ಚಿರಂಜೀವಿ, ಕಮಲ್ ಹಾಸನ್, ವಿಜಯ್, ಪ್ರಭಾಸ್, ಮಹೇಶ್ ಬಾಬು, ಅಜಿತ್, ವಿಕ್ರಮ್ ಹೀಗೆ ಸೌತ್ ಇಂಡಸ್ಟ್ರಿಯ ಎಲ್ಲ ಘಟಾನುಘಟಿಗಳ ಜೊತೆ ಸ್ಕ್ರೀನ್ ಶೇರ್ ಮಾಡಿರುವ ತ್ರಿಶಾ, ಪ್ರತಿ ಸಿನಿಮಾದಲ್ಲೂ ಹೊಸತನ ಮೆರೆದಿದ್ದಾರೆ. ಆದರೆ, ತ್ರಿಷಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಹೇಗೆ? ಈ ಸ್ಟೋರಿ ನೋಡಿ, ಶಾಕ್ ಆಗ್ತೀರಾ!

Actress Trisha Krishnan from 10th Grade Story to South Indian Superstar Journey to know here: ಹತ್ತನೇ ಕ್ಲಾಸ್ ರಜೆಯಲ್ಲಿ ತಮಾಷೆಗಾಗಿ ಬಂದವಳು ಇಂದು ಕಾಲಿವುಡ್ ಮಹಾರಾಣಿ! ತ್ರಿಷಾ ಸಿನಿಮೀಯ ಪಯಣದ ರೋಚಕ ಕಥೆ!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸುಮಾರು ಎರಡು ದಶಕಗಳಿಂದ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿ ಆಳುತ್ತಿರುವ ನಟಿ ಅಂದ್ರೆ ಅದು ತ್ರಿಷಾ ಕೃಷ್ಣನ್. ಇಂದಿಗೂ ಹೊಸ ನಾಯಕಿಯರಿಗೆ ಪೈಪೋಟಿ ನೀಡುವ ಅವರ ಸೌಂದರ್ಯ ಮತ್ತು ನಟನೆಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದರೆ, ಈ 'ದಕ್ಷಿಣದ ಸುಂದರಿ' ಬಣ್ಣದ ಲೋಕಕ್ಕೆ ಕಾಲಿಟ್ಟ ಕಥೆ ಇದೆಯಲ್ಲ, ಅದು ಯಾವುದೋ ಸಿನಿಮಾದ ಸ್ಕ್ರಿಪ್ಟ್‌ಗಿಂತ ಕಮ್ಮಿ ಏನಿಲ್ಲ!

ಬೇಸಿಗೆ ರಜೆಯ ಮೋಜು; ಸಿನಿಮಾದಲ್ಲಿ ಮಿನಿ ಪಾತ್ರ!

ಸಾಮಾನ್ಯವಾಗಿ ಹತ್ತನೇ ತರಗತಿ ಪರೀಕ್ಷೆ ಮುಗಿದ ನಂತರ ಮಕ್ಕಳು ಟೂರ್ ಹೋಗೋಣ ಅಂತ ಪ್ಲಾನ್ ಮಾಡ್ತಾರೆ. ಆದರೆ 1999ರಲ್ಲಿ ಚೆನ್ನೈನ ಚರ್ಚ್ ಪಾರ್ಕ್ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿದ್ದ ಪುಟ್ಟ ಹುಡುಗಿ ತ್ರಿಷಾ ಮಾಡಿದ್ದೇ ಬೇರೆ. ಯಾವುದೋ ಒಂದು ಕುತೂಹಲಕ್ಕೆ, ತಮಾಷೆಗಾಗಿ ಶೂಟಿಂಗ್ ನೋಡಲು ಹೋದವಳು ಆಕಸ್ಮಿಕವಾಗಿ ಕ್ಯಾಮೆರಾ ಮುಂದೆ ನಿಂತುಬಿಟ್ಟಳು. ಅದು ಪ್ರಶಾಂತ್ ಮತ್ತು ಸಿಮ್ರಾನ್ ನಟನೆಯ 'ಜೋಡಿ' ಸಿನಿಮಾ. ಅಲ್ಲಿ ಸಿಮ್ರಾನ್ ಗೆಳತಿಯಾಗಿ ಕಾಣಿಸಿಕೊಂಡ ತ್ರಿಷಾ ಅವರಿಗೆ ಅಂದು ತಾನು ಮುಂದೊಂದು ದಿನ ಇಡೀ ಇಂಡಿಯಾವೇ ಮೆಚ್ಚುವ ನಟಿಯಾಗುತ್ತೇನೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲವಂತೆ!

ನಿರ್ದೇಶಕರು ಅಂದೇ ಕಂಡಿದ್ದರು 'ಸ್ಟಾರ್' ಕಳೆ!

'ಜೋಡಿ' ಚಿತ್ರದ ನಿರ್ದೇಶಕ ಪ್ರವೀಣ್ ಗಾಂಧಿ ಅವರು ತ್ರಿಷಾರನ್ನು ಮೊದಲ ಬಾರಿ ನೋಡಿದಾಗ ನಡೆದ ಘಟನೆಯನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ. "ನಾಯಕಿ ಜೊತೆ ಬರಲು ಕೆಲವು ಸುಂದರ ಹುಡುಗಿಯರು ಬೇಕೆಂದು ಕೇಳಿದಾಗ ತಾರಾ ಉಮೇಶ್ ಎಂಬುವವರು ತ್ರಿಷಾರನ್ನು ಕರೆತಂದಿದ್ದರು. ಆಗಷ್ಟೇ ಪರೀಕ್ಷೆ ಮುಗಿಸಿದ್ದ ತ್ರಿಷಾ, ಸಿನಿಮಾ ಅಂದ್ರೆ ಏನು? ಶೂಟಿಂಗ್ ಹೇಗಿರುತ್ತೆ? ಅಂತ ನೋಡಲು ಬಂದಿದ್ದಳು. ಅವಳ ಮುಖದಲ್ಲಿ ಒಂದು ವಿಶೇಷವಾದ ಕಳೆಯಿತ್ತು. ದೊಡ್ಡ ಪಾತ್ರ ಕೊಡುತ್ತೇನೆ ಎಂದರೂ ಅವಳು ಆಸಕ್ತಿ ತೋರಿಸಿರಲಿಲ್ಲ. ಕೇವಲ ತಮಾಷೆಗಾಗಿ ಬಂದ ಹುಡುಗಿ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಅಚ್ಚರಿ" ಎನ್ನುತ್ತಾರೆ ಅವರು.

ಮಾಡೆಲಿಂಗ್‌ನಿಂದ 'ಮಿಸ್ ಚೆನ್ನೈ' ವರೆಗೆ...

'ಜೋಡಿ' ಚಿತ್ರದ ನಂತರ ತ್ರಿಷಾ ಮತ್ತೆ ಸಿನಿಮಾದತ್ತ ಮುಖ ಮಾಡಲಿಲ್ಲ. ಬದಲಾಗಿ ಮಾಡೆಲಿಂಗ್ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿ ತಮ್ಮ ಜಾದೂ ತೋರಿಸಿದ ತ್ರಿಷಾ 'ಮಿಸ್ ಚೆನ್ನೈ' ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಸುಂದರಿಯನ್ನ ಕಂಡ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರು 'ಲೇಸಾ ಲೇಸಾ' ಚಿತ್ರದ ಮೂಲಕ ತ್ರಿಷಾರನ್ನು ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲಿಂದ ಶುರುವಾದ ತ್ರಿಷಾ ಹವಾ ಇಂದಿಗೂ ಕುಗ್ಗಿಲ್ಲ.

ಸ್ಟಾರ್‌ ನಟರ ಲಕ್ಕಿ ಚಾರ್ಮ್:

ಚಿರಂಜೀವಿ, ಕಮಲ್ ಹಾಸನ್, ವಿಜಯ್, ಪ್ರಭಾಸ್, ಮಹೇಶ್ ಬಾಬು, ಅಜಿತ್, ವಿಕ್ರಮ್ ಹೀಗೆ ಸೌತ್ ಇಂಡಸ್ಟ್ರಿಯ ಎಲ್ಲ ಘಟಾನುಘಟಿಗಳ ಜೊತೆ ಸ್ಕ್ರೀನ್ ಶೇರ್ ಮಾಡಿರುವ ತ್ರಿಶಾ, ಪ್ರತಿ ಸಿನಿಮಾದಲ್ಲೂ ಹೊಸತನ ಮೆರೆದಿದ್ದಾರೆ. 'ನುವ್ವೊಸ್ತಾನಂತೆ ನೆನೊದ್ದಂಟಾನಾ'ದ ಸಿರಿ ಆಗಲಿ, 'ವಿನೈತಾಂಡಿ ವರುವಾಯ'ದ ಜೆಸ್ಸಿ ಆಗಲಿ ಅಥವಾ ಇತ್ತೀಚಿನ 'ಪೊನ್ನಿಯಿನ್ ಸೆಲ್ವನ್'ನ ಕುಂದವೈ ಆಗಲಿ, ತ್ರಿಷಾ ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ.

ಬಿಸಿ ಬಿಸಿ ಚರ್ಚೆಯಲ್ಲಿ 'ದಳಪತಿ' ಜೊತೆಗಿನ ನಂಟು!

ಸಿನಿಮಾ ಹೊರತುಪಡಿಸಿ ತ್ರಿಷಾ ಈಗ ಸುದ್ದಿಯಲ್ಲಿರುವುದು ತಮ್ಮ ವೈಯಕ್ತಿಕ ವಿಚಾರಗಳಿಂದ. ತಮಿಳುನಾಡು ಮುಖ್ಯಮಂತ್ರಿ ಮತ್ತು ಟಿವಿಕೆ ನಾಯಕ ವಿಜಯ್ (ದಳಪತಿ ವಿಜಯ್) ಅವರ ಜೊತೆ ತ್ರಿಷಾ ಹೆಸರು ತಳುಕು ಹಾಕಿಕೊಂಡಿದೆ. ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನದ ಹೊಸ್ತಿಲಲ್ಲಿರುವ ಈ ಸಮಯದಲ್ಲಿ, ವಿಜಯ್ ಮತ್ತು ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಾಲಿವುಡ್ ಗಲ್ಲಿಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ಇಬ್ಬರೂ ಮೌನವಾಗಿದ್ದರೂ, ಅಭಿಮಾನಿಗಳಲ್ಲಿ ಮಾತ್ರ ಈ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಒಟ್ಟಿನಲ್ಲಿ, ಅಂದು ತಮಾಷೆಗಾಗಿ ಬಂದ ಹದಿಹರೆಯದ ಹುಡುಗಿ ತ್ರಿಷಾ, ಇಂದು ನೂರಾರು ಕೋಟಿ ಬಜೆಟ್ ಸಿನಿಮಾಗಳ ತೂಕ ಹೆಚ್ಚಿಸುವ 'ಪವರ್ ಹೌಸ್' ಆಗಿ ಬೆಳೆದಿರುವುದು ಒಂದು ಅದ್ಭುತ ಪಯಣವೇ ಸರಿ! ಅದಕ್ಕೇ ಹೇಳೋದು, 'ಯಾವ ಹೂವು ಯಾರ ಮುಡಿಗೋ'.. ಅಂತ!