ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್| ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ ಪಠಿಸಿದ ಮೋದಿ ಸರ್ಕಾರ| ರೈತ, ಕಾರ್ಮಿಕ, ಜನಸಾಮಾನ್ಯರ ಪರ ಬಜೆಟ್ ಮಂಡನೆ| ಕೇಂದ್ರ ಸಕಾರ್ಕಾರದ ಮಧ್ಯಂತರ ಬಜೆಟ್‌ನ ಮುಖ್ಯಾಂಶಗಳು ನಿಮಗಾಗಿ

ನವದೆಹಲಿ(ಫೆ.01): ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ದೇಶಕ್ಕೆ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಎಂಬ ಭರ್ಜರಿ ಗಿಫ್ಟ್ ನೀಡಿದೆ. ಸಮಾಜದ ಎಲ್ಲಾ ವರ್ಗವನ್ನೂ ಪ್ರತಿನಿಧಿಸುವ ಮಧ್ಯಂತರ ಬಜೆಟ್ ಮಂಡನೆ ಮಾಡುವ ಮೂಲಕ ಎನ್‌ಡಿಎ ಸರ್ಕಾರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧಪಡಿಸಿದೆ.

ಅದರಂತೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ 2019ರ ಪ್ರಮುಖ ಅಂಶಗಳ ಮೇಲೆ ಗಮನ ಹರಿಸಿದಾಗ ನಮಗೆ ಕಾಣ ಸಿಗುವುದು...

ದೇಶದ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡೇ ಈ ಮಧ್ಯಂತರ ಬಜೆಟ್‌ನ್ನು ಮಂಡಿಸಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿ ಗೋಚರವಾಗುತ್ತದೆ.

ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಈ ಬಜೆಟ್ ಮಂಡನೆ ಮಾಡಲಾಗಿದೆ ಎಂಬ ಆರೋಪದ ಮಧ್ಯೆಯೂ ಜನಪ್ರಿಯ ಬಜೆಟ್‌ವೊಂದನ್ನು ಮಂಡಿಸುವಲ್ಲಿ ಎನ್‌ಡಿಎ ಸರ್ಕಾರ ಯಶಸ್ವಿಯಾಗಿದೆ ಎಂದೇ ಹೇಳಬೇಕಾಗುತ್ತದೆ.

ಒಟ್ಟಿನಲ್ಲಿ ರೈತ ಪರ, ಕಾರ್ಮಿಕ ಪರ ಮತ್ತು ಜನಸಾಮಾನ್ಯರ ಪರ ಬಜೆಟ್ ಮಂಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯಶಸ್ವಿಯಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಈ ಬಜೆಟ್ ಏನು ಮ್ಯಾಜಿಕ್ ಮಾಡಲಿದೆ ಕಾದು ನೋಡಬೇಕಿದೆ.