ಸೌದಿ ಅರೇಬಿಯಾದ ತೈಲ ಗೋದಾಮಿನ ಮೇಲೆ ಹೋತಿ ದಾಳಿ, ಇನ್ನೊಂದು ಯುದ್ಧದ ಮುನ್ಸೂಚನೆ?

ಸೌದಿ ಅರೇಬಿಯಾದ ತೈಲ ಗೋದಾಮಿನ ಮೇಲೆ ಯುಮೆನ್ ನ ಹೋತಿ ಬಂಡುಕೋರರ ದಾಳಿಯೆಮೆನ್ ನಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾದ ಸೌದಿ ಅರೇಬಿಯಾರಷ್ಯಾ-ಉಕ್ರೇನ್ ಬಳಿಕ ಮತ್ತೊಂದು ಯುದ್ಧ ನಡೆಯುವ ಮುನ್ಸೂಚನೆ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 27): ಯೆಮೆನ್‌ನ ಹೋತಿ (Yemens Houthi) ಬಂಡುಕೋರರು ಸೌದಿ ಅರೇಬಿಯಾದ (Saudi Arabia) ಮೇಲೆ ಸರಣಿ ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿದೆ. ಸೌದಿ ಅರೇಬಿಯಾದ ಪ್ರಮುಖ ಮಾಧ್ಯಮ ಸಂಸ್ಥೆಯ ವರದಿ ಪ್ರಕಾರ, ಜೆಡ್ಡಾದಲ್ಲಿನ (Jeddah) ತೈಲ ಡಿಪೋ ಮತ್ತು ರಿಯಾದ್‌ನಲ್ಲಿರುವ ಇತರ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ಮಾಡಲಾಗಿದೆ. ಭಾನುವಾರ ಫಾರ್ಮುಲಾ ಒನ್ ರೇಸ್‌ಗೆ ಆತಿಥ್ಯ ವಹಿಸಲು ನಗರವು ಸಿದ್ಧತೆ ನಡೆಸುತ್ತಿರುವಾಗ ಜೆಡ್ಡಾದಲ್ಲಿನ ಸ್ಥಾವರದಿಂದ ಬೃಹತ್ ಕಪ್ಪು ಹೊಗೆಯೊಂದು ಏರುತ್ತಿರುವುದು ಕಂಡುಬಂದಿದೆ.

ಭಾರತವು ತನ್ನ ಹೆಚ್ಚಿನ ತೈಲವನ್ನು ಸೌದಿ ಅರೇಬಿಯಾದಿಂದ ಖರೀದಿ ಮಾಡುತ್ತದೆ. ಆದರೆ, ಹೋತಿ ಬಂಡುಕೋರರು ವಿಶ್ವದ ಅತೀದೊಡ್ಡ ತೈಲ ಸಂಸ್ಕರಣಾ ಕಂಪನಿ, ಸೌದಿ ಅರೇಬಿಯಾ ಸರ್ಕಾರದ ಒಡೆತನದಲ್ಲಿರುವ ಅರಾಮ್ಕೋ (Aramco) ಮೇಲೆ ಡ್ರೋನ್ ಹಾಗೂ ರಾಕೆಟ್ ದಾಳಿ ನಡೆಸಿದೆ. ಇದರಿಂದಾಗಿ ಭಾರತದಲ್ಲಿ ಮತ್ತೊಮ್ಮೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಏರಿಕೆ ಸಂಭವ ಕಂಡುಬಂದಿದೆ.

No Confidence Motion ಪಾಕ್ ಪ್ರಧಾನಿಗೆ ಕೈಕೊಟ್ಟ ಬಲೂಚ್ ಪಾರ್ಟಿ, ಮೈತ್ರಿ ಮುರಿದು ಇಮ್ರಾನ್ ವಿರುದ್ಧ ಹೋರಾಟ!

ಶುಕ್ರವಾರ ಸಂಜೆಯ ವೇಳೆಗೆ ಹೋತಿ ಮಿಲಿಟರಿ ವಕ್ತಾರ ಯಾಹ್ಯಾ ಸರಿಯಾ ಅವರು ಕ್ಷಿಪಣಿಗಳ ಮೂಲಕ ಅರಾಮ್ಕೊದ ಸೌಲಭ್ಯಗಳ ಮೇಲೆ ಮತ್ತು ರಾಸ್ ತನುರಾ ಮತ್ತು ರಾಬಿಗ್ ಸಂಸ್ಕರಣಾಗಾರಗಳ ಮೇಲೆ ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಯೆಮೆನ್‌ನ ಹೋತಿ -ನಿಯಂತ್ರಿತ ರಾಜಧಾನಿ ಸನಾ ಮತ್ತು ಕೆಂಪು ಸಮುದ್ರದ ಬಂದರು ನಗರ ಹೊಡೆಡಾದ ಮೇಲೆ ವಾಯು ದಾಳಿ ಸೇರಿದಂತೆ - ತನ್ನ ತೈಲ ಸೌಲಭ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಮತ್ತು "ಜಾಗತಿಕ ಶಕ್ತಿಯನ್ನು ರಕ್ಷಿಸಲು" ಯೆಮೆನ್‌ನಲ್ಲಿನ ಒಕ್ಕೂಟದ ಹೋರಾಟವು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಶನಿವಾರ ಸೌದಿ ರಾಜ್ಯ ಮಾಧ್ಯಮ ಹೇಳಿದೆ.

Related Video