ಜನಪ್ರಿಯ ಬ್ರ್ಯಾಂಡ್ ಬಿಸ್ಕಾಫ್ ಹಾಗೂ ಸ್ವಿಗ್ಗಿ ಡೈನ್‌ಔಟ್ 'ಡಿಎಂ ಎ ಲೋನ್ಲಿ ಕಪ್' ಎಂಬ ವಿನೂತನ ಅಭಿಯಾನವನ್ನು ಆರಂಭಿಸಿವೆ. ಈ ಅಭಿಯಾನದ ಅಡಿಯಲ್ಲಿ, ಗ್ರಾಹಕರು ಒಂಟಿ ಟೀ/ಕಾಫಿ ಕಪ್‌ಗಳ ಫೋಟೋ ಕಳುಹಿಸಿ ವಿಶೇಷ ಕಿಟ್ ಗೆಲ್ಲಬಹುದು ಹಾಗೂ ಭಾರತದ 8 ನಗರಗಳ 55ಕ್ಕೂ ಹೆಚ್ಚು ಕೆಫೆಗಳಲ್ಲಿ ಉಚಿತ ಬಿಸ್ಕಾಫ್ ಕುಕ್ಕೀಸ್ ಪಡೆಯಬಹುದು.

ಬೆಂಗಳೂರು: ಬಿಸಿ ಬಿಸಿ ಟೀ ಅಥವಾ ಕಾಫಿ ಕುಡಿಯುವುದು ನಮ್ಮೆಲ್ಲರ ನೆಚ್ಚಿನ ಅಭ್ಯಾಸ. ಆದರೆ, ಆ ಕಾಫಿ ಕಪ್‌ ಜೊತೆಗೆ ತಿನ್ನಲು ಏನಾದರೂ ಕುರುಕುಲು ತಿಂಡಿ ಅಥವಾ ಬಿಸ್ಕತ್ತು ಇಲ್ಲದಿದ್ದರೆ ಆ ಕಪ್ ಕೊಂಚ ಒಂಟಿಯಾಗಿ ಕಾಣುತ್ತದೆ. ಟೀ - ಕಾಫಿ ಪ್ರಿಯರ ಈ 'ಒಂಟಿ ಕಪ್‌'ಗಳಿಗೆ ಸಾಥ್ ನೀಡಲು ಜನಪ್ರಿಯ ಬ್ರ್ಯಾಂಡ್ ಬಿಸ್ಕಾಫ್ ಹಾಗೂ ಸ್ವಿಗ್ಗಿ ಡೈನ್‌ಔಟ್ ಹೊಸ ಹಾಗೂ ವಿನೂತನ ಅಭಿಯಾನವೊಂದನ್ನು ಆರಂಭಿಸಿವೆ.

ಏನಿದು ʼಡಿಎಂ ಎ ಲೋನ್ಲೀ ಕಪ್‌ʼ ಅಭಿಯಾನ?

ಬಿಸ್ಕಾಫ್ ಬಿಸ್ಕತ್ತು ಮತ್ತು ಬಿಸಿ ಬಿಸಿಯಾದ ಟೀ, ಕಾಫಿಗಳ ಕಾಂಬಿನೇಷನ್ ಅದ್ಭುತವಾಗಿರುತ್ತದೆ. ಬಿಸ್ಕಾಫ್ ಇಲ್ಲದೆ ಯಾವುದೇ ಕಾಫಿ ಕಪ್‌ ಪರಿಪೂರ್ಣವಾಗುವುದಿಲ್ಲ ಎಂಬ ಕಲ್ಪನೆಯೊಂದಿಗೆ ʼಡಿಎಂ ಎ ಲೋನ್ಲಿ ಕಪ್ʼ ಎಂಬ ಆಸಕ್ತಿದಾಯಕ ಕ್ಯಾಂಪೇನ್‌ಗೆ ಚಾಲನೆ ನೀಡಲಾಗಿದೆ.

ಇದರ ಅಡಿ, ಗ್ರಾಹಕರು ಎಲ್ಲೇ ಆಗಲಿ ಒಂಟಿಯಾಗಿರುವ (ಅಂದರೆ ಜೊತೆಗೆ ಯಾವುದೇ ಬಿಸ್ಕತ್ತು ಇಲ್ಲದ) ಟೀ ಅಥವಾ ಕಾಫಿ ಕಪ್‌ಗಳ ಫೋಟೋವನ್ನು ತೆಗೆದು ಆನ್‌ಲೈನ್‌ನಲ್ಲಿ ಬ್ರ್ಯಾಂಡ್‌ಗೆ ನೇರವಾಗಿ ಮೆಸೇಜ್ ಮಾಡುವ ಮೂಲಕ ಆ ಕಪ್‌ಗಳನ್ನು ರಕ್ಷಣೆ ಮಾಡಬಹುದು. ಹೀಗೆ ಫೋಟೋ ಕಳುಹಿಸುವ ಗ್ರಾಹಕರು, ಬಿಸ್ಕಾಫ್‌ನ ಕಸ್ಟಮೈಸ್ಡ್ ಕಪ್‌ ಸ್ಲೀವ್ಸ್ ಒಳಗೊಂಡಿರುವ ವಿಶೇಷವಾದ ಬಿಸ್ಕಾಫ್ ರೆಸ್ಕ್ಯೂ ಕಿಟ್ ಗೆಲ್ಲುವ ಅವಕಾಶವನ್ನು ಪಡೆಯಲಿದ್ದಾರೆ.

8 ನಗರಗಳ 55ಕ್ಕೂ ಹೆಚ್ಚು ಕೆಫೆಗಳಲ್ಲಿ ಲಭ್ಯ

ಈ ಅಭಿಯಾನವನ್ನು ಕೇವಲ ಆನ್‌ಲೈನ್‌ಗೆ ಮಾತ್ರ ಸೀಮಿತಗೊಳಿಸದೆ, ಸ್ವಿಗ್ಗಿ ಡೈನ್‌ಔಟ್ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದೆ. ಇದಕ್ಕಾಗಿ ಭಾರತದ 8 ಪ್ರಮುಖ ನಗರಗಳಲ್ಲಿರುವ 55ಕ್ಕೂ ಹೆಚ್ಚು ಕೆಫೆಗಳ ಜೊತೆ ಸ್ವಿಗ್ಗಿ ಡೈನ್‌ಔಟ್ ಒಪ್ಪಂದ ಮಾಡಿಕೊಂಡಿದೆ. ಈ ಕೆಫೆಗಳಿಗೆ ಹೋಗಿ ಟೀ ಅಥವಾ ಕಾಫಿ ಆರ್ಡರ್ ಮಾಡುವ ಗ್ರಾಹಕರಿಗೆ, ಅದರ ಜೊತೆಯಲ್ಲೇ ಬಿಸ್ಕಾಫ್ ಕುಕ್ಕೀಸ್ ಅನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತದೆ.

ಅಭಿಯಾನದ ಹಿಂದಿನ ಉದ್ದೇಶವೇನು?

ಸೋಶಿಯಲ್ ಮೀಡಿಯಾದಲ್ಲಿ ಕಾಫಿ ಕಪ್‌ಗಳ ಫೋಟೋ ಹಂಚಿಕೊಳ್ಳುವುದು ಇಂದಿನ ಯುವಜನತೆಯ ಟ್ರೆಂಡ್. ಈ ದೈನಂದಿನ ಅಭ್ಯಾಸವನ್ನು ಬಳಸಿಕೊಂಡು ಗ್ರಾಹಕರಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವೇದಿಕೆಗಳಲ್ಲಿ ಖುಷಿ ನೀಡುವುದು ಈ ಕ್ಯಾಂಪೇನ್‌ನ ಗುರಿಯಾಗಿದೆ. ಜನರು ಮನೆಯಿಂದ ಹೊರಬಂದು, ತಮ್ಮ ನೆಚ್ಚಿನ ಕೆಫೆಗಳಿಗೆ ಭೇಟಿ ನೀಡಿ ಟೀ-ಕಾಫಿಯ ಜೊತೆಗೆ ಬಿಸ್ಕಾಫ್ ರುಚಿಯನ್ನು ಸವಿಯಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ.