ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ತಮ್ಮ ಸಬ್ಸಿಡಿ ಸೌಲಭ್ಯವನ್ನು ಮುಂದುವರಿಸಲು ಆಗಸ್ಟ್ 16ರ ಗಡುವಿನೊಳಗೆ ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕಿದೆ.

ಬೆಂಗಳೂರು: 2026ರ ಆಗಸ್ಟ್ ತಿಂಗಳಿನಲ್ಲಿ ಸರ್ಕಾರ ಭಾರತೀಯ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬಳಕೆಗೆ ಹಲವಾರು ಹೊಸ ನಿಯಮಗಳನ್ನು ಘೋಷಣೆ ಮಾಡಲಾಗಿದೆ. ವಿಶೇಷವಾಗಿ ಪಿಎಂಯುವೈ ಯೋಜನೆಯ ಅಡಿ ಸಿಲಿಂಡರ್ ಪಡೆದುಕೊಂಡಿರುವ ಎಲ್‌ಪಿಜಿ ಗ್ರಾಹಕರು ಆಗಸ್ಟ್ 16ರ ಒಳಗೆ ಕಡ್ಡಯವಾಗಿ ತಮ್ಮ ಇ-ಕೆವೈಸಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.

ಸಿಲಿಂಡ್ ಬೆಲೆಯಲ್ಲಿ ಇಳಿಕೆ!

ತಿಂಗಳ ಆರಂಭದಲ್ಲಿಯೇ 19ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ಸತತವಾಗಿ ಎರಡನೇ ತಿಂಗಳು ಕಡಿಮೆಯಾಗಿತ್ತು. 19ಕೆಜಿ ಸಿಲಿಂಡರ್ ಬೆಲೆಯಲ್ಲಿ 192 ರೂಪಾಯಿಯಿಂದ 209 ರೂಪಾಯಿಯಷ್ಟು ದರ ಕಡಿಮೆಯಾಗಿತ್ತು. ಇದರೊಂದಿಗೆ ದೆಹಲಿಯಲ್ಲಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 192 ರೂಪಾಯಿ ಇಳಿಕೆಯಾಗಿ 2,738 ರೂಪಾಯಿಗೆ ಇಳಿಕೆಯಾಗಿತ್ತು.

ಇನ್ನು, 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲೂ ಸತತರವಾಗಿ ಎರಡನೇ ತಿಂಗಳು ಕಡಿಮೆಯಾಗಿತ್ತು. ದೆಹಲಿಯಲ್ಲಿ ಈ ಸಿಲಿಡರ್ ಬೆಲೆ 942 ರೂಪಾಯಿ ಇದ್ದು, ಚೆನ್ನೈನಲ್ಲಿ 957.50 ರೂಪಾಯಿಗೆ ಸಿಗುತ್ತಿದೆ.

ಉಜ್ವಲ ಯೋಜನೆಯ ಎಲ್ಪಿಜಿ ಗ್ರಾಹಕರಿಗೆ ಬಿಗ್ ಅಪ್ ಡೇಟ್!

ಕೇಂದ್ರ ಸರ್ಕಾರ ಹಲವು ಬಡವರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿ ಹಲವರಿಗೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ನೀಡುತ್ತಿದ್ದು, ಆದರೆ ದೇಶದ ಸಾವಿರಾರು ಗ್ರಾಹಕರು ತಮ್ಮ ಆಧಾರ್ ಸಹಿತ ಇ-ಕೆವೈಸಿ ಪೂರ್ಣಗೊಳಿಸಿಲ್ಲ. ಇದರೊಂದಿಗೆ ಒಎಂಸಿಗಳು ಇ-ಕೆವೈಸಿ ಪೂರ್ಣಗೊಳಿಸಲು ಸಂದೇಶವನ್ನು ರವಾನೆ ಮಾಡುತ್ತಿದೆ.

ಸಂದೇಶದಲ್ಲಿ ಏನಿದೆ?

ಉಜ್ವಲ ಯೋಜನೆಯ ಅಡಿ ಗ್ರಾಹಕರಿಗೆ ವರ್ಷಕ್ಕೆ 09 ಸಿಲಿಂಡರ್ ಗಳಿಗೆ ಸಬ್ಸಿಡಿ ನೀಡುತ್ತಿತ್ತು, ಆದರೆ ಈ ವರ್ಷ ನಾಲ್ಕು ಸಿಲಿಂಡರ್ ಗಳಿಗೆ ಸಬ್ಸಿಡಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಇ-ಕೆವೈಸಿಯನ್ನು ಆಗಸ್ಟ್ 16ರ ಒಳಗೆ ಪೂರ್ಣಗೊಳಿಸಲು ಇಂಡಿಯನ್ ಆಯಿಲ್ ಸೇರಿದಂತೆ ತೈಲ ಪೂರೈಕೆ ಕಂಪನಿಗಳು ಮನವಿ ಮಾಡಿದೆ ಎಂದು ಗುಡ್ ರಿಟರ್ಸ್ಸ್ ವರದಿ ಮಾಡಿದೆ. ದೇಶೀಯ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಪಡೆಯಲು ನೀವು ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಂಡಿಯನ್ ಆಯಿಲ್ ಒನ್ ಅಪ್ಲಿಕೇಶನ್ ಮೂಲಕ ಅಥವಾ ನಿಮ್ಮ ವಿತಕರು ಅಥವಾ ವಿತರಣಾ ಸಿಬ್ಬಂದಿ ಮೂಲಕ ನಿಮ್ಮ ಮನೆಯಲ್ಲಿಯೇ ಇ-ಕೆವೈಸಿ ಪೂರ್ಣಗೊಳಿಸಿ, ಇದರೊಂದಿಗೆ ನೀವು ದೇಶೀಯ ದರದಲ್ಲಿ ಸಿಲಿಂಡರ್ ಪಡೆದುಕೊಳ್ಳಲು ಅರ್ಹರಾಗುತ್ತೀರಿ. ದಯವಿಟ್ಟು ನಿಗದಿತ ಅವಧಿಯೊಳಗೆ ಇ-ಕೆವೈಸಿ ಪೂರ್ಣಗೊಳಿಸಿ ಎಂದು ಸಂದೇಶದಲ್ಲಿ ವಿವರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತ್ ಲೈಟ್ ಜಿಫ್, ಎಚ್‌ಪಿ ನವ್ಯ, ಇಂಡಿಯನ್ ಎಕ್ಸ್ಟ್ರಾಲೈಟ್

ದೇಶದಲ್ಲಿ ಕೆಲವೇ ನಿಮಿಷಗಳಲ್ಲಿ ಎಕ್ಸ್ ಪ್ರೆಸ್ ಡೆಲಿವರಿ ಮೂಲಕ 10ಕೆಜಿ ಕಾಂಪೋಸಿಟ್ ಎಲ್‌ಪಿಜಿ ಸಿಲಿಂಡರ್ ಅನ್ನು ನೀಡುವ ಬ್ಯಾಂಡ್ ವ್ಯಾಗನ್ಗೆ ಇಂಡೇನ್ ಇತ್ತೀಚೆಗೆ ಸೇರ್ಪಡೆಯಾಗಿದೆ. ಇಂಡಿಯನ್ ಎಕ್ಸ್ಟ್ರಾಲೈಟ್ ಯೋಜನೆಯೂ ಪುಣೆ, ಗುರುಗ್ರಾಮ, ಇಂದೋರ್ ಮತ್ತು ಕೊಯಮತ್ತೂರಿನಲ್ಲಿ ಆರಂಭಿಸಿದೆ. ಆಗಸ್ಟ್ ಅಂತ್ಯದ ವೇಳೆಗೆ ಈ ಯೋಜನೆ ಭಾರತದ 25 ನಗರಗಳಿಗೆ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಇದೇ ಹಾದಿಯಲ್ಲಿ ಭಾರತ್ ಲೈಟ್ ಜಿಪ್ ಕೂಡ ಆಗಸ್ಟ್ 15ರ ವೇಳೆಗೆ 100 ನಗರಗಳಿಗೆ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಸ್ವಿಗ್ಗಿಯ ಇನ್ ಸ್ಟಾ ಮಾರ್ಟ್ ಮೂಲಕ ಎಚ್‌ಪಿ ನವ್ಯ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗುತ್ತಿದೆ.