ಯಶ್ ನಟನೆ, ಗೀತೂ ಮೋಹನದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಚಿತ್ರೀಕರಣಗೊಂಡಿರುವ ಟಾಕ್ಸಿಕ್ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಾಳೆ ಟ್ರೇಲರ್ ಬಿಡುಗಡೆ..

Rocking Star Yash Toxic Trailer Release & His Super Hit Movie Memory Connection in this Event Place: ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ನಟನೆಯ ಟಾಕ್ಸಿಕ್ ಟ್ರೇಲರ್ ಬಿಡುಗಡೆ!

ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ (Yash) ನಟನೆಯ ಸಿನಿಮಾ 'ಟಾಕ್ಸಿಕ್' ಟ್ರೇಲರ್ ನಾಳೆ (8-8-2026) ಅಧಿಕೃತವಾಗಿ ಬಿಡುಗಡೆ ಆಗಲಿದೆ. ಯಶ್ ಹಾಗೂ ಚಿತ್ರತಂಡ 'ಟಾಕ್ಸಿಕ್' ಚಿತ್ರದ ಟ್ರೇಲರ್ ಬಿಡುಗಡೆಯನ್ನು ಕನ್ಫರ್ಮ್ ಮಾಡಿದೆ. ಇಡೀ ಜಗತ್ತು ಖುಷಿಯಲ್ಲಿ ತೇಲಾಡುತ್ತಿದೆ. ಸಿಕ್ಕ ಮಾಹಿತಿ ಪ್ರಕಾರ, ಸಾಯಂಕಾಲ 6 ಗಂಟೆ 2 ನಿಮಿಷಕ್ಕೆ ಟ್ರೇಲರ್ ಬಿಡುಗಡೆ ಆಗಲಿದೆ. ವಿಷಯ ಇಷ್ಟೇ ಅಲ್ಲ, ಮುಖ್ಯ ಸಂಗತಿ ಮುಂದಿದೆ ನೋಡಿ..

ಎಲ್ಲಕ್ಕಿಂತ ಅಚ್ಚರಿ ಸಂಗತಿ ಎಂದರೆ, ಕನ್ನಡದ ನಟ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಯಶ್ ತಾಯ್ನೆಲದಲ್ಲೇ ಅಂದರೆ ಕನ್ನಡನಾಡಿನ ಬೆಂಗಳೂರಿನಲ್ಲೇ ಬಿಡುಗಡೆ ಆಗಲಿದೆ. ನಾಳೆ ಸಾಯಂಕಾಲ ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ ಸಮೀಪದ ಎಎಂಬಿ ಮಾಲ್‌ನಲ್ಲಿ (AMB) ಟಾಕ್ಸಿಕ್‌ನ ಈ ಈವೆಂಟ್ ನಡೆಯಲಿದೆ. ಅಲ್ಲಿ ಮೊದಲು ಅಲ್ಲಿ 'ಕಪಾಲಿ' ಎಂಬ ಬೃಹತ್ ಸಿಂಗಲ್ ಸ್ಕ್ರೀನ್ ಥಿಯೇಟರ್ ಇತ್ತು. ಈಗ ಅಲ್ಲಿ ಬಿಗ್ ಮಾಲ್ ತಲೆ ಎತ್ತಿದೆ. ಇಲ್ಲೇ ಇರೋದು ಈ ಸ್ಟೋರಿಗೆ ಸಂಬಂಧಪಟ್ಟ ಮ್ಯಾಟರ್..

ಹೌದು, ಯಶ್ ನಟನೆಯ 'ರಾಜಾಹುಲಿ' ಸಿನಿಮಾ ಇದೇ ಜಾಗದಲ್ಲಿ ಬಿಡುಗಡೆ ಆಗಿತ್ತು. ಬರೋಬ್ಬರಿ 100 ದಿನ ಓಡಿ ಅಂದರೆ, ಆಗ ಈಗಿರುವಂತೆ ಅಲ್ಲಿ ಮಾಲ್ ಇರಲಿಲ್ಲ. ಆದರೆ ಅಲ್ಲಿ ತುಂಬಾ ದೊಡ್ಡದಾದ ಸಿಂಗಲ್ ಸ್ಕ್ರೀನ್ ಥಿಯೇಟರ್ ಇತ್ತು. ಅದು ತುಂಬಾ ಫೇಮಸ್ ಚಿತ್ರಮಂದಿರ ಆಗಿತ್ತು. ಬೆಂಗಳೂರಿನ ಐತಿಹಾಸಿಕ ಕಪಾಲಿ ಥಿಯೇಟರ್ ಆರಂಭದಲ್ಲಿ ಒಟ್ಟು 1,464 ಆಸನಗಳನ್ನು ಹೊಂದಿತ್ತು. ನಂತರದ ದಿನಗಳಲ್ಲಿ ನವೀಕರಣದ ಬಳಿಕ ಆಸನಗಳ ಸಂಖ್ಯೆಯನ್ನು 1,112 ಕ್ಕೆ ಇಳಿಸಲಾಯಿತು.

ಬೆಂಗಳೂರಿನ ಗಾಂಧಿನಗರದಲ್ಲಿದ್ದ ಐತಿಹಾಸಿಕ ಕಪಾಲಿ ಥಿಯೇಟರ್‌ ಅನ್ನು ಅಕ್ಟೋಬರ್ 12, 2017 ರಂದು ಅಧಿಕೃತವಾಗಿ ಮುಚ್ಚಲಾಯಿತು. ಆರ್ಥಿಕ ಕಾರಣಗಳಿಂದ ಹಾಗೂ ಹೊಸ ವಾಣಿಜ್ಯ ಸಂಕೀರ್ಣದ ನಿರ್ಮಾಣಕ್ಕಾಗಿ ನಂತರದ ದಿನಗಳಲ್ಲಿ ಕೆಡವಿ ಹಾಕಲಾಯ್ತು. ಈ ಚಿತ್ರಮಂದಿರವನ್ನು 16 ಫೆಬ್ರವರಿ 1968ರಂದು ದಿವಂಗತ ಮೊರಾರ್ಜಿ ದೇಸಾಯಿ ಅವರು ಉದ್ಘಾಟನೆ ಮಾಡಿದ್ದರು. 12 ಅಕ್ಟೋಬರ್ 12, 2017 ರಂದು ಈ ಕಪಾಲಿ ಥಿಯೇಟರ್ ಮುಚ್ಚಲಾಗಿದ್ದು, ಈಗ ಅದೇ ಜಾಗದಲ್ಲಿ ನವೀಕೃತಗೊಂಡು 'AMB Cinemas Kapali' ಮಲ್ಟಿಪ್ಲೆಕ್ಸ್ ಆರಂಭವಾಗಿದೆ.

ಇಲ್ಲೇ ಇರೋದು ಟ್ವಿಸ್ಟ್!!!

ಅಂದು ಯಶ್ 'ರಾಜಾಹುಲಿ' ಸಿನಿಮಾ ಬಿಡುಗಡೆ ಅಗಿದ್ದ ಜಾಗದಲ್ಲಿ ಇಂದು ಕಪಾಲಿ ಥಿಯೇಟರ್‌ ತಲೆ ಎತ್ತಿರಬಹುದು. ಆದರೆ, ಅದೇ ಜಾಗದ ಸುತ್ತಮುತ್ತ ಹಾಗೂ ನೆಲದ ನೆನಪು ಹೇಗೆ ಮರೆಯಾಗಲು ಸಾಧ್ಯ? ಅಂದು ಹೊಸ ಹೀರೋ ಆಗಿ ರಾಜಾಹುಲಿ ಚಿತ್ರದಲ್ಲಿ ಅಬ್ಬರಿಸಿದ್ದ ನಟ ಯಶ್ ಇಂದು ಅದೇ ಜಾಗಕ್ಕೆ 'ಪ್ಯಾನ್‌ ವರ್ಲ್ಡ್' ಸ್ಟಾರ್ ನಟರಾಗಿ ಕಾಲಿಡುತ್ತಿದ್ದಾರೆ. ಇದು ಹಲವರಿಗೆ ಅಚ್ಚರಿ ಎನ್ನಿಸಿದರೆ ಯಶ್ ಅವರಿಗೆ ಖುಷಿ ಎನ್ನಿಸಬಹುದು. ಜೊತೆಗೆ, ಯಶ್ ಅವರಿಗೆ ಬಹುಶಃ ಹಳೆಯ ನೆನಪು ಮರುಕಳಿಸಬಹುದು.

2026ರ ಮತ್ತೊಂದು ಬಿಗ್ ಸಿನಿಮಾ 'ಟಾಕ್ಸಿಕ್‌'ಗಾಗಿ ಜಗತ್ತಿನಾದ್ಯಂತ ಸಿನಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೆಜಿಎಫ್ (KGF) ಬಳಿಕ ರಾಕಿಂಗ್ ಸ್ಟಾರ್ ಯಶ್ ತೆರೆ ಮೇಲೆ ನೋಡಲು ಕನ್ನಡಿಗರು ಮಾತ್ರವಲ್ಲ ದೇಶ, ಜಗತ್ತಿನ ಸಿನಿಮಾ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಟಾಕ್ಸಿಕ್ ಸಿನಿಮಾ ನಿರ್ಮಾಣ ನಿರಂತರವಾಗಿ ನಡೆಯುತ್ತಿದೆ. ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ.

ಯಶ್ ನಟನೆ, ಗೀತೂ ಮೋಹನದಾಸ್ ನಿರ್ದೇಶನಕ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಚಿತ್ರೀಕರಣಗೊಂಡಿರುವ ಟಾಕ್ಸಿಕ್ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಾಳೆ ಟ್ರೇಲರ್ ಬಿಡುಗಡೆ ಬಳಿಕ ಮತ್ತೊಂದು ಹಾಡು ಬಿಡುಗಡೆ ಆದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ನಟ ಯಶ್ ತಮ್ಮ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಟ್ರೇಲರ್ ಕುರಿತು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದರು. ಯಶ್ ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದರುರೆ. ಭಾರತ ಮಾತ್ರವಲ್ಲ, ವಿಶ್ವ ಸಿನಿಮಾಪ್ರೇಮಿಗಳಲ್ಲಿ ಮಿಂಚಿನ ಸಂಚಾರ ಶುರುವಾಗಿತ್ತು. ಎಲ್ಲಕ್ಕೂ ಉತ್ತರ ನಾಳೆ ಸಿಗಲಿದೆ.

ಹೊಸ ಅಧ್ಯಾಯ ಬರೆಯಲಿರುವ ಯಶ್

ಹೌದು, ರಾಮಾಯಣ ಹಾಗೂ ಟಾಕ್ಸಿಕ್ ಮೂಲಕ ಕನ್ನಡದ ನಟ ಜಾಗತಿಕವಾಗಿ ಹೊಸ ಅಧ್ಯಾಯ ಬರೆಯಲಿದ್ದಾರೆ ಎಂಬ ಮಾತು ಎಲ್ಲಾ ಕಡೆ ಕೇಳಿಬರುತ್ತಿದೆ. ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆಜೆ ಪೆರಿ ಹಾಗೂ ತಮಿಳಿನ ಅನ್ಬರಿವ್ ಟಾಕ್ಸಿಕ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಜೀವ್ ರವಿ ಸಿನಿಮಾಟೋಗ್ರಫಿ ಮಾಡಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರ್ ಟಾಕ್ಸಿಕ್ ಸಿನಿಮಾಗೆ ಮಾಸ್ಟರ್ ಪೀಸ್ ಮ್ಯೂಸಿಕ್ ನೀಡಿದ್ದಾರೆ. ಜೊತೆಗೆ ವಿಶಾಲ್ ಮಿಶ್ರಾ, ತನ್ಶಿಕ್ ಬಗ್ಚಿ ಹಾಡುಗಳಿಗೆ ಕೆಲಸ ಮಾಡಿದ್ದಾರೆ.