ ಜಿಲ್ಲೆ, ನಿಮ್ಮ ನಿರೀಕ್ಷೆ: ಮೋದಿ ಈಡೇರಿಸಲಿ ಎಂಬ ಅಪೇಕ್ಷೆ!

ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ: ಮುಗಿಲೆತ್ತರಕ್ಕೆ ಸೆನ್ಸೆಕ್ಸ್!

ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ: 5 ವರ್ಷದ ರಿಪೋರ್ಟ್ ಬಿಚ್ಚಿಟ್ಟ FM!

ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!

ಸೈನ್ಯ ದೇಶದ ಚೈತನ್ಯ: ರಕ್ಷಣಾ ವಲಯಕ್ಕೆ ಅಗಾಧ ಮೊತ್ತ!

ನಿಮ್ಮ ವೇತನ 41,666 ರೂ.?: ತೆರಿಗೆ ಮರೆತು ಬಿಡಿ ಅಂದಿದೆ ಕೇಂದ್ರ!

ಸಿನಿಮಾ ರಂಗದ ರಂಗು ಹೆಚ್ಚಿಸಿದ ಬಜೆಟ್: ಚಿತ್ರೋದ್ಯಮ ಫುಲ್ ಖುಷ್!

ಕೈಗಾರಿಕೆ ವಲಯಕ್ಕೆ ಅಭಯಹಸ್ತ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ಪಿಂಚಣಿ!

ಆಯುಷ್ಮಾನ್ ಭಾರತ್: ಕೊಟ್ಟಷ್ಟು ಲಾಭ ಮಾಡಿಕೊಂಡಿದ್ದೀರಾ?

ದುಡಿಯುವ ಕೈಗಳಿಗೆ ಶಕ್ತಿ ತುಂಬಿದ ಮೋದಿ ಸರ್ಕಾರ: ಏನೆನೆಲ್ಲಾ ಸಹಾಯ?

ಮಧ್ಯಂತರ ಬಜೆಟ್‌ನ ಮಹಾ ಕೊಡುಗೆ: ಅದೂ, ಇದೂ, ಎಲ್ಲವೂ ನಿಮಗೆ!