ಕಳೆದ ಎರಡು ದಶಕಗಳಿಂದ ನಮಗೆ ಅಪರಿಚಿತ ದಾರಿಗಳಲ್ಲಿ ದಾರಿದೀಪವಾಗಿದ್ದ ಗೂಗಲ್ ಮ್ಯಾಪ್ಸ್ (Google Maps) ಈಗ ಕೇವಲ ನಕ್ಷೆಯಾಗಿ ಉಳಿದಿಲ್ಲ. ಗೂಗಲ್ ಸಂಸ್ಥೆಯು ತನ್ನ ಮ್ಯಾಪ್ಸ್ ಅಪ್ಲಿಕೇಶನ್‌ಗೆ ಭರ್ಜರಿ ಅಪ್‌ಡೇಟ್ ನೀಡಿದ್ದು, ಇನ್ನು ಮುಂದೆ ಇದು ನಿಮ್ಮ ಪರ್ಸನಲ್ ಅಸಿಸ್ಟೆಂಟ್‌ನಂತೆ ಕೆಲಸ ಮಾಡಲಿದೆ. ಏನದು ? ತಿಳಿದುಕೊಳ್ಳಲು ಸ್ಟೋರಿ ಓದಿ..
ಕಳೆದ ಎರಡು ದಶಕಗಳಿಂದ ನಮಗೆ ಅಪರಿಚಿತ ದಾರಿಗಳಲ್ಲಿ ದಾರಿದೀಪವಾಗಿದ್ದ ಗೂಗಲ್ ಮ್ಯಾಪ್ಸ್ (Google Maps) ಈಗ ಕೇವಲ ನಕ್ಷೆಯಾಗಿ ಉಳಿದಿಲ್ಲ. ಗೂಗಲ್ ಸಂಸ್ಥೆಯು ತನ್ನ ಮ್ಯಾಪ್ಸ್ ಅಪ್ಲಿಕೇಶನ್‌ಗೆ ಭರ್ಜರಿ ಅಪ್‌ಡೇಟ್ ನೀಡಿದ್ದು, ಇನ್ನು ಮುಂದೆ ಇದು ನಿಮ್ಮ ಪರ್ಸನಲ್ ಅಸಿಸ್ಟೆಂಟ್‌ನಂತೆ ಕೆಲಸ ಮಾಡಲಿದೆ. ದಾರಿ ತೋರಿಸುವುದರ ಜೊತೆಗೆ ಹೋಟೆಲ್ ಬುಕ್ ಮಾಡುವುದು, ಫುಡ್ ಆರ್ಡರ್ ಮಾಡುವುದು ಸೇರಿದಂತೆ ನಿಮ್ಮ ಇಡೀ ದಿನದ ಪ್ಲಾನಿಂಗ್ ಅನ್ನು ಇದು ಮಾಡಿಕೊಡಲಿದೆ.
Ask Maps ವೈಶಿಷ್ಟ್ಯ
ಗೂಗಲ್ ಕೆಲವು ತಿಂಗಳ ಹಿಂದೆ ಪರಿಚಯಿಸಿದ್ದ 'ಆಸ್ಕ್ ಮ್ಯಾಪ್ಸ್' ಫೀಚರ್ ಅನ್ನು ಈಗ ಮತ್ತಷ್ಟು ವಿಸ್ತರಿಸುತ್ತಿದೆ. ಇದರಲ್ಲಿ ಹೊಸ 'ಎಜೆಂಟಿಕ್ ಟೂಲ್ಸ್' (Agentic Tools) ಸೇರಿಸಲಾಗಿದ್ದು, ಇದರ ಸಹಾಯದಿಂದ ನೀವು ಮ್ಯಾಪ್ ಮೂಲಕವೇ ನೇರವಾಗಿ ಆಹಾರ ಆರ್ಡರ್ ಮಾಡಬಹುದು ಮತ್ತು ತಂಗಲು ಹೋಟೆಲ್‌ಗಳನ್ನು ಹುಡುಕಬಹುದು. ನಿಮ್ಮ ಸುತ್ತಮುತ್ತ ನಡೆಯುವ ಸ್ಥಳೀಯ ಕಾರ್ಯಕ್ರಮಗಳು ಮತ್ತು ಇವೆಂಟ್ ಟಿಕೆಟ್‌ಗಳ ಮಾಹಿತಿಯನ್ನೂ ಇದು ನೀಡಲಿದೆ.
ಜಿಮೇಲ್ ಮತ್ತು ಕ್ಯಾಲೆಂಡರ್ ಜೊತೆ ಲಿಂಕ್
ಗೂಗಲ್ ಮ್ಯಾಪ್ಸ್ ಇನ್ನು ಮುಂದೆ ನಿಮ್ಮ ಇಷ್ಟ-ಕಷ್ಟಗಳನ್ನು ಅರ್ಥೈಸಿಕೊಳ್ಳಲಿದೆ. ನೀವು ನಿಮ್ಮ ಜಿಮೇಲ್ (Gmail) ಮತ್ತು ಗೂಗಲ್ ಕ್ಯಾಲೆಂಡರ್ ಅನ್ನು ಮ್ಯಾಪ್ಸ್‌ಗೆ ಲಿಂಕ್ ಮಾಡಿದರೆ, ಮ್ಯಾಪ್ ತನ್ನಷ್ಟಕ್ಕೆ ತಾನೇ ಕೆಲಸ ಮಾಡಲಿದೆ. ಉದಾಹರಣೆಗೆ: ನಿಮ್ಮ ಜಿಮೇಲ್ ಇನ್‌ಬಾಕ್ಸ್‌ನಲ್ಲಿ ಯಾವುದಾದರೂ ಕಾನ್ಫರೆನ್ಸ್ ಇನ್ವಿಟೇಶನ್ ಬಂದಿದ್ದರೆ, ಮ್ಯಾಪ್ ಆ ಸ್ಥಳದ ಹತ್ತಿರವಿರುವ ಹೋಟೆಲ್‌ಗಳನ್ನು ತಾನಾಗಿಯೇ ಸಜೆಸ್ಟ್ ಮಾಡುತ್ತದೆ.
ನೀವು ಯಾವುದಾದರೂ ಪ್ರವಾಸದ ದಿನಾಂಕವನ್ನು ಕ್ಯಾಲೆಂಡರ್‌ನಲ್ಲಿ ಮಾರ್ಕ್ ಮಾಡಿದ್ದರೆ, ಆ ಸಮಯದಲ್ಲಿ ನಿಮ್ಮ ಡೆಸ್ಟಿನೇಶನ್ ಹತ್ತಿರ ನಡೆಯುವ ಕಾರ್ಯಕ್ರಮಗಳ ಬಗ್ಗೆ ಇದು ಮಾಹಿತಿ ನೀಡುತ್ತದೆ.
ಚಾಲನೆ ಮಾಡುವಾಗಲೇ ಫುಡ್ ಆರ್ಡರ್!
ಗೂಗಲ್ ಮ್ಯಾಪ್ಸ್‌ನ ಎಐ (AI) ಏಜೆಂಟ್ ಎಷ್ಟು ಸ್ಮಾರ್ಟ್ ಆಗಿರಲಿದೆ ಎಂದರೆ ನಿಮಗೆ ಏನು ತಿನ್ನಬೇಕು ಅನಿಸುತ್ತಿದೆ ಎಂದು ಹೇಳಿದರೆ ಸಾಕು, ಅದು ಅತ್ಯುತ್ತಮ ರೆಸ್ಟೋರೆಂಟ್‌ಗಳನ್ನು ಹುಡುಕಿ ಆರ್ಡರ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ನೀವು ಡ್ರೈವ್ ಮಾಡುತ್ತಿರುವಾಗಲೂ ಇದು ನಿಮ್ಮ ಕಾರ್ಟ್‌ಗೆ ಬೇಕಾದ ಆಹಾರವನ್ನು ಸೇರಿಸಬಲ್ಲದು. ಅಂತಿಮವಾಗಿ ನೀವು ಕೇವಲ ಪೇಮೆಂಟ್ ಮಾಡಿದರೆ ಸಾಕು.
ಹೋಟೆಲ್ ಬುಕಿಂಗ್
ಹೋಟೆಲ್‌ಗಳನ್ನು ಹುಡುಕಲು ಇನ್ನು ಮುಂದೆ ಬೇರೆ ಬೇರೆ ವೆಬ್‌ಸೈಟ್‌ಗಳಿಗೆ ಅಲೆಯುವ ಅಗತ್ಯವಿಲ್ಲ. ನಿಮಗೆ ಯಾವ ರೀತಿಯ ಹೋಟೆಲ್ ಬೇಕು ಎಂದು ಗೂಗಲ್ ಮ್ಯಾಪ್‌ಗೆ ತಿಳಿಸಿದರೆ, ಅದು ಹೋಟೆಲ್‌ಗಳ ದರ ಮತ್ತು ಸೌಲಭ್ಯಗಳನ್ನು ಕಂಪೇರ್ ಮಾಡಿ ನಿಮಗೆ ಬೆಸ್ಟ್ ಆಪ್ಷನ್ ತೋರಿಸುತ್ತದೆ.
ಮನರಂಜನೆಗೂ ಅವಕಾಶ
ನೀವು ಎಲ್ಲೂ ಹೊರಗೆ ಹೋಗುತ್ತಿಲ್ಲ ಮನೆಯಲ್ಲೇ ಇದ್ದು ಬೋರ್ ಆಗುತ್ತಿದ್ದರೆ 'ಆಸ್ಕ್ ಮ್ಯಾಪ್ಸ್' ಸಹಾಯ ಪಡೆಯಬಹುದು. ನಿಮ್ಮ ಸಮೀಪದಲ್ಲಿ ನಡೆಯುತ್ತಿರುವ ಕಾಮಿಡಿ ಶೋಗಳು, ಸಂಗೀತ ಕಚೇರಿಗಳು ಮತ್ತು ಲೈವ್ ಇವೆಂಟ್‌ಗಳ ಮಾಹಿತಿ ನೀಡುವುದಲ್ಲದೆ, ಟಿಕೆಟ್ ಖರೀದಿಸಲು ಲಿಂಕ್ ಕೂಡ ಒದಗಿಸುತ್ತದೆ.
ಯಾವಾಗ ಸಿಗಲಿದೆ ಈ ಫೀಚರ್?
ಸದ್ಯಕ್ಕೆ ಈ ಹೊಸ ಎಐ ಅಪ್‌ಡೇಟ್‌ಗಳನ್ನು ಅಮೆರಿಕದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಭಾರತ ಸೇರಿದಂತೆ ಜಗತ್ತಿನ ಇತರೆ ದೇಶಗಳ ಮಾರುಕಟ್ಟೆಗೂ ಈ ವೈಶಿಷ್ಟ್ಯಗಳು ಲಭ್ಯವಾಗಲಿವೆ ಎಂದು ಗೂಗಲ್ ತಿಳಿಸಿದೆ.


