ಬಜೆಟ್‌ಗೂ ಮುನ್ನವೇ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್! ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯಲ್ಲಿ ಕೊಂಚ ಇಳಿಕೆ! ಸಬ್ಸಿಡಿ ರಹಿತ ಅಡುಗೆ ಅನಿಲ ದರದಲ್ಲಿ ಭಾರೀ ಇಳಿಕೆ!ಇಂದು [ಗುರುವಾರ] ಮಧ್ಯರಾತ್ರಿಯಿಂದಲೇ ಜಾರಿ!
ನವದೆಹಲಿ, [ಜ.31]: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅಧಿವೇಶನಕ್ಕೂ ಮುನ್ನವೇ ಅಡುಗೆ ಅನಿಲ ದರದಲ್ಲಿ ಇಳಿಕೆ ಆಗಿದೆ.
ಸಬ್ಸಿಡಿ ಸಹಿತ LPG ಸಿಲಿಂಡರ್ 1.46 ರೂಪಾಯಿ ಇಳಿಕೆಯಾಗಿದ್ದು, ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 30 ರೂಪಾಯಿ ಅಷ್ಟು ಇಳಿಕೆಯಾಗಿದೆ.
14.2 ಕೆಜಿ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ನ ದರ 493.53 ಆಗಲಿದೆ. ಇದಕ್ಕೂ ಮೊದಲು 494.99 ರುಪಾಯಿ ನೀಡಬೇಕಾಗಿತ್ತು.
ಸದ್ಯದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 659 ರುಪಾಯಿ ಇದ್ದು, ಇದರಲ್ಲಿ 30 ರುಪಾಯಿ ಕಡಿಮೆ ಆಗಿದೆ. ಈ ಪರಿಷ್ಕೃತ ದರವು ಇಂದು [ಗುರುವಾರ] ಮಧ್ಯರಾತ್ರಿಯಿಂದ ಜಾರಿಯಾಗಲಿದೆ.
