ರಷ್ಯಾ ರಾಜಧಾನಿಯಲ್ಲಿ ನಡೆಯಿತು ರಕ್ಕಸರ ಅಟ್ಟಹಾಸ: ಉಗ್ರರ ಕ್ರೂರ ಕೃತ್ಯಕ್ಕೆ ಹೇಗಿರಲಿದೆ ಪುಟಿನ್ ಪಡೆಯ ಪ್ರತೀಕಾರ?

ರಷ್ಯಾ ರಾಜಧಾನಿಯಲ್ಲಿ ನಡೆಯಿತು ರಕ್ಕಸರ ಅಟ್ಟಹಾಸ ಆ ದಾರುಣ ದಾಳಿ ನೆನಪಿಸಿದ್ದೇಕೆ ಮುಂಬೈ ರಕ್ತಪಾತ..?  ಐಸಿಸ್-ಕೆ ಅಸುರರ ಕ್ರೂರ ದಾಳಿ 60ಕ್ಕೂ ಅಧಿಕ ಬಲಿ ಪಡೆದಿದೆ. ಇದಕ್ಕೆ ಹೇಗೆ ಪ್ರತೀಕಾರ ತೆಗೆದುಕೊಳ್ಳಲಿದೆ ಪುಟಿನ್ ಪಡೆ?
 

First Published Mar 24, 2024, 12:15 PM IST | Last Updated Mar 24, 2024, 12:15 PM IST

ರಷ್ಯಾ ರಾಜಧಾನಿಯಲ್ಲಿ ನಡೆಯಿತು ರಕ್ಕಸರ ಅಟ್ಟಹಾಸ ಆ ದಾರುಣ ದಾಳಿ ನೆನಪಿಸಿದ್ದೇಕೆ ಮುಂಬೈ ರಕ್ತಪಾತ..?  ಐಸಿಸ್-ಕೆ ಅಸುರರ ಕ್ರೂರ ದಾಳಿ 60ಕ್ಕೂ ಅಧಿಕ ಬಲಿ ಪಡೆದಿದೆ. ಇದಕ್ಕೆ ಹೇಗೆ ಪ್ರತೀಕಾರ ತೆಗೆದುಕೊಳ್ಳಲಿದೆ ಪುಟಿನ್ ಪಡೆ? ಅಮೆರಿಕಾ ಕೊಟ್ಟ ವಾರ್ನಿಂಗ್ ಕಡೆಗಣಿಸಿದ್ದೇ ತಪ್ಪಾಯ್ತಾ. ಅಥವಾ ಅಮೆರಿಕಾ ಕರಿನೆರಳು ಕಾಡ್ತಾ ಇದ್ಯಾ?  ಬೆಚ್ಚಿಬೀಳಿಸೋ ಭಯಾನಕ ದೃಶ್ಯಗಳು ಮೂಲಕ ಎದೆನಡುಗಿಸೋ ಭೀಕರ ದಾಳಿಯ ಅಸಲಿಯತ್ತು ನಿಮ್ಮ ಮುಂದೆ ತೆರೆದಿಡೋದೇ ಇವತ್ತಿನ ಸುವರ್ಣ ಫೋಕಸ್, ಐಸಿಸ್-ಕೆ ರಾಕ್ಷಸ ದಾಳಿ. ದಾಳಿ ನಡೆಯುತ್ತೆ ಅನ್ನೋ ಸುಳಿವು ರಷ್ಯಾಗೆ ಮೊದಲೇ ಗೊತ್ತಿತ್ತಾ..? 

ಗೊತ್ತಿದ್ದೂ ಗೊತ್ತಿದ್ದೂ ಇಂಥಾ ಅನಾಹುತವಾಗೋಕೆ ಅವಕಾಶ ಮಾಡಿಕೊಟ್ರಾ? ಅಸಲಿಗೆ ರಷ್ಯಾದಲ್ಲಿ ಆಗಿದ್ದೇನೆ..?  ಇದರ ಬಗ್ಗೆ ಅಮೆರಿಕಾ ಹೇಳ್ತಾ ಇರೋದೇನು? ರಷ್ಯಾದ ಮೇಲೆ ಭೀಭತ್ಸ ದಾಳಿ ನಡೆದಿದೆ. ಆದ್ರೆ ಇದರ ಬಗ್ಗೆ ರಷ್ಯಾಗೆ ಅಮೆರಿಕಾ ಮೊದಲೆ ಸುಳಿವೂ ಸಹ ನೀಡಿತ್ತು. ಅದಾದ್ಮೇಲೂ ನೂರಾರು ಜನ ಪ್ರಾಣ ಕಳ್ಕೊಬೇಕಾಯ್ತು. ಅಂದ ಹಾಗೆ ಈ ಕತೆ ಇಷ್ಟಕ್ಕೇ ಮುಗಿಯೋದಿಲ್ಲ.. ರಷ್ಯಾ ತನ್ನ ಪ್ರತೀಕಾರಕ್ಕೆ ಹಪಹಪಿಸ್ತಾ ಇದೆ. ಇದರ ಪರಿಣಾಮ ಏನಾಗಲಿದೆ? ರಷ್ಯಾದ ದಾಳಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಐಸಿಸ್ ಉಗ್ರರ ಕ್ರೌರ್ಯ, ಇಷ್ಟಕ್ಕೇ ತಣ್ಣಗಾಗುತ್ತೋ, ಇದನ್ನೂ ಮೀರಿದ ಆಪತ್ತು ಎದುರಾಗುತ್ತೋ ಅನ್ನೋ ಆತಂಕ ಹೆಚ್ಚಾಗಿದೆ.