ಶ್ರೀಲಂಕಾ ವಿದ್ಯಮಾನಗಳಿಂದ ನಾವು ಕಲಿಯಬೇಕಾಗಿರುವ ಪಾಠಗಳು?

ಜನಕ್ಕೆ ಎಲ್ಲವನ್ನೂ ಫ್ರೀ ಕೊಟ್ಟು ದಿವಾಳಿಯಾಯ್ತಾ ಸ್ವರ್ಣಲಂಕೆ?

ಒಂದು ಕೆಜಿ ಅಕ್ಕಿ, ಅಡುಗೆ ಎಣ್ಣೆ ಯಾವುದರ ದರವೂ ಕೈಗೆ ಸಿಗುತ್ತಿಲ್ಲ

ಶ್ರೀಲಂಕಾ ಜನರ ಜೇಬಿಗೆ ಬಿತ್ತು ಬೆಂಕಿ

Share this Video
  • FB
  • Linkdin
  • Whatsapp

ಬೆಂಗಳೂರು (ಏ. 6): ಸರ್ಕಾರ ನೀಡುವ ಉಚಿತ ಭಾಗ್ಯಗಳು ಹೆಚ್ಚಿನ ದಿನ ಇದ್ದಷ್ಟು ಸಹಾಯಕ್ಕಿಂತ ಅಪಾಯವೇ ಜಾಸ್ತಿ ಅನ್ನೋದಕ್ಕೆ ಶ್ರೀಲಂಕಾ (Sri Lanka) ನಮ್ಮೆದುರಿನ ಉದಾಹರಣೆಯಾಗಿ ನಿಂತಿದೆ. ಶ್ರೀಲಂಕಾದ ಸ್ಪಷ್ಟ ಉದಾಹರಣೆಯೊಂದಿಗೆ ಭಾರತದಲ್ಲೂ (India) ಕೆಲ ರಾಜ್ಯ ಸರ್ಕಾರಗಳು ನೀಡುತ್ತಿರುವ ಉಚಿತ ಭಾಗ್ಯಗಳಿಗೆ (Free Schemes) ಬ್ರೇಕ್ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಸಲಹೆ ನೀಡಲಾಗಿದೆ.

ಇದರ ನಡುವೆ ಇನ್ಮುಂದೆ ಫ್ರೀ ಸ್ಕೀಮ್ ಗಳಿಗೆ ಮೋದಿ ಅಂಕುಶ ಇಡಲಿದ್ದಾರೆಯೇ ಎನ್ನುವ ಅನುಮಾನಗಳು ಕಾಡತೊಡಗಿವೆ. ಇದರ ನಡುವೆ ಲಂಕನ್ನರ ರೋಷಾಗ್ನಿ ಬೀದಿ ಬೀದಿಯಲ್ಲಿ ಉರಿಯುತ್ತಿದೆ. ಲಂಕಾದ ಪ್ರಮುಖ ಮಹಾನಗರಗಳಲ್ಲೂ ದಿನಕ್ಕೆ ಕೇವಲ 10 ಗಂಟೆ ಮಾತ್ರವೇ ವಿದ್ಯುತ್ ಉರಿಯುತ್ತೆ. ಅಂಥದ್ದೊಂದು ಸಂಕಷ್ಟದ ಆರ್ಥಿಕ ಸ್ಥಿತಿಯಲ್ಲಿ ಶ್ರೀಲಂಕಾ ದೇಶವಿದೆ. 

Sri Lanka Economic Crisis ಅಧ್ಯಕ್ಷರ ಮನೆಯ ಮುಂದೆ ಹಿಂಸಾತ್ಮಕ ಪ್ರತಿಭಟನೆ, ದೇಶದಲ್ಲಿ ಡೀಸೆಲ್ ಖಾಲಿ!

ಗ್ಯಾಸ್ ಸಿಲಿಂಡರ್ ಗಳಿಗೆ ಶ್ರೀಲಂಕಾದಲ್ಲಿ ವಿಪರೀತ ಎನ್ನುವಷ್ಟು ಬರವಿದೆ. ಇನ್ನು ಪೆಟ್ರೋಲ್ ಬಂಕ್ ಗಳಲ್ಲಿ ಸೇನೆಯನ್ನು ಜಮಾವಣೆ ಮಾಡಿ ಇಂಧನವನ್ನು ವಿತರಣೆ ಮಾಡಲಾಗುತ್ತಿದೆ. ತಮ್ಮನ್ನು ಇಂಥ ದಾರುಣ ಸ್ಥಿತಿಗೆ ತಂದ ಲಂಕಾದ ಸರ್ಕಾರದ ವಿರುದ್ಧವೇ ಜನ ಮುಗಿಬಿದ್ದಿದ್ದಾರೆ.

Related Video