ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?

ಬೆಂಗಳೂರಿನಲ್ಲಿ ಪೊಲೀಸರ ಸೋಗಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿದ ಗ್ಯಾಂಗ್, ಕೇರಳದ ಯುವಕರಿಂದ 20 ಲಕ್ಷ ರೂಪಾಯಿ ದೋಚಿದೆ. ಸಂತ್ರಸ್ತರು ನೀಡಿದ ದೂರು ಮತ್ತು ವಿಡಿಯೋ ಸಾಕ್ಷ್ಯದಿಂದ, ಈ ಕೃತ್ಯದ ಹಿಂದೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಆತನ ಸ್ನೇಹಿತರ ಕೈವಾಡವಿರುವುದು ಬೆಳಕಿಗೆ ಬಂದಿದೆ.

Share this Video
  • FB
  • Linkdin
  • Whatsapp

ಅವರು ದೂರದ ಕೇರಳಾ ರಾಜ್ಯದವರು.. ಯಾವುದೋ ವ್ಯವಹಾರಕ್ಕೆ ಅಂತ ಬೆಂಗಳೂರಿಗೆ ಬಂದಿದ್ರು.. ಹೋಟೆಲ್​​ವೊಂದರಲ್ಲಿ ರೂಮ್​ ಬುಕ್​ ಮಾಡಿಕೊಂಡು ರೆಸ್ಟ್​​ ಮಾಡ್ತಿದ್ರು.. ಇದೇ ಟೈಂಗೆ ನಮ್ಮ ಕರ್ನಾಟಕ ಪೊಲೀಸರು ರೇಡ್​​ ಮಾಡಿಯೇ ಬಿಟ್ಟರು.. ಆ ರೂಮ್​ ಒಳಗೆ ನುಗ್ಗಿ ವಿಚಾರಣೆ ಮಾಡಲು ಶುರು ಮಾಡಿದ್ರು.. ಪೊಲೀಸರಿಗೆ ಆ ಕೇರಳಾ ಹುಡುಗರ ಬಳಿ ಇದ್ದ ಹಣ ಇಲ್ಲಿಗಲ್​​ ಹಣ ಅಂತನ್ನಿಸಿದೆ.. ತಡ ಮಾಡದೇ ಹಣವನ್ನ ತಗೆದುಕೊಂಡು ಪೊಲೀಸ್​​ ಜೀಪ್​ನಲ್ಲಿ ಹಾಕೊಂಡು ಅಲ್ಲಿಂದ ಹೊರಟೇಬಿಡ್ತಾರೆ.

Related Video