ಭಾರತದ ಇನ್ಸಾಟ್-3ಡಿಎಸ್ ಉಪಗ್ರಹವು ಚೀನಾದಿಂದ ಭಾರತದವರೆಗೆ ಹರಡಿರುವ ಬೃಹತ್ ಮಾನ್ಸೂನ್ ಮೋಡದ ಚಿತ್ರವನ್ನು ಸೆರೆಹಿಡಿದಿದೆ. ಇದು ಚಂಡಮಾರುತವಲ್ಲದಿದ್ದರೂ, ಗುಡುಗು ಸಹಿತ ಭಾರಿ ಮಳೆಯನ್ನು ತರುವ ಸಕ್ರಿಯ ಮಾನ್ಸೂನ್ ಮಾರುತಗಳ ಸರಣಿಯಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ದೆಹಲಿ: ಭಾರತದ ಹವಾಮಾನ ಉಪಗ್ರಹ INSAT-3DS, ಸುಮಾರು 3,500 ಕಿಮೀ ದೂರ ಇರುವ ದೈತ್ಯ ಮಾನ್ಸೂನ್ ಮಾರುತದ ಫೋಟೋವನ್ನು ಸೆರೆಹಿಡಿದೆ. ಈ ಫೋಟೋದಲ್ಲಿ ಭಾರತದ ಮಳೆಯ ಹವಾಮಾನ ಸ್ಥಿತಿಯ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡುತ್ತಿದೆ. ಸಾಮಾನ್ಯವಾಗಿ ಮಾನ್ಸೂನ್ ಮಳೆಯ ಸಂದರ್ಭದಲ್ಲಿ ಸಾವಿರಾರು ಮೋಡಗಳು ಮಂಜುಗಡೆಯಾಗಿ ಭರ್ಜರಿ ಮಳೆಯನ್ನು ಸುರಿಸುತ್ತದೆ. ಆದರೆ ಸದ್ಯ ಸ್ಥಿತಿಯಲ್ಲಿ ಕಂಡು ಬಂದ ಮೋಡವೂ ಪಶ್ಚಿಮ ಚೀನಾದಿಂದ ಪ್ರಾರಂಭವಾಗಿ, ಟಿಬೆಟ್ ಹಾಗೂ ಹಿಮಾಲಯದ ಮೇಲೆ ವ್ಯಾಪಿಸಿ, ಉತ್ತರ ಮತ್ತು ಮಧ್ಯ ಭಾರತದಾದ್ಯಂತ ಹರಡಿಕೊಂಡಿದೆ.

INSAT-3DS ಉಪಗ್ರಹ ತೆಗೆದಿರುವ ಈ ಚಿತ್ರವನ್ನು ನೋಡಿದರೆ, ಸ್ವಾಭಾವಿಕವಾಗಿಯೇ ಚೀನಾದಿಂದ ಭಾರತಕ್ಕೆ ಸುರುಳಿ ಸುರುಳಿಯಾಗಿ ಬೀಳುವಂತೆ ಕಾಣುತ್ತಿದೆ. ಇಲ್ಲಿ ಗಮನಿಬೇಕಾದ ಅಂಶ ಎಂದರೆ, ಇದು ಚಂಡಮಾರುತ ಅಲ್ಲ. ಭಾರತದಲ್ಲಿ ಸಕ್ರೀಯವಾಗಿರುವ ಮಾನ್ಸೂನ್ ಮಾರುತಗಳ ಸರಪಳಿಯಂತೆ ಕಾಣುತ್ತಿದೆ. ಉಪಗ್ರಹ ಮೇಲ್ಭಾಗದಲ್ಲಿ ಮಾತ್ರ ಕಾಣುವುದರಿಂದ ಇದು ಬೃಹತ್ ಮೋಡದ ಸರಣಿಯಾಗಿ ಕಾಣುತ್ತದೆ.

ಉಪಗ್ರಹ ಚಿತ್ರದ ಸೆರೆ ಹಿಂದಿನ ರೋಚಕ ತಂತ್ರಜ್ಞಾನ

ಉಪಗ್ರಹದ ಕ್ಯಾಮೆರಾ ನಮ್ಮ ಮೊಬೈಲ್ ಕ್ಯಾಮೆರಾದಂತೆ ಕೆಲಸ ಮಾಡೋದಿಲ್ಲ. ಉಪಗ್ರಹ ಫೋಟೋವನ್ನು ಸೆರೆಹಿಡಿಯುವ ಸಂದರ್ಭದಲ್ಲಿ ತಾಪಮಾನವನ್ನು ಅಳೆಯುತ್ತದೆ. ಮೋಡದ ಮೇಲ್ಭಾಗ ತಂಪಾಗಿದಷ್ಟು, ಅದು ಫೋಟೋದಲ್ಲಿ ಹೆಚ್ಚು ಬಿಳಿಯಾಗಿ ಕಾಣುತ್ತದೆ. ಉತ್ತರ ಮತ್ತು ಮಧ್ಯ ಭಾರತದ ಮೇಲೆ ಕಂಡು ಬರುವ ಪ್ರತಿಯೊಂದು ಮಾನ್ಸೂನ್ ಮೋಡವೂ ಗುಡುಗು ಸಹಿತ ಮಳೆಯನ್ನು ಸುರಿಸುತ್ತವೆ. ಬೆಚ್ಚಗಿನ ಗಾಳಿಯೂ ಬೀಸುವುದರಿಂದ ಮೋಡಗಳು ಮೇಲಕ್ಕೆ ಹೋಗದೆ ಕೆಳಮಟ್ಟದಲ್ಲೇ ಚಲಿಸುತ್ತದೆ. ಇದರಿಂದ ಮಳೆಯ ಪ್ರಮಾಣ ಹೆಚ್ಚಾಗುತ್ತದೆ.

ಭರ್ಜರಿ ಮಳೆಯಾಗುವ ಮುನ್ಸೂಚನೆ

ನೈಋತ್ಯ ಮಾನ್ಸೂನ್ ಮಾರುತಗಳು ಸಕ್ರಿಯವಾಗಿರುವವರೆಗೂ, ಉಪಗ್ರಹವೂ ತನ್ನ ಫೀಡ್‌ನಿಂದ ದಕ್ಷಿಣ ಏಷ್ಯಾದಾದ್ಯಂತ ಈ ಮೋಡಗಳು ಕಾಣಸಿಗುತ್ತವೆ. ಈ ಮೋಡವೂ ಭೂಮಿಯ ಮೇಲ್ಮೈಯಿಂದ ಸುಮಾರು 10 ರಿಂದ 16 ಕಿಲೋಮೀಟರ್ ಎತ್ತರದಲ್ಲಿದ್ದು, ಮಾನ್ಸೂನ್ ಮೋಡಗಳು ಗುಂಪು ಗುಂಪಾಗಿ ಬರುತ್ತಿದ್ದಂತೆ ಮೋಡದ ಗಾತ್ರವೂ ಹೆಚ್ಚಾಗುತ್ತಾ ಸಾಗುತ್ತದೆ. ದಟ್ಟವಾಗಿ ಮೋಡಗಳು ಕಂಡು ಬಂದರೂ, ಇದು ಸೈಕ್ಲೋನ್ ಅಲ್ಲ. ಆದರೆ ಗುಡುಗು ಸಹಿತ ಭಾರೀ ಮಳೆಯನ್ನು ಸುರಿಸುತ್ತದೆ. ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭರ್ಜರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ.

ದಿನವಿಡೀ ಮೋಡ ಕವಿದ ವಾತಾವರಣ

ಇನ್ನು, ವಾತಾವರಣದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿ ಬದಲಾವಣೆ ಕಾಣುತ್ತಿದ್ದು, ಕಳೆದ ತಿಂಗಳು ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣ ಈಗ ಆಗುತ್ತಿರುವ ಮಳೆಯ ಮೇಲೆಯೇ ರೈತರು ಆಸೆಯಿಂದ ಕಾದು ನೋಡುತ್ತಿದ್ದಾರೆ. ಇನ್ನು, ಜೂಮ್ ಅರ್ಥ್ ಐಕಾನ್ ಉಪಗ್ರಹ ದತ್ತಾಂಶದ ಪ್ರಕಾರ, ಬಂಗಾಲಕೊಲ್ಲಿಯಲ್ಲಿ ಚಂಡಮಾರುತದ ವಾತಾವರಣ ಇದ್ದು, ಇದು ದಕ್ಷಿಣ ಭಾರತದಲ್ಲಿ ಹರಡಿಕೊಂಡಿದೆ. ನೈಋತ್ಯ ಮಾನ್ಸೂನ್ ಮಾರುತಗಳಲ್ಲಿಯೂ ಉತ್ತಮ ತೇವಾಂಶವಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಧ್ಯಮ ಪ್ರಮಾಣ ಮಳೆಯಾಗುವ ಸಾಧ್ಯತೆ ಇದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ಹಲವು ಪ್ರದೇಶಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು, ಇದರ ನಡುವೆಯೇ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ, ಗಾಳಿಯೂ ಬಲವಾಗಿ ಬೀಸುತ್ತಿರುವ ಕಾರಣ ಮಳೆಯ ಸಂದರ್ಭದಲ್ಲಿ ಜನರು ಮರಗಳ ಕಳಗೆ ನಿಲ್ಲದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿ ಗಾಳಿಯೂ ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದ್ದು, ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್ನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ.

Scroll to load tweet…