ಮುಂಬೈ (ಆ.7): 'ಜೆನ್ ಝೀಗಳು ಕೂಡಾ ನಮ್ಮವರೇ. ಅವರು ತಮ್ಮ ಕಳವಳಗಳ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆಂದರೆ ಅದನ್ನು ಖಂಡಿತಾ ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಜೆನ್ ಝೀಗಳು ಪ್ರತಿಭಟನೆ ನಡೆಸುತ್ತಿದ್ದಾರೆಂದ ಮಾತ್ರಕ್ಕೆ ಅವರು ದೇಶಾ ವಿರೋಧಿಗಳಾಗಲ್ಲ, ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಂವಾದದ ಒಂದು ನ್ಯಾಯಸಮ್ಮತ ರೂಪ' ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ನೀಟ್ ಪರೀಕ್ಷಾ ಅಕ್ರಮ ವಿರೋಧಿಸಿ ಇತ್ತೀಚೆ ದೆಹಲಿಯಲ್ಲಿ ನಡೆದ ಜೆನ್ ಝೀ ಪ್ರತಿಭಟನೆ, ಅದಕ್ಕೆ ದೇಶವ್ಯಾಪಿ ವ್ಯಕ್ತವಾದಪರ-ವಿರೋಧ ಅಭಿಪ್ರಾಯಗಳು ಬೆನ್ನಲ್ಲೇ ಭಾಗವತ್ ವ್ಯಕ್ತಪಡಿಸಿದ ಈ ಅಭಿಪ್ರಾಯ ಭಾರೀ ಮಹತ್ವ ಪಡೆದುಕೊಂಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:33 PM (IST) Aug 07
ಭಾರತದಲ್ಲಿ ರಮ್ ಎಂದಾಕ್ಷಣ ಅನೇಕರಿಗೆ ಮೊದಲು ನೆನಪಾಗುವ ಹೆಸರು ‘ಓಲ್ಡ್ ಮಾಂಕ್’. ಏಳು ದಶಕಗಳಿಗೂ ಹೆಚ್ಚು ಕಾಲ ಭಾರತೀಯರೊಂದಿಗೆ ಬೆಸೆದುಕೊಂಡಿರುವ ಈ ಡಾರ್ಕ್ ರಮ್, ಕೇವಲ ಮದ್ಯದ ಬ್ರ್ಯಾಂಡ್ ಆಗಿ ಉಳಿದಿಲ್ಲ.
09:26 PM (IST) Aug 07
'ಪ್ರಿಯಾ ಅವರೇ, ನೀವು ಇಂದು ಕೇಸರಿ ಬಣ್ಣದ ಉಡುಪನ್ನೇ ಏಕೆ ಧರಿಸಿದ್ದೀರಿ? ಇದಕ್ಕೆ ಯಾವುದಾದರೂ ವಿಶೇಷ ಕಾರಣವಿದೆಯೇ? ಕೇರಳದಲ್ಲಿ ಸದ್ಯ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದೆ, ಅದಕ್ಕೇನಾ?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಮರೆಯಲಾಗದ ಉತ್ತರ ಕೊಟ್ಟಿದ್ದಾರೆ, ನೋಡಿ..!
07:34 PM (IST) Aug 07
ಒಂದು ಕಾಲದಲ್ಲಿ ಸ್ಟಾರ್ ನಟಿಯರಿಗಿಂತ ಹೆಚ್ಚು ಜನಪ್ರಿಯತೆ ಗಳಿಸಿದ್ದ ನಟಿ ಸಿಲ್ಕ್ ಸ್ಮಿತಾ. ಆದರೆ ಬೋಲ್ಡ್ ಪಾತ್ರಗಳಿಗೆ ಸೀಮಿತವಾದ ಕಾರಣ ಅವರ ಹೆಸರು ಮರೆಯಾಯ್ತು. ಬರೀ ಬೋಲ್ಡ್ ಪಾತ್ರಗಳನ್ನೇ ಮಾಡುತ್ತಿದ್ದ ಈ ನಟಿಗೆ ರೇಷ್ಮೆ ಸೀರೆ ಉಡಿಸಿ, ವಿಭಿನ್ನ ಪಾತ್ರ ನೀಡಿದ ನಿರ್ಮಾಪಕ ಯಾರು ಗೊತ್ತಾ?
07:09 PM (IST) Aug 07
ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಓದೆಲಾ ಕಾಂಬಿನೇಷನ್‌ನ ಪ್ಯಾನ್-ಇಂಡಿಯಾ ಸಿನಿಮಾ 'ದಿ ಪ್ಯಾರಡೈಸ್'. 'ದಸರಾ' ಬ್ಲಾಕ್‌ಬಸ್ಟರ್ ಹಿಟ್ ನಂತರ ಈ ತಂಡ ಮತ್ತೆ ಒಂದಾಗಿದೆ.
06:28 PM (IST) Aug 07
06:02 PM (IST) Aug 07
ತಿರುಮಲದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿ ಕ್ಯೂ ಲೈನ್‌ನಲ್ಲಿ ಗಂಟೆಗಟ್ಟಲೇ ಕಾದು ನಿಲ್ಲುವ ಭಕ್ತರಿಗೆ ಸರಿಯಾದ ಸಮಯದಲ್ಲಿ ಅನ್ನಪ್ರಸಾದ ಪೂರೈಸುವ ಹೊಸ ವಿಧಾನವನ್ನು ಟಿಟಿಡಿ ಜಾರಿ ಮಾಡುತ್ತಿದೆ. ಪ್ರಯೋಗಾತ್ಮಕಾಗಿ ಈ ಯೋಜನೆ ಜಾರಿಯಾಗಿದ್ದು, ಭಕ್ತರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
05:34 PM (IST) Aug 07
ವಿಶ್ವವೇ ಮೆಚ್ಚಿದ ತೆಲುಗು ನಿರ್ದೇಶಕ ರಾಜಮೌಳಿ. ಅವರ ಕುಟುಂಬದ ಪ್ರತಿಯೊಬ್ಬರಿಗೂ ಸಿನಿಮಾದ ನಂಟಿದೆ. ಆದರೆ ರಾಜಮೌಳಿ ಮನೆಗೆ ಸೊಸೆಯಾಗಿ ಬಂದ ಪೂಜಾ ಪ್ರಸಾದ್ ಕೂಡ ದೊಡ್ಡ ಸಿನಿಮಾ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ ಎಂಬ ವಿಚಾರ ನಿಮಗೆ ಗೊತ್ತಾ?
05:16 PM (IST) Aug 07
ಯಶ್ ನಟನೆ, ಗೀತೂ ಮೋಹನದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಚಿತ್ರೀಕರಣಗೊಂಡಿರುವ ಟಾಕ್ಸಿಕ್ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಾಳೆ ಟ್ರೇಲರ್ ಬಿಡುಗಡೆ..
05:16 PM (IST) Aug 07
Usha Nadkarni: ಹಿರಿಯ ನಟಿ ಉಷಾ ನಾಡಕರ್ಣಿ ಅವರಿಗೆ ಈಗ 80 ವರ್ಷ. 1987ರಿಂದಲೂ ಮುಂಬೈನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಭಯವಿದ್ದರೂ ಈಗ ಒಂಟಿತನವನ್ನೇ ಅಪ್ಪಿಕೊಂಡಿದ್ದಾರೆ.
04:34 PM (IST) Aug 07
03:39 PM (IST) Aug 07
03:37 PM (IST) Aug 07
03:17 PM (IST) Aug 07
03:12 PM (IST) Aug 07
ಸಾಲದ ಕಂತು ಪಾವತಿಸದ ಗ್ರಾಹಕರಿಗೆ ಆಗುವ ಕಿರುಕುಳ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಾಲ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
03:12 PM (IST) Aug 07
03:10 PM (IST) Aug 07
ಕಳೆದ ಎರಡು ದಶಕಗಳಿಂದ ನಮಗೆ ಅಪರಿಚಿತ ದಾರಿಗಳಲ್ಲಿ ದಾರಿದೀಪವಾಗಿದ್ದ ಗೂಗಲ್ ಮ್ಯಾಪ್ಸ್ (Google Maps) ಈಗ ಕೇವಲ ನಕ್ಷೆಯಾಗಿ ಉಳಿದಿಲ್ಲ. ಗೂಗಲ್ ಸಂಸ್ಥೆಯು ತನ್ನ ಮ್ಯಾಪ್ಸ್ ಅಪ್ಲಿಕೇಶನ್‌ಗೆ ಭರ್ಜರಿ ಅಪ್‌ಡೇಟ್ ನೀಡಿದ್ದು, ಇನ್ನು ಮುಂದೆ ಇದು ನಿಮ್ಮ ಪರ್ಸನಲ್ ಅಸಿಸ್ಟೆಂಟ್‌ನಂತೆ ಕೆಲಸ ಮಾಡಲಿದೆ. ಏನದು ? ತಿಳಿದುಕೊಳ್ಳಲು ಸ್ಟೋರಿ ಓದಿ..
02:59 PM (IST) Aug 07
ಸತತ ಒಂದು ತಿಂಗಳಿನಿಂದಲೂ ಹೆಚ್ಚು ಕಾಲ ಕ್ರೈಂ ಹಾಗೂ ಎಸ್ಕೇಪ್ ಕುರಿತ ವೆಬ್ ಸೀರಿಸ್ ನೋಡಿದ್ದಾನೆ. ಎಲ್ಲಾ ವಿದ್ಯೆ ಕರಗತ ಮಾಡಿಕೊಂಡ ಗಂಡ, ಪತ್ನಿಯನ್ನೇ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈತನ ಅರೆಸ್ಟ್ ಕೂಡ ವೆಬ್ ಸಿರೀಸ್ ಪ್ರಕಾರವೇ ನಡೆದಿದೆ.
02:56 PM (IST) Aug 07
02:34 PM (IST) Aug 07
02:03 PM (IST) Aug 07
01:22 PM (IST) Aug 07
01:19 PM (IST) Aug 07
12:58 PM (IST) Aug 07
ಚಿರಂಜೀವಿ, ಕಮಲ್ ಹಾಸನ್, ವಿಜಯ್, ಪ್ರಭಾಸ್, ಮಹೇಶ್ ಬಾಬು, ಅಜಿತ್, ವಿಕ್ರಮ್ ಹೀಗೆ ಸೌತ್ ಇಂಡಸ್ಟ್ರಿಯ ಎಲ್ಲ ಘಟಾನುಘಟಿಗಳ ಜೊತೆ ಸ್ಕ್ರೀನ್ ಶೇರ್ ಮಾಡಿರುವ ತ್ರಿಶಾ, ಪ್ರತಿ ಸಿನಿಮಾದಲ್ಲೂ ಹೊಸತನ ಮೆರೆದಿದ್ದಾರೆ. ಆದರೆ, ತ್ರಿಷಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಹೇಗೆ? ಈ ಸ್ಟೋರಿ ನೋಡಿ, ಶಾಕ್ ಆಗ್ತೀರಾ!
12:56 PM (IST) Aug 07
'ದಕ್ಷಿಣ ಕಾಶಿ' ಎಂದೇ ಖ್ಯಾತಿ ಪಡೆದಿರುವ ಪ್ರಸಿದ್ಧ ಶೈವ ಕ್ಷೇತ್ರ ಕಾಳೇಶ್ವರ ಮುಕ್ತೇಶ್ವರ ದೇವಾಲಯ ಹೊಸ ರೂಪ ಪಡೆಯುತ್ತಿದೆ. ಪ್ರಾಣಹಿತ, ಗೋದಾವರಿ ಮತ್ತು ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ಈ ದೇವಾಲಯದ ಭವ್ಯ ಪುನರ್ನಿರ್ಮಾಣ ಕಾರ್ಯ ಚುರುಕಿನಿಂದ ಸಾಗುತ್ತಿದೆ.
12:43 PM (IST) Aug 07
12:28 PM (IST) Aug 07
ಇಂಡಿಗೋ 20ನೇ ಆ್ಯನಿವರ್ಸರಿ ಆಚರಿಸುತ್ತಿದೆ. 20 ಸಾವಿರ ಲಕ್ಕಿ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡುತ್ತಿದೆ. 10 ರೂಪಾಯಿ ವರೆಗಿನ ಪ್ರಯಾಣ ಟಿಕೆಟ್ ಉಚಿತವಾಗಿ ಸಿಗಲಿದೆ. ಇಂಡಿಗೋದಲ್ಲಿ ಉಚಿತ ಟಿಕೆಟ್ ಪಡೆಯುವುದು ಹೇಗೆ?
12:27 PM (IST) Aug 07
ರೈತರಿಗೆ ಪ್ರಕೃತಿ ನೀಡಿದ ಅದ್ಭುತ ಕೊಡುಗೆ ಎಂದರೆ ಅದು 'ಆಕಾಶದ ಬೇಟೆಗಾರ' ಗೂಬೆಗಳು. ಕೋಟ್ಯಂತರ ರೂಪಾಯಿ ಬೆಳೆ ನಾಶ ಮಾಡುತ್ತಿದ್ದ ಇಲಿಗಳ ಗುಂಪನ್ನು ಬೇಟೆಯಾಡಲು ದ್ರಾಕ್ಷಿ ತೋಟಗಳ ಮಾಲೀಕರು ಒಂದು ವಿಶಿಷ್ಟ ತಂತ್ರ ರೂಪಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..
12:01 PM (IST) Aug 07
ದಶಕಗಳ ಕಾಲ ಪ್ರೀತಿಯಿಂದ ಸಂಸಾರ ನಡೆಸಿದ್ದ ಈ ಜೋಡಿಯ ನಡುವೆ ಇತ್ತೀಚಿನ ದಿನಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಸಂಗೀತಾ ಅವರು ಪತಿಯಿಂದ ಬೇರ್ಪಡಲು ನಿರ್ಧರಿಸಿ, ಡಿಸೆಂಬರ್ 23, 2025 ರಂದು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇಂದು ರಿಸಲ್ಟ್ ಏನಾಗಬಹುದು? ಈ ಸ್ಟೋರಿ ನೋಡಿ..
11:45 AM (IST) Aug 07
ಏಥರ್ ಎನರ್ಜಿ ತನ್ನ ಹೊಸ ಬಜೆಟ್ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ 'ಏಥರ್ ಕೋನಾರ್ಕ್' ಅನ್ನು ಆಗಸ್ಟ್ 29 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ 'ಇಎಲ್' ಪ್ಲಾಟ್‌ಫಾರ್ಮ್ ಆಧಾರಿತ ಈ ಸ್ಕೂಟರ್, ₹1 ಲಕ್ಷದಿಂದ ₹1.20 ಲಕ್ಷದ ಅಂದಾಜು ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ.
11:27 AM (IST) Aug 07
ಶ್ರೀಲಂಕಾ ಎದುರಿನ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ದೊಡ್ಡ ಆಘಾತ ಆಗಿದೆ. ಕ್ಯಾಪ್ಟನ್ ಶುಬ್ಮನ್ ಗಿಲ್ ಗಾಯದಿಂದ ಹೊರಬಿದ್ದಿದ್ದಾರೆ. ಅಷ್ಟಕ್ಕೂ ಗಿಲ್ ಅವರಿಗೆ ಏನಾಯ್ತು ಅನ್ನೋ ವಿವರ ಇಲ್ಲಿದೆ..
11:01 AM (IST) Aug 07
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ತಮ್ಮ ಸಬ್ಸಿಡಿ ಸೌಲಭ್ಯವನ್ನು ಮುಂದುವರಿಸಲು ಆಗಸ್ಟ್ 16ರ ಗಡುವಿನೊಳಗೆ ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕಿದೆ.
10:28 AM (IST) Aug 07
ಇನ್‌ಸ್ಟಾಗ್ರಾಮ್ ಸಂವಾದದಲ್ಲಿ, ರಾಹುಲ್ ಗಾಂಧಿ ಅವರು ಬಿಜೆಪಿಯಲ್ಲಿ ತಮ್ಮ ನೆಚ್ಚಿನ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅವರ ಶಾಂತ ಸ್ವಭಾವ ಮತ್ತು ಸೇನಾ ಜ್ಞಾನವನ್ನು ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.
09:58 AM (IST) Aug 07
09:33 AM (IST) Aug 07
09:06 AM (IST) Aug 07
08:45 AM (IST) Aug 07
08:30 AM (IST) Aug 07
ಒಂದು ವರ್ಷದಿಂದ ಬಾಹ್ಯಾಕಾಶದಲ್ಲಿ ತೇಲುತ್ತಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅಪ್ಪಳಿಸಿದೆ. ಗಂಟೆಗೆ 5,400 ಮೈಲಿ ವೇಗದಲ್ಲಿ ಅಪ್ಪಳಿಸಿದ ಈ ರಾಕೆಟ್, ಚಂದ್ರನ ಮೇಲೆ ದೊಡ್ಡ ಕುಳಿಯನ್ನು ಸೃಷ್ಟಿಸಿರಬಹುದೆಂದು ಅಂದಾಜಿಸಲಾಗಿದೆ.
08:08 AM (IST) Aug 07
07:57 AM (IST) Aug 07
ಪ್ರಧಾನಿ ನರೇಂದ್ರ ಮೋದಿಯವರು, ಫ್ರೆಂಡ್‌ಶಿಪ್ ಡೇಯಷ್ಟೇ ಉತ್ಸಾಹದಿಂದ ಆಗಸ್ಟ್ 7ರ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲು ಯುವಜನರಿಗೆ ಕರೆ ನೀಡಿದ್ದಾರೆ. ವಿಡಿಯೋದಲ್ಲಿ ಏನೆಲ್ಲ ಮನವಿ ಮಾಡಿದರು ಅನ್ನೋ ವಿವರ ಇಲ್ಲಿದೆ..
07:55 AM (IST) Aug 07
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು, ಮೀಸಲಾತಿ ಶಾಶ್ವತವಲ್ಲ ಮತ್ತು ಪ್ರಗತಿ ಸಾಧಿಸಿದವರು ಇತರರಿಗೆ ಅವಕಾಶ ನೀಡಬೇಕು ಎಂದು ಕರೆ ನೀಡಿದ್ದಾರೆ. ಜೆನ್ ಝೀ ಪ್ರತಿಭಟನೆಗಳನ್ನು ದೇಶವಿರೋಧಿ ಎಂದು ಪರಿಗಣಿಸಬಾರದು ಎಂದಿದ್ದಾರೆ.