'ದಕ್ಷಿಣ ಕಾಶಿ' ಎಂದೇ ಖ್ಯಾತಿ ಪಡೆದಿರುವ ಪ್ರಸಿದ್ಧ ಶೈವ ಕ್ಷೇತ್ರ ಕಾಳೇಶ್ವರ ಮುಕ್ತೇಶ್ವರ ದೇವಾಲಯ ಹೊಸ ರೂಪ ಪಡೆಯುತ್ತಿದೆ. ಪ್ರಾಣಹಿತ, ಗೋದಾವರಿ ಮತ್ತು ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ಈ ದೇವಾಲಯದ ಭವ್ಯ ಪುನರ್ನಿರ್ಮಾಣ ಕಾರ್ಯ ಚುರುಕಿನಿಂದ ಸಾಗುತ್ತಿದೆ.

ತೆಲಂಗಾಣ: 'ದಕ್ಷಿಣ ಕಾಶಿ' ಎಂದೇ ಖ್ಯಾತಿ ಪಡೆದಿರುವ ಪ್ರಸಿದ್ಧ ಶೈವ ಕ್ಷೇತ್ರ ಕಾಳೇಶ್ವರ ಮುಕ್ತೇಶ್ವರ ದೇವಾಲಯ ಹೊಸ ರೂಪ ಪಡೆಯುತ್ತಿದೆ. ಪ್ರಾಣಹಿತ, ಗೋದಾವರಿ ಮತ್ತು ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ಈ ದೇವಾಲಯದ ಭವ್ಯ ಪುನರ್ನಿರ್ಮಾಣ ಕಾರ್ಯ ಚುರುಕಿನಿಂದ ಸಾಗುತ್ತಿದೆ.

ನೆಲಸಮವಾದ ಹಳೆಯ ಕಟ್ಟಡಗಳು - ಭಕ್ತರ ಭಾವೋದ್ವೇಗ

ಈ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಕಳೆದ 47 ವರ್ಷಗಳ ಇತಿಹಾಸವಿದ್ದ ಭವ್ಯ ರಾಜಗೋಪುರಗಳು, ಪ್ರಾಕಾರಗಳು, ಗರ್ಭಗುಡಿ ಹಾಗೂ ಉಪ ದೇವಾಲಯಗಳನ್ನು ನೆಲಸಮ ಮಾಡಲಾಗಿದೆ. 1979ರಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡಗಳು ಕಣ್ಮರೆಯಾಗುತ್ತಿರುವುದನ್ನು ಕಂಡು ಅಲ್ಲಿನ ಅರ್ಚಕರು, ಸಿಬ್ಬಂದಿ ಮತ್ತು ಭಕ್ತರು ಭಾವುಕರಾದರು. ದಶಕಗಳ ಕಾಲ ಪೂಜೆ ಸಲ್ಲಿಸುತ್ತಾ ಬಂದಿದ್ದ ಗರ್ಭಗುಡಿಯನ್ನು ಕೆಡವುವಾಗ ಭಕ್ತರ ಕಣ್ಣಾಲಿಗಳು ತೇವಗೊಂಡವು.

198 ಕೋಟಿ ಮಾಸ್ಟರ್ ಪ್ಲಾನ್

ತೆಲಂಗಾಣ ಸರ್ಕಾರವು ಈ ಕ್ಷೇತ್ರದ ಅಭಿವೃದ್ಧಿಗಾಗಿ ಒಟ್ಟು 198 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಈ ಬೃಹತ್ ಅನುದಾನದೊಂದಿಗೆ ಏನೆಲ್ಲ ಮಾಡಲಿದೆ ಅಂತಾ ನೋಡೋದಾದ್ರೆ..

  • ಕೃಷ್ಣ ಶಿಲೆಗಳನ್ನು (ಕಪ್ಪು ಕಲ್ಲು) ಬಳಸಿ ದೇವಾಲಯ ನಿರ್ಮಾಣ
  • ಬೃಹತ್ ರಾಜಗೋಪುರಗಳು ಮತ್ತು ಕಲಾತ್ಮಕ ಪ್ರಾಕಾರಗಳ ನಿರ್ಮಾಣ
  • ಪಾರ್ವತಿ ದೇವಿ ಮತ್ತು ಸರಸ್ವತಿ ಅಮ್ಮನವರ ಪ್ರತ್ಯೇಕ ಉಪ ದೇವಾಲಯಗಳ ಅಭಿವೃದ್ಧಿ
  • ಅಧುನಿಕ ಹಂಗುಗಳೊಂದಿಗೆ ಭಕ್ತರಿಗೆ ಸಕಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ

ಮುಂದಿನ ವರ್ಷ ಪೂರ್ಣಗೊಳ್ಳುವ ಗುರಿ

ಸಚಿವ ಶ್ರೀಧರ್ ಬಾಬು ಅವರ ವಿಶೇಷ ಆಸಕ್ತಿಯಿಂದಾಗಿ ಈ ಯೋಜನೆಗೆ ವೇಗ ಸಿಕ್ಕಿದೆ. ಮುಂದಿನ ವರ್ಷ ನಡೆಯಲಿರುವ 'ಗೋದಾವರಿ ಪುಷ್ಕರಗಳ' ವೇಳೆಗೆ ನೂತನ ದೇವಾಲಯವನ್ನು ಸಿದ್ಧಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಜೂನ್ 30 ರಿಂದ ನೆಲಸಮ ಕಾರ್ಯ ಆರಂಭವಾಗಿದ್ದು, ಜುಲೈ 10 ರೊಳಗೆ ಸಂಪೂರ್ಣ ಸ್ವಚ್ಛಗೊಳಿಸಿ, ನಂತರ ಅಡಿಪಾಯ ಹಾಕುವ ಕೆಲಸ ನಡೆಯಲಿದೆ. ಒಟ್ಟಿನಲ್ಲಿ, ಮುಂದಿನ ಒಂದು ವರ್ಷದಲ್ಲಿ ಕಾಳೇಶ್ವರ ಕ್ಷೇತ್ರವು ದಕ್ಷಿಣ ಭಾರತದ ಅತ್ಯಂತ ಸುಂದರ ಮತ್ತು ಭವ್ಯ ಶಿಲ್ಪಕಲೆಯ ದೇವಾಲಯವಾಗಿ ಹೊರಹೊಮ್ಮಲಿದೆ.

Scroll to load tweet…