ಕನ್ನಡಪ್ರಭ, ಸುವರ್ಣ ನ್ಯೂಸ್ ದನಿ, ನೊಂದ ರೈತರಿಗೆ ಸಾಂತ್ವನದ ಹನಿ

ಯಾದಗಿರಿ[ನ.6] ಸಾಲದ ಶೂಲಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.  ಆತ್ಮಹತ್ಯೆ ಮಾಡಿಕೊಂಡ ರೈತರನ್ನ ಗುರುತಿಸುವಲ್ಲಿ ಸರ್ಕಾರದ ಕೆಲ ನಿಯಮಗಳೇ ಅಡ್ಡಿಯಾಗಿವೆ ಎಂಬುದನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸರಣಿ ವರದಿಗಳು ಸರ್ಕಾರದ ಮುಂದೆ ಇಟ್ಟಿದ್ದವು.

ಕಳೆದೈದು ವರ್ಷಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಬರೋಬ್ಬರಿ 240 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರದಿಗಳು ಪ್ರಕಟವಾಗುತ್ತಿದ್ದಂತೆ ಪರಿಷತ್ ಸದಸ್ಯ ಅರವಿಂದ್ ಅರಳಿ ಕನ್ನಡ ಪ್ರಭ ಲೇಖನವನ್ನ ಪ್ರಸ್ತಾಪಿಸಿ ಪರಿಷತ್ ನಲ್ಲಿ ಮಾತನಾಡಿದ್ದರು. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಪ್ರಭು ಚೌವ್ಹಾಣ್ ಅವರೂ ಸಹ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡಲಾದ ಪರಿಹಾರದ ಸಮಗ್ರ ವರದಿ ನೀಡಲು ಡಿಸಿ. ಕೂರ್ಮಾರಾವ್ ಹಾಗೂ ಕೃಷಿ ಜಂಟಿ ನಿರ್ದೇಶಕಿ ಆರ್. ದೇವಿಕಾಗೆ ಸೂಚಿಸಿದ್ದರು. ಹಾಗಾದರೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ವರದಿಗಳ ಪ್ರಸಾರ ಯಾವೆಲ್ಲ ಪರಿಣಾಮ ಉಂಟುಮಾಡಿತು?

First Published Nov 6, 2019, 7:58 PM IST | Last Updated Nov 6, 2019, 8:14 PM IST