MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ!

ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ!

ಕಾನೂನಿನ ಪ್ರಕಾರ ಚಿನ್ನವನ್ನು ಯಾವುದೇ ದಾಖಲೆಗಳಿಲ್ಲದೆ ಇಟ್ಟುಕೊಳ್ಳಬಹುದು. ಈ ಮಿತಿಯು ಕೇವಲ ಆಭರಣಗಳಿಗೆ ಅನ್ವಯಿಸುತ್ತದೆ ಮತ್ತು ನಾಣ್ಯಗಳು ಅಥವಾ ಬಾರ್‌ಗಳಿಗೆ ಅಲ್ಲ. ಬಳುವಳಿಯಾಗಿ ಬಂದ ಚಿನ್ನಕ್ಕೆ ವಿವರಗಳನ್ನು ದಾಖಲಿಸುವುದು ಅವಶ್ಯಕ.

1 Min read
Author : Kannadaprabha News
Published : Mar 03 2026, 07:12 AM IST
Share this Photo Gallery
  • FB
  • TW
  • Linkdin
  • Whatsapp
15
ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?
Image Credit : Getty/freepik AI

ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

ಕಾನೂನಿನ ಪ್ರಕಾರ ಇಷ್ಟೇ ಚಿನ್ನ ಇಟ್ಟುಕೊಳ್ಳಬಹುದು ಎಂಬ ಗರಿಷ್ಠ ಮಿತಿ ಇಲ್ಲ. ಆದರೆ ನಿಮ್ಮ ಮೇಲೆ ಐಟಿ ದಾಳಿ ನಡೆದರೆ ಅಧಿಕಾರಿಗಳು ಆಧಾರ ಕೇಳುತ್ತಾರೆ. ಯಾವುದೇ ಡಾಕ್ಯುಮೆಂಟ್‌ ಇಲ್ಲದೆಯೂ ನೀವು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎಂಬುದು ಈ ಕೆಳಗಿದೆ

  • ವಿವಾಹಿತ ಮಹಿಳೆ - 500 ಗ್ರಾಂ
  • ಅವಿವಾಹಿತ ಮಹಿಳೆ - 250 ಗ್ರಾಂ
  • ಪುರುಷರು (ವಿವಾಹಿತ/ ಅವಿವಾಹಿತ) - 100 ಗ್ರಾಂ
25
ಲಿಮಿಟ್‌
Image Credit : imagesbazaar

ಲಿಮಿಟ್‌

ಈ ಲಿಮಿಟ್‌ ಒಳಗೆ ಚಿನ್ನ ಇದ್ದಾಗ, ಐಟಿ ರೈಡ್‌ನಲ್ಲಿ ಚಿನ್ನ ಎಷ್ಟಿದೆ ಎಂದು ದಾಖಲೆ ಮಾಡಿಕೊಳ್ಳುತ್ತಾರೆಯೇ ಹೊರತು ವಶಕ್ಕೆ ಪಡೆಯುವುದಿಲ್ಲ. ಉಳಿದಂತೆ ನೀವು ಎಷ್ಟೇ ಚಿನ್ನ ಇಟ್ಟುಕೊಂಡಿರಬಹುದು, ಅವುಗಳು ನಿಮ್ಮ ಬಳಿ ಹೇಗೆ ಬಂದವು ಎಂಬ ಕರಾರುವಾಕ್ಕಾದ ವಿವರ ನೀಡಬೇಕಾಗುತ್ತದೆ.

Related Articles

Related image1
ಹಣವೋ ಹಣ, 2 ವರ್ಷದಲ್ಲಿ 700% ರಿಟರ್ನ್; ಕುಸಿತದಲ್ಲೂ ಜಿಗಿತ ಕಂಡ ಮಲ್ಟಿಬ್ಯಾಗರ್ ಸ್ಟಾಕ್
Related image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
35
ಗೋಲ್ಡ್‌ ಕಾಯಿನ್, ಬಾರ್‌ಗಳಿಗೆ ಇದು ಅನ್ವಯಿಸುತ್ತಾ?
Image Credit : Asianet News

ಗೋಲ್ಡ್‌ ಕಾಯಿನ್, ಬಾರ್‌ಗಳಿಗೆ ಇದು ಅನ್ವಯಿಸುತ್ತಾ?

ಖಂಡಿತಾ ಇಲ್ಲ. ಗರಿಷ್ಠ ಮಿತಿ ಇಲ್ಲದಿರುವುದು ಆಭರಣ ರೂಪದಲ್ಲಿರುವ ಚಿನ್ನಕ್ಕೆ ಮಾತ್ರ. ನೀವು ಗೋಲ್ಡ್‌ ಕಾಯಿನ್, ಗೋಲ್ಡ್‌ ಬಾರ್‌ಗಳು ಅಥವಾ ವಜ್ರದ ಆಭರಣ ಅಥವಾ ಬೇರೆ ಲೋಹಗಳಿಗೆ ಇದು ಅನ್ವಯವಾಗದು. ಇವಕ್ಕೆಲ್ಲ ಟ್ಯಾಕ್ಸ್‌ ಫ್ರೀ ಸಿಗೋದಿಲ್ಲ. ಒಂದಿಷ್ಟು ಸುಂಕ ಕಟ್ಟಿಯೇ ಇವುಗಳನ್ನು ಇಟ್ಟುಕೊಳ್ಳಬಹುದು.

45
ಬಳುವಳಿಯಾಗಿ ಬರುವ ಬಂಗಾರ
Image Credit : Asianet News

ಬಳುವಳಿಯಾಗಿ ಬರುವ ಬಂಗಾರ

ಉಡುಗೊರೆ ಆಭರಣಗಳು ಮತ್ತು ವಂಶಪಾರಂಪರ್ಯವಾಗಿ ಬಳುವಳಿಯಾಗಿ ಬರುವ ಚಿನ್ನವನ್ನೆಲ್ಲ ಇಟ್ಟುಕೊಳ್ಳುವುದಕ್ಕೆ ಯಾರೂ ತಕರಾರು ತೆಗೆಯುವುದಿಲ್ಲ. ಆದರೆ ಟ್ಯಾಕ್ಸ್‌ ಕಟ್ಟುವ ವೇಳೆಗೆ ಇವುಗಳ ಬಗ್ಗೆ ವಿವರ ದಾಖಲಿಸಬೇಕಾದ್ದು ಅತ್ಯಗತ್ಯ. ನಾಳೆ ಏನಾದರೂ ಸಮಸ್ಯೆ ಆದರೂ ನೀವು ದಾಖಲೆ ಸಲ್ಲಿಸಿದ್ದೀರಿ ಎಂಬ ಅಧಿಕೃತತೆ ಇರುತ್ತದೆ.

ಇದನ್ನೂ ಓದಿ: ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆ

55
ಬಂಗಾರ ಇರಿಸಿಕೊಳ್ಳುವಾಗ ಈ ವಿಚಾರ ಗೊತ್ತಿರಲಿ
Image Credit : Asianet News

ಬಂಗಾರ ಇರಿಸಿಕೊಳ್ಳುವಾಗ ಈ ವಿಚಾರ ಗೊತ್ತಿರಲಿ

ಹೊಸದಾಗಿ ಚಿನ್ನ ತೆಗೆದುಕೊಂಡಿದ್ದರೆ ಬಿಲ್‌ ಅನ್ನು ಜೋಪಾನವಾಗಿ ಕಾಯ್ದಿರಿಸಿ.

2 ಲಕ್ಷ ರು. ಒಳಗಿನ ಚಿನ್ನವನ್ನು ನಗದು ನೀಡಿ ಖರೀದಿಸುವುದು ಜಾಣತನ. ಆದರೆ 2 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ನಗದು ನೀಡಿ ಖರೀದಿಸಲು ಈಗ ಕಾನೂನು ರೀತ್ಯಾ ಅವಕಾಶ ಇರುವುದಿಲ್ಲ.

ಚಿನ್ನ ಎಷ್ಟು ಬೇಕಾದರೂ ಇಟ್ಟುಕೊಳ್ಳಿ, ಆದರೆ ದಾಖಲೆಗಳನ್ನು ಜತನವಾಗಿ ನೋಡಿಕೊಳ್ಳಿ.

ಇದನ್ನೂ ಓದಿ: ಯುದ್ಧ ವಿದೇಶದಲ್ಲಾದ್ರೂ ತಲೆ ಮೇಲೆ ಕೈಹೊತ್ತು ಕುಳಿತ ಭಾರತೀಯರು, ಷೇರು ಮಾರ್ಕೆಟ್ ನಲ್ಲಿ ಭೂಕಂಪ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವ್ಯವಹಾರ
ಚಿನ್ನ
ಚಿನ್ನದ ಬೆಲೆ
ಹಣ (Hana)

Latest Videos
Recommended Stories
Recommended image1
India Latest News Live: ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ!
Recommended image2
ಸಾಲ ಮರುಪಾವತಿಯಲ್ಲಿ ದೇಶದಲ್ಲಿಯೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ, ಇದು ಕರಾವಳಿಗರ ಪ್ರಾಮಾಣಿಕತೆ
Recommended image3
ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆ
Related Stories
Recommended image1
ಹಣವೋ ಹಣ, 2 ವರ್ಷದಲ್ಲಿ 700% ರಿಟರ್ನ್; ಕುಸಿತದಲ್ಲೂ ಜಿಗಿತ ಕಂಡ ಮಲ್ಟಿಬ್ಯಾಗರ್ ಸ್ಟಾಕ್
Recommended image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved