
ಹಿಂದೂ ದೇವಾಲಯಕ್ಕಾಗಿ ಎರಡು ಬೌದ್ಧ ರಾಷ್ಟ್ರ ಗಳ ನಡುವೆ ಯುದ್ಧ; ಭಯಾನಕ ಸಂಘರ್ಷದ ಜ್ವಾಲೆಯ ಕಥೆ
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಶತಮಾನಗಳಷ್ಟು ಹಳೆಯದಾದ ದೇವಾಲಯಕ್ಕಾಗಿ ಯುದ್ಧ ನಡೆಯುತ್ತಿದೆ. ಈ ಯುದ್ಧದ ಹಿನ್ನೆಲೆ, ಪರಿಣಾಮಗಳು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಲಾಗಿದೆ.
ನಿನ್ನೆ ಮೊನ್ನೆ ತನಕ, ಥೈಲ್ಯಾಂಡ್, ಕಾಂಬೋಡಿಯಾ ಅಂದ್ರೆ, ಟೂರಿಸ್ಟ್ ಪ್ಲೇಸು, ಸೇಫೆಟ್ಟು ಪ್ಲೇಸು ಅಂತ ಮಾತಾಡ್ಕೊಳ್ತಾ ಇದ್ವಿ. ಆದ್ರೆ ಒಂದು ರಾತ್ರಿ ಕಳೆಯೋದ್ರೊಳಗೆ, ಆ ಎರಡು ದೇಶಗಳ ಮಧ್ಯೆಯೇ ಯುದ್ಧ ಶುರುವಾಗಿಬಿಟ್ಟಿದೆ.. ಅಂದ ಹಾಗೆ, ಈ ಯುದ್ಧ ನಿನ್ನೆ ಶುರುವಾಗಿ, ಇವತ್ತು ಮುಂದುವರಿತಿರೋ ಯುದ್ಧ ಅಲ್ಲ.. ಎಂದೋ ಆದ ಗಾಯ, ಇಂದು ಕಾಡ್ತಾ ಇದೆ.. ಇದರ ಹಿಂದಿರೋ ಅಸಲಿ ಕತೆ, ಮುಂದೆ ಈ ಯುದ್ಧ ಸೃಷ್ಟಿಸಲಿರೋ ವಿಧ್ವಂಸಕತೆ, ಎರಡನ್ನೂ ತೋರಿಸ್ತೀವಿ ನೋಡಿ.