ಪತನದ ಹಾದಿಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಇಮ್ರಾನ್ ಹಾಗೂ ಪಕ್ಷದ ಜೊತೆಗಿನ ಮೈತ್ರಿ ಕಡಿದ ಬಲೂಚಿಸ್ತಾನದ JWP ವಿಶ್ವಾಸ ಮತಯಾಚನೆ ಬೆನ್ನಲ್ಲೇ ಇಮ್ರಾನ್ ಏಕಾಂಗಿ

ಇಸ್ಲಾಮಾಬಾದ್(ಮಾ.27): ಪಾಕಿಸ್ತಾನದ ಇಮ್ರಾನ್ ಖಾನ್(Imran Khan) ನೇತೃತ್ವದ ಸರ್ಕಾರ ಇದೀಗ ಪತನದ ಹಾದಿಯಲ್ಲಿದೆ. ಅವಿಶ್ವಾಸ ನಿರ್ಣಯ ಮಂಡಿಸಿದ ಪರಿಣಾಮ ಸಂಸತ್ತಿನಲ್ಲಿ ವಿಶ್ವಾಸ ಮತಯಾತನೆ ಮಾಡಬೇಕಾದ ಪರಿಸ್ಥಿತಿಯಲ್ಲಿ ಇಮ್ರಾನ್ ಸಿಲುಕಿದ್ದಾರೆ. ಇದರ ನಡುವೆ ಸ್ವಪಕ್ಷದವರೇ ಇಮ್ರಾನ್ ವಿರುದ್ಧ ತಿರುಗಿಬಿದ್ದಿದಾರೆ. ಇದೀಗ ಬಲೂಚಿಸ್ತಾನದ(Balochistan) ಜಮೂರಿ ವತನ್ ಪಾರ್ಟಿ(JWP) ಮೈತ್ರಿ ಮುರಿದುಕೊಂಡಿದೆ. ಇಷ್ಟೇ ಅಲ್ಲ ಇಮ್ರಾನ್ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿದೆ

ಪಾಕಿಸ್ತಾನದ(Pakistan) ಸಂಸತ್ತಿನಲ್ಲಿ ಸೋಮವಾರ(ಮಾ.28) ಇಮ್ರಾನ್ ಖಾನ್ ವಿಶ್ವಾಸ ಮತ ಯಾಚನೆ ಮಾಡುವ ಸಾಧ್ಯತೆ ಇದೆ. ಆದರೆ ಇದಕ್ಕಿಂತ ಮೊದಲೇ ಇಮ್ರಾನ್ ಖಾನ್ ರಾಜೀನಾಮೆ ನೀಡುವ ಸುದ್ದಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇಮ್ರಾನ್ ಖಾನ್ ಪ್ರಧಾನಿಯಾಗಲು ತೆಹ್ರಿಕ್ ಇ ಇನ್ಸಾಫ್ ಪಕ್ಷದ ಜೊತೆ ಮೈತ್ರಿಮಾಡಿಕೊಂಡಿದ್ದ ಬಲೂಚಿಸ್ತಾನದ ಜಮೂರಿ ವತನ್ ಪಾರ್ಟಿ ಶಹಜೈನ್ ಬುಗ್ತಿ ಮೈತ್ರಿ ಕಡಿದುಕೊಂಡಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಇಂದು ಪದತ್ಯಾಗ?: ಅವಿಶ್ವಾಸ ಜೊತೆ ಬಂಧನದ ಭೀತಿ!

ಇಮ್ರಾನ್ ಸರ್ಕಾರದಲ್ಲಿ ಶಹಜೈನ್ ಬುಗ್ತಿ ಬಲೂಚಿಸ್ತಾನದಲ್ಲಿ ಸೌಹಾರ್ದತೆ ಹಾಗೂ ಸಮನ್ವಯಕ್ಕಾಗಿ ಪ್ರಧಾನ ಮಂತ್ರಿಯ ವಿಶೇಷ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇಮ್ರಾನ್ ವಿರುದ್ಧ ಸಿಡಿದೆದ್ದಿರುವ ಶಹಜೈನ್ ಬುಗ್ತಿ ಮೈತ್ರಿ ಮುರಿದು, ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ ಪಕ್ಷ ಸೇರಿಕೊಂಡಿದ್ದಾರೆ. ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ ಸದ್ಯ ಇಮ್ರಾನ್ ಖಾನ್ ವಿರುದ್ಧ ಹೋರಾಟ ಮಾಡುತ್ತಿದೆ. 

ಶಹಜೈನ್ ಬುಗ್ತಿ ಬಲೂಚಿಸ್ತಾನ ಪ್ರಾಂತ್ಯದ ಪ್ರಮುಖ ನಾಯಕ. ಶಹಜೈನ್ ಬುಗ್ತಿ ಬಲೂಚಿಸ್ತಾನದ ಅತ್ಯಂತ ಪ್ರಭಾವಿ ನಾಯಕ ಹಾಗೂ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ಅಕ್ಬರ್ ಬುಗ್ತಿಯ ಮೊಮ್ಮಗ. 2006ರಲ್ಲಿ ಅಕ್ಬರ್ ಬುಗ್ತಿಯನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿತ್ತು. ಪಾಕಿಸ್ತಾನ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಮತ್ತೊಂದು ಸಂಕಷ್ಠ, 50 ಸಚಿವರು ನಾಪತ್ತೆ!

ಶುಕ್ರವಾರ(ಮಾ.25) ರಂದು ನಡೆಯಬೇಕಿದ್ದ ವಿಶ್ವಾಸ ಮತಯಾಚನೆ ಕೆಲ ಕಾರಣಗಳಿಂದ ಮುಂದೂಡಲಾಗಿದೆ. ಶುಕ್ರವಾರ ಕರೆದಿದ್ದ ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿ ಕಲಾಪವನ್ನು ದಿಢೀರ್ ಸೋಮವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ಸೋಮವಾರ ಇಮ್ರಾನ್ ಖಾನ್ ವಿಶ್ವಾಸ ಮತ ಯಾತನೆ ಮಾಡುವ ಸಾಧ್ಯತೆ ಇದೆ. ಆದರೆ ಇಂದು ಸಂಜೆ ಆಯೋಜಿಸಿರುವ ರ್ಯಾಲಿಯಲ್ಲಿ ಇಮ್ರಾನ್ ಖಾನ್ ರಾಜೀನಾಮೆ ಘೋಷಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ಏಕಾಂಗಿಯಾಗಿರುವ ಇಮ್ರಾನ್ ಖಾನ್ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಧುಮಕಲು ರೆಡಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇದರ ನಡುವೆ ಇಮ್ರಾನ್ ಖಾನ್ ಸುಪ್ರೀಂ ಕೋರ್ಟ್‌ನಿಂದಲೂ ಚೀಮಾರಿ ಹಾಕಿಸಿಕೊಂಡಿದ್ದಾರೆ. ಮಿಲಿಟರಿ ಕ್ಯಾಂಪ್‌ ಮೇಲೆ ದಾಳಿ ಮಾಡಿದ ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸದಿದ್ದರೆ ಪ್ರಧಾನಿ ಇಮ್ರಾನ್‌ ಖಾನ್‌ಗೆ ಸಮನ್ಸ್‌ ನೀಡುವುದಾಗಿ ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದೆ. 2019ರಲ್ಲಿ ಆಫ್ಘನ್‌ ಗಡಿಯಲ್ಲಿರುವ ಪಾಕಿಸ್ತಾನ ಸೇನಾ ಕ್ಯಾಂಪ್‌ ಮೇಲೆ ದಾಳಿ ಮಾಡಿದ ಮಾಡಿದ ಆರೋಪದ ಮೇಲೆ ಆರಿಫ್‌ ಗುಲ್‌ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. 

ಪಾಕಿಸ್ತಾನದ ಹಾಲಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಸಂಘರ್ಷದಲ್ಲಿ ತೊಡಗಿರುವ ಪಾಕಿಸ್ತಾನ ಸೇನೆ, ಅತಿ ಹೆಚ್ಚು ಕಾಲ ದೇಶದ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ಅವರಿಗೆ ಮಣೆ ಹಾಕಿದೆ.ಐಎಸ್‌ಐಗೆ ನೂತನ ಮುಖ್ಯಸ್ಥರನ್ನು ನೇಮಿಸುವ ವಿಚಾರದಲ್ಲಿ ಇಮ್ರಾನ್‌ ಮತ್ತು ಸೇನಾಪಡೆಯ ಮುಖ್ಯಸ್ಥರ ನಡುವೆ ನಡುವಿನ ಘರ್ಷಣೆ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ‘ರಾಜೀನಾಮೆ ನೀಡಿ, ಇಲ್ಲದಿದ್ದರೆ ನಾವೇ ಇಳಿಸುತ್ತೇವೆ’ ಎಂದು ಸೇನೆಯು ಇಮ್ರಾನ್‌ಗೆ ತಾಕೀತು ಮಾಡಿದೆ ಎಂದು ವರದಿಗಳು ಹೇಳಿದ್ದವು. ಇದರ ನಡುವೆಯೇ 2 ವರ್ಷದಿಂದ ಲಂಡನ್‌ನಲ್ಲಿರುವ ನವಾಜ್‌ ಷರೀಫ್‌ಗೆ ದೇಶಕ್ಕೆ ಮರಳಲು ಸೇನೆ ಆಹ್ವಾನಿಸಿದೆ.