Asianet Suvarna News Asianet Suvarna News

ಅಂತ್ಯ ಕಾಣಲಿದೆ 46 ವರ್ಷಗಳಿಂದ ತೇಲುತ್ತಿದ್ದ ಹಡಗು!

ಹಾಂಗ್ ಕಾಂಗ್‌ನ ಐಕಾನಿಕ್ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್ ಹಲವು ವರ್ಷಗಳಿಂದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು 1976 ರಲ್ಲಿ ಪ್ರಾರಂಭಿಸಲಾಗಿದೆ. ಇದನ್ನು ಕ್ಯಾಂಟೋನೀಸ್ ಆಹಾರಕ್ಕೆ ಬೆಸ್ಟ್‌ ಪ್ಲೇಸ್‌ ಎಂದೇ ಫೇಮಸ್​ ಆಗಿದೆ. ಇದೀಗ ವಿಶ್ವದ ಏಕೈಕ ಫ್ಲೋಟಿಂಗ್ ರೆಸ್ಟೋರೆಂಟ್ ಅಂತ್ಯ ಕಾಣ್ತಿದೆ ಅಂದ್ರೆ ನಂಬ್ತಿರಾ..?

ಹಾಂಕಾಂಗ್ (ಜೂನ್ 18):  ಹಾಂಕಾಂಗ್‌ನ ಐಕಾನಿಕ್ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್ ಅನ್ನು (Jumbo Floating Restaurant) 46 ವರ್ಷಗಳ ನಂತರ ಅದರ ಅಬರ್‌ಡೀನ್ ಬಂದರಿನಿಂದ (aberdeen harbor) ಹೊರತೆಗೆಯುವ ನಿರ್ಧಾರ ಮಾಡಲಾಗಿದೆ. ಈ ರೆಸ್ಟೋರೆಂಟ್‌ಅನ್ನು ಚೀನೀ ಸಾಮ್ರಾಜ್ಯಶಾಹಿ ಅರಮನೆಯಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಕ್ಯಾಂಟೋನೀಸ್ ಮತ್ತು ಸಮುದ್ರಾಹಾರ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ. ಕೋವಿಡ್ (Covid 19) ಸಾಂಕ್ರಾಮಿಕದ ಕಾರಣದಿಂದಾಗಿ 2020ರಲ್ಲಿ ಮುಚ್ಚಲ್ಪಟ್ಟಿದ್ದ ಈ ರೆಸ್ಟೋರೆಂಟ್ ಬಳಿಕ ತೆರೆದಿರಲಿಲ್ಲ. ಹಾಂಕಾಂಗ್‌ನ ಹೊರಗೆ ಈ ರೆಸ್ಟೋರೆಂಟ್ ಅನ್ನು ಸ್ಥಳಾಂತರ ಮಾಡಲಾಗಿದ್ದು, ಎಲ್ಲಿ ಹೋಗಿ ನಿಲ್ಲಲಿದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

ಈ ತೇಲುವ ರೆಸ್ಟೋರೆಂಟ್ ಹಲವು ವರ್ಷಗಳಿಂದ ಹಾಂಗ್ ಕಾಂಗ್‌ನಲ್ಲಿ ಐತಿಹಾಸಿಕ ಮತ್ತು ವಿಶಿಷ್ಟ ಸಂಸ್ಥೆಯಾಗಿ ಕೆಲಸ ಮಾಡಿದೆ. ಈ ರೆಸ್ಟೋರೆಂಟ್‌ಗೆ ಕ್ವೀನ್ ಎಲಿಜಬೆತ್ ಮತ್ತು ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಕ್ರೂಸ್‌ನಂತಹ ಪ್ರಸಿದ್ಧ ವ್ಯಕ್ತಿಗಳನ್ನು ಆಗಮಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಆದರೆ ಜಗತ್ತಿಗೆ ಕೊರೊನಾ ವಕ್ಕರಿಸಿದ ಬಳಿಕ ಈ ರೆಸ್ಟೋರೆಂಟ್‌ನ್ನು ಮುಚ್ಚಲಾಗಿತ್ತು. ಅಂದಿನಿಂದ ಇದು ತೆರೆದಿಲ್ಲ. ಮುಂದೆ ತೆರೆಯುವ ಲಕ್ಷಣವೂ ಕಾಣಿಸ್ತಿಲ್ಲ

ಇವರೇ ನೋಡಿ ಸೆಂಚುರಿ ಸ್ಟಾರ್ ಶಿವಣ್ಣನ ಫೇವರಿಟ್ ವಿಲನ್!

ಈ ರೆಸ್ಟೋರೆಂಟ್ ಅನ್ನು ನಿರ್ವಹಿಸುವ ಕಂಪನಿಯಾದ ಅಬರ್ಡೀನ್ ರೆಸ್ಟೋರೆಂಟ್ ಎಂಟರ್‌ಪ್ರೈಸಸ್, ವ್ಯವಹಾರವನ್ನು ನಡೆಸುವ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದೆ. ರೆಸ್ಟೊರೆಂಟ್‌ನಲ್ಲಿ ನಿರಂತರವಾಗಿ ಹಣ ಹೂಡುವುದು ಅವರಿಗೆ ಅಸಾಧ್ಯವಾಗುತ್ತಿತ್ತು. ಕಂಪನಿಯು ಪ್ರತಿ ವರ್ಷ ನಿರ್ವಹಣಾ ಮತ್ತು ತಪಾಸಣೆ ವೆಚ್ಚಗಳಿಗಾಗಿ ಲಕ್ಷಾಂತರ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ. ಆದರೆ ಗಳಿಸಿದ ಆದಾಯಕ್ಕಿಂತ ಖರ್ಚಾದ ವೆಚ್ಚವೇ ಹೆಚ್ಚು ಎಂದು ಅವರು ಹೇಳುತ್ತಾರೆ. 

Video Top Stories