ಮೋದಿ ಸರ್ಕಾರದ ಮಧ್ಯಂತರ ಬಜೆಟ್| ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗಳಿಸಿದ ಹಂಗಾಮಿ ವಿತ್ತ ಸಚಿವ| ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ಪಿಯೂಷ್ ಗೋಯೆಲ್| ಚಿತ್ರರಂಗಕ್ಕೆ ಭರ್ಜರಿ ಕೊಡುಗೆ ಘೋಷಿಸಿದ ಕೇಂದ್ರ ಸರ್ಕಾರ| ತ್ರೀಕರಣ ಅನುಮತಿಗೆ ಏಕ ಗವಾಕ್ಷಿ ಕಾರ್ಯಕ್ರಮ ಜಾರಿಗೆ

ನವದೆಹಲಿ(ಫೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸಿದ್ದಾರೆ.

ಇನ್ನು ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಮನರಂಜನೆ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಸಿನಿಮಾ ಉದ್ಯಮಕ್ಕೆ ಸಿಹಿ ಸುದ್ದಿ ನೀಡಿದೆ.

ಬಜೆಟ್ ಸಂಬಂಧೀ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿನಿಮಾ ಚಿತ್ರೀಕರಣ ಅನುಮತಿಗೆ ಏಕ ಗವಾಕ್ಷಿ ಕಾರ್ಯಕ್ರಮ ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಇದುವರೆಗೂ ವಿದೇಶಿಗರಿಗೆ ಮಾತ್ರ ಇದ್ದ ಅನುಕೂಲವನ್ನು ಇದೀಗ ದೇಶೀಯ ಚಿತ್ರ ನಿರ್ಮಾಣಕ್ಕೂ ವಿಸ್ತರಿಸಿದೆ.

Scroll to load tweet…

ಇದರಿಂದ ಬಾಲಿವುಡ್ ಸೇರಿದಂತೆ ಎಲ್ಲಾ ಪ್ರಾದೇಶಿಕ ಚಿತ್ರರಂಗಕ್ಕೂ ಅನುಕೂಲವಾಗಲಿದ್ದು, ಭಾರತೀಯ ಚಿತ್ರರಂಗದ ಸಂತಸವನ್ನು ದ್ವಿಗುಣಗೊಳಿಸಿದೆ.