ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಓದೆಲಾ ಕಾಂಬಿನೇಷನ್‌ನ ಪ್ಯಾನ್-ಇಂಡಿಯಾ ಸಿನಿಮಾ 'ದಿ ಪ್ಯಾರಡೈಸ್'. 'ದಸರಾ' ಬ್ಲಾಕ್‌ಬಸ್ಟರ್ ಹಿಟ್ ನಂತರ ಈ ತಂಡ ಮತ್ತೆ ಒಂದಾಗಿದೆ.
'ದಸರಾ' ಬ್ಲಾಕ್‌ಬಸ್ಟರ್ ಹಿಟ್ ನಂತರ ನಟ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಓದೆಲಾ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಹೊಸ ಪ್ಯಾನ್-ಇಂಡಿಯಾ ಸಿನಿಮಾ 'ದಿ ಪ್ಯಾರಡೈಸ್'. ಈ ಚಿತ್ರದಲ್ಲಿ ನಾನಿ 'ಜದಾಲ್' ಎಂಬ ಮಾಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ. ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಓದೆಲಾ ಕಾಂಬಿನೇಷನ್‌ನ ಪ್ಯಾನ್-ಇಂಡಿಯಾ ಸಿನಿಮಾ 'ದಿ ಪ್ಯಾರಡೈಸ್'.
'ದಸರಾ' ಬ್ಲಾಕ್‌ಬಸ್ಟರ್ ಹಿಟ್ ನಂತರ ಈ ತಂಡ ಮತ್ತೆ ಒಂದಾಗಿದೆ. ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕುರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆಗಸ್ಟ್ 6 ರಂದು ಚಿತ್ರದ ಟೀಸರ್ ಅನ್ನು ನಿರ್ಮಾಪಕರು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಾನಿ 'ಜದಾಲ್' ಎಂಬ ಪವರ್‌ಫುಲ್ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ನಾನಿ ಲುಕ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಇನ್ನು, ಈ ಚಿತ್ರದಲ್ಲಿ ಬಾಲಿವುಡ್ ನಟ ರಾಘವ್ ಜುಯಲ್ 'ವಿಕ್ರಮ್ ಮಲಿಕ್' ಎಂಬ ನೆಗೆಟಿವ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾದ 'ಆಯಾ ಶೇರ್' ಎಂಬ ಮೊದಲ ಹಾಡು ಗ್ಲೋಬಲ್ ಆಗಿ ಟ್ರೆಂಡ್ ಆಗಿತ್ತು. ಈ ಹಾಡಿಗೆ ಅನಿರುಧ್ ರವಿಚಂದರ್ ಸಂಗೀತ ನೀಡಿದ್ದು, 'ಜೆರ್ಸಿ' ಮತ್ತು 'ಗ್ಯಾಂಗ್ ಲೀಡರ್' ನಂತರ ನಾನಿ-ಅನಿರುಧ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ನಾನಿ ವೃತ್ತಿಜೀವನದಲ್ಲಿ 'ದಿ ಪ್ಯಾರಡೈಸ್' ಅತಿದೊಡ್ಡ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
8 ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್..
'ಸ್ಪಾರ್ಕ್ ಆಫ್ ಪ್ಯಾರಡೈಸ್' ಹೆಸರಿನಲ್ಲಿ ಬಂದಿದ್ದ ಗ್ಲಿಂಪ್ಸ್ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಬಾಲಿವುಡ್ ನಟ ರಾಘವ್ ಜುಯಲ್ ಜೊತೆಗೆ ಸಂಪೂರ್ಣೇಶ್ ಬಾಬು, ಮೋಹನ್ ಬಾಬು, ಸೋನಾಲಿ ಕುಲಕರ್ಣಿ, ಈಶ್ವರಿ ರಾವ್, ರಾಜ ರವೀಂದ್ರ, ತನಿಕೆಳ್ಳ ಭರಣಿ, ಎಂ.ಎಸ್. ಚೌಧರಿ, ರಾಮ್ ಜಗನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತೆಲುಗು, ಮಲಯಾಳಂ, ಕನ್ನಡ, ಹಿಂದಿ, ಬೆಂಗಾಲಿ, ತಮಿಳು, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಸೇರಿ ಒಟ್ಟು 8 ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.


