ಮಧ್ಯಂತರ ಬಜೆಟ್ ನಲ್ಲಿ ಕಾರ್ಮಿಕ ವಲಯಕ್ಕೆ ಭರಪೂರ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಸಿಹಿ ಸುದ್ದಿ ನೀಡಿದೆ.
Live| Union Budget 2019: ಎಲ್ಲರಿಗೂ ಬಜೆಟ್ ಪ್ರಸಾದ, ಸರ್ವೇಜನಃ ಸುಖಿನೋಭವಂತು

ಲೋಕಸಭೆ ಚುನಾವಣೆಗೆ ಹಲವು ಕೆಲವೇ ತಿಂಗಳು ಬಾಕಿ ಇರುವಾಗಲೇ, ಮೋದಿ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡಿಸಿದೆ. ನಿರೀಕ್ಷೆಯಂತೆ ಇದು ಜನಪ್ರಿಯ ಬಜೆಟ್. ಕಾರ್ಮಿಕ, ರೈತ, ಮಧ್ಯಮ ವರ್ಗದವರ ಆಶಯದೊಂದಿಗೆ, ಮೇಲ್ವರ್ಗದ ಜನರಿಗೂ ಅನುಕೂಲವಾಗುವಂಥ ಅಂಶಗಳಿರುವುದು ವಿಶೇಷ. ಸರ್ವೇಜನಃ ಸುಖಿನೋ ಭವಂತು ಎಂಬಂತೆ 'ಎಲ್ಲರೊಂದಿಗೆ ವಿಕಾಸ...' ಎಂಬ ತತ್ವ ಬಜೆಟ್‌ನಲ್ಲಿ ಪ್ರತಿಬಿಂಬಿಸಿದೆ.
ದುಡಿಯುವ ಕೈಗಳಿಗೆ ಶಕ್ತಿ ತುಂಬಿದ ಮೋದಿ ಸರ್ಕಾರ: ಏನೆನೆಲ್ಲಾ ಸಹಾಯ?
ಆಯುಷ್ಮಾನ್ ಭಾರತ್: ಕೊಟ್ಟಷ್ಟು ಲಾಭ ಮಾಡಿಕೊಂಡಿದ್ದೀರಾ?
ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿಲಾಗಿದ್ದು, ಗ್ರಾಮೀಣ ಆರೋಗ್ಯ ಕ್ಷೇತದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ.
ಕೈಗಾರಿಕೆ ವಲಯಕ್ಕೆ ಅಭಯಹಸ್ತ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ಪಿಂಚಣಿ!
ಮಧ್ಯಂತರ ಬಜೆಟ್ ನಲ್ಲಿ ಕೈಗಾರಿಕೆಗೆ ಭೃಪೂರ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಕೈಗಾರಿಕೋದ್ಯಮ ವಲಯದ ಸಂತಸ ಇಮ್ಮಡಿಗೊಳಿಸಿದೆ.
ಕೈಗಾರಿಕೆ ವಲಯಕ್ಕೆ ಅಭಯಹಸ್ತ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ಪಿಂಚಣಿ!

ಸಿನಿಮಾ ರಂಗದ ರಂಗು ಹೆಚ್ಚಿಸಿದ ಬಜೆಟ್: ಚಿತ್ರೋದ್ಯಮ ಫುಲ್ ಖುಷ್!
ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಮನರಂಜನೆ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಸಿನಿಮಾ ಉದ್ಯಮಕ್ಕೆ ಸಿಹಿ ಸುದ್ದಿ ನೀಡಿದೆ.
ಬಜೆಟ್ ಮಂಡನೆ ಮುಕ್ತಾಯ
ಕೇಂದ್ರ ಸರ್ಕಾರದ ಮಧ್ಯಮತರ ಬಜೆಟ್ ಮಂಡನೆ ಮುಕ್ತಾಯ. ಸಂಸತ್ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ
ಬಜೆಟ್ ಮಂಡಿಸಿದ ಸಚಿವ ಪಿಯೂಷ್ ಗೋಯಲ್‌ಗೆ ಅರುಣ್ ಜೇಟ್ಲಿ ಅಭಿನಂದನೆ
The Interim Budget presented by Shri Piyush Goyal today marks a high point in the policy directions that the Government headed by Prime Minister Shri Narendra Modi has given to this nation. @narendramodi@PiyushGoyal
— Arun Jaitley (@arunjaitley) February 1, 2019
Interim Budgets are also an opportunity for the Government of the day to introspect their performance of the last five years and place its facts before the people.
— Arun Jaitley (@arunjaitley) February 1, 2019
My compliments to Shri Piyush Goyal for delivering an excellent Budget. The Budget furthers the agenda of the Government headed by Prime Minister Shri @narendramodi ji to comprehensively address the challenges of the economy. @PiyushGoyal
— Arun Jaitley (@arunjaitley) February 1, 2019
ನಿಮ್ಮ ವೇತನ 41,666 ರೂ.?: ತೆರಿಗೆ ಮರೆತು ಬಿಡಿ ಅಂದಿದೆ ಕೇಂದ್ರ!
ಇನ್ನು ಮುಂದೆ ವಾರ್ಷಿಕ 5 ಲಕ್ಷ ರೂ. ವರೆಗೆ ಆದಾಯ ಇರುವವರು ತೆರಿಗೆ ವಿನಾಯ್ತಿ ಪಡೆದಿದ್ದಾರೆ. ಅಂದರೆ ಮಾಸಿಕ 41,666 ರೂ. ವೇತನ ಹೊಂದಿರುವವರು ಇನ್ನು ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಈ ಮೊದಲು 20,833 ರೂ. ಇತ್ತು.
ನಿಮ್ಮ ವೇತನ 41,666 ರೂ.?: ತೆರಿಗೆ ಮರೆತು ಬಿಡಿ ಅಂದಿದೆ ಕೇಂದ್ರ!

ಸೈನ್ಯ ದೇಶದ ಚೈತನ್ಯ: ರಕ್ಷಣಾ ವಲಯಕ್ಕೆ ಅಗಾಧ ಮೊತ್ತ!
ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಭಾರೀ ಮೊತ್ತವನ್ನು ಮೀಸಲಿರಿಸಲಾಗಿದ್ದು, ದೇಶದ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ.
5 ಲಕ್ಷಕ್ಕೆ ತೆರಿಗೆ ಮಿತಿ ಹೆಚ್ಚಿಸಿದ ಬೆನ್ನಲ್ಲೇ ಸೆನ್ಸೆಕ್ಸ್ ನಲ್ಲಿ ಏರಿಕೆ
ಮುಂಬೈ ಷೇರುಪೇಟೆಯ ಮೇಲೆ ಬಜೆಟ್ ಎಫೆಕ್ಟ್. 5 ಲಕ್ಷಕ್ಕೆ ತೆರಿಗೆ ಮಿತಿ ಹೆಚ್ಚಿಸಿದ ಬೆನ್ನಲ್ಲೇ ಸೆನ್ಸೆಕ್ಸ್ನಲ್ಲಿ ಏರಿಕೆ. 450 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್. ನಿಫ್ಟಿಯಲ್ಲೂ ಬರೋಬ್ಬರಿ 150 ಅಂಕಗಳ ಏರಿಕೆ. ತೆರಿಗೆ ಮಿತಿ ಹೆಚ್ಚಿಸುವ ಮುನ್ನ 150 ಅಂಕ ಏರಿಕೆ ಕಂಡಿದ್ದ ಸೆನ್ಸೆಕ್ಸ್
ಜಾಗತಿಕ ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಭಾರತದ್ದೇ ನಾಯಕತ್ವ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ ವೇಗದ, ಸುರಕ್ಷಿತ ಸೇವೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಇದರಿಂದ ಬೃಹತ್ ಉತ್ತೇಜನ. ಜಾಗತಿಕ ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಭಾರತದ್ದೇ ನಾಯಕತ್ವ
40 ಸಾವಿರವರೆಗಿನ ಬಡ್ಡಿಗೆ ಟಿಡಿಎಸ್ ಇಲ್ಲ
ಟಿಡಿಎಸ್ ಮಿತಿಯಲ್ಲೂ ಏರಿಕೆ. 40 ಸಾವಿರವರೆಗಿನ ಬಡ್ಡಿಗೆ ಟಿಡಿಎಸ್ ಇಲ್ಲ. ಈ ಮುಂಚೆ 10 ಸಾವಿರಕ್ಕೆ ಟಿಡಿಎಸ್ ಕಟ್ಟಬೇಕಿತ್ತು. ಟಿಡಿಎಸ್ ಮಿತಿ ಹೆಚ್ಚಳದಿಂದ ಠೇವಣಿದಾರರಿಗೆ ಲಾಭ. ಮನೆ ಬಾಡಿಗೆ ಮೇಲಿನ ಸೆಸ್ ಇಳಿಕೆ.
2030ಕ್ಕೆ ಎಲ್ಲ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತನೆ
ವಿಷನ್ 2030: ಭಾರತದ ಹಣಕಾಸು 10 ಟ್ರಿಲಿಯನ್ ಡಾಲರ್ ತಲುಪಬೇಕು. 2030ಕ್ಕೆ ಎಲ್ಲ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತನೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಆಮದು ಮಾಡಿಕೊಳ್ಳದ ಭಾರತ ನಿರ್ಮಾಣವೇ ಗುರಿ
ನ್ಯಾಷನಲ್ ಎಜುಕೇಷನ್ ಮಿಷನ್ ಗಾಗಿ 38,572 ಕೋಟಿ ರೂಪಾಯಿ
ರಾಷ್ಟ್ರೀಯ ಶಿಕ್ಷಣ ಯೋಜನೆಗೆ ಅನುದಾನ. ನ್ಯಾಷನಲ್ ಎಜುಕೇಷನ್ ಮಿಷನ್ ಗಾಗಿ 38,572 ಕೋಟಿ ರೂಪಾಯಿ
ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76,800 ಕೋಟಿ ರೂಪಾಯಿ ಅನುದಾನ
ಪ.ಜಾತಿ ಹಾಗೂ ಪ.ಪಂಗಡ ಅಭಿವೃದ್ಧಿ. ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76,800 ಕೋಟಿ ರೂಪಾಯಿ ಅನುದಾನ. ಪರಿಶಿಷ್ಟ ಪಂಗಡ ಅಭಿವೃದ್ಧಿಗೂ ಈ ಬಾರಿ ಹೆಚ್ಚಿನ ಅನುದಾನ ವ್ಯವಸ್ಥೆ
5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
ಜನಸಾಮಾನ್ಯರ ತೆರಿಗೆ ಹೊರೆ ಇಳಿಸಿದ ಕೇಂದ್ರ ಸರ್ಕಾರ. 5 ಲಕ್ಷದವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ಇಲ್ಲ. ಶೇ .5 ರಷ್ಟು ಇದ್ದ ತೆರಿಗೆ ರದ್ದುಗೊಳಿಸಿದ ಕೇಂದ್ರ ಸರ್ಕಾರ. 6.5 ಲಕ್ಷ ಆದಾಯದವರೆಗೂ ತೆರಿಗೆ ಇಲ್ಲ . ಪಿ.ಎಫ್ ಸೇರಿದಂತೆ ಹಲವು ಉಳಿತಾಯಗಳಿಗೂ ಟ್ಯಾಕ್ಸ್ ಇಲ್ಲ. ಮಧ್ಯಮ ವರ್ಗ ಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಇಲ್ಲ. 2 ಲಕ್ಷದವರೆಗಿನ ಗೃಹ ಸಾಲಕ್ಕೆ ತೆರಿಗೆ ಇಲ್ಲ. ಶಿಕ್ಷಣ ಸಾಲಕ್ಕೂ ತೆರಿಗೆ ಇಲ್ಲ. 41 ಸಾವಿರದ 666 ರೂ. ಸಂಬಳದಾರರಿಗೆ ಟ್ಯಾಕ್ಸ್ ಇಲ್ಲ. 20 ಸಾವಿರ 833 ರೂ.ಗಿಂತ ಸಂಬಳ ಹೆಚ್ಚಿದ್ದವರು ಟ್ಯಾಕ್ಸ್ ಕಟ್ಟಬೇಕಿತ್ತು
2022ರೊಳಗೆ ಸ್ವದೇಶಿ ಉಪಗ್ರಹಗಳ ಉಡಾವಣೆ ತೀರ್ಮಾನ
2022ರೊಳಗೆ ಸ್ವದೇಶಿ ಉಪಗ್ರಹಗಳ ಉಡಾವಣೆ ತೀರ್ಮಾನ. ಗಗನಯಾನ ಕ್ಷೇತ್ರಕ್ಕೆ ಕೇಂದ್ರದಿಂದ ಸಂಪೂರ್ಣ ಸಹಕಾರ
ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಳ
ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಳ. ಶೇ. 50ರಷ್ಟು ಮೊಬೈಲ್ ಡೇಟಾ ಕ್ಷೇತ್ರದಲ್ಲಿ ಅಭಿವೃದ್ಧಿ. ಮೊಬೈಲ್ ಕಂಪನಿಗಳ ಉದ್ಯಮದ ವಿಸ್ತರಣೆಗೆ ಅನುಕೂಲ.
ಸಾಗರ ಮಾಲಾ ಯೋಜನೆಯಡಿಯಲ್ಲಿ ಬಂದರುಗಳ ಅಭಿವೃದ್ಧಿ
ಸಾಗರ ಮಾಲಾ ಯೋಜನೆಯಡಿಯಲ್ಲಿ ಬಂದರುಗಳ ಅಭಿವೃದ್ಧಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತ್ವರಿತಗತಿ ಕಾಮಗಾರಿ. ದೇಶಾದ್ಯಂತ ದಿನಕ್ಕೆ 27 ಕಿಲೋಮೀಟರ್ ಹೆದ್ದಾರಿ ರಸ್ತೆ ನಿರ್ಮಾಣದ ದಾಖಲೆ.
ಸಿನಿಮಾ ಶೂಟಿಂಗ್ ಗೆ ಏಕಗವಾಕ್ಷಿ ಯೋಜನೆ ಅಡಿ ಅನುಮತಿ
ಸಿನಿಮಾ ಶೂಟಿಂಗ್ ಗೆ ಏಕಗವಾಕ್ಷಿ ಯೋಜನೆ ಅಡಿ ಅನುಮತಿ. ಸಿನಿಮಾ ಶೂಟಿಂಗ್ ಗೆ ಶೀಘ್ರ ಅನುಮತಿ ನೀಡಲು ವ್ಯವಸ್ಥೆ
ಮಧ್ಯಮ ವರ್ಗದ ಅವಶ್ಯಕ ಸಾಮಗ್ರಿಗಳು 0 ಯಿಂದ ಶೇ.5ರಷ್ಟು ಜಿಎಸ್ಟಿ ವ್ಯಾಪ್ತಿಯಲ್ಲಿವೆ
FM Piyush Goyal on #Budget2019 💼 #BudgetForNewIndiapic.twitter.com/lJ9SJVcNsp
— PIB India (@PIB_India) February 1, 2019
